ETV Bharat / state

ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಸಾಲ ವಸೂಲಿ ವಿಳಂಬಕ್ಕೆ ಹೈಕೋರ್ಟ್ ಅಸಮಾಧಾನ

ಸಾಲ ವಸೂಲಿಯಲ್ಲಿ ವಿಳಂಬವೇಕೆ? ಸರ್ಕಾರ ಹಾಗೂ ಇತರೆ ಪ್ರಾಧಿಕಾರಗಳು ನೇಮಿಸಿರುವ ಆಡಿಟ್ ಈವರೆಗೂ ಪೂರ್ಣಗೊಂಡಿಲ್ಲವೇಕೆ ಎಂದು ಹೈಕೋರಟ್ ಅಸಮಾಧಾನ ವ್ಯಕ್ತಪಡಿಸಿತು.

highcourt
highcourt
author img

By

Published : Nov 2, 2020, 11:25 PM IST

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಸಂಬಂಧ ನೇಮಕವಾಗಿರುವ ಆಡಳಿತಾಧಿಕಾರಿ ಸಾಲ ವಸೂಲಿಯಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬ್ಯಾಂಕ್ ಹಗರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವಂತ ಕೋರಿ ಬಸನಗುಡಿಯ ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಬೇಸರ ವ್ಯಕ್ತಪಡಿಸಿದೆ.

ಇಂದು ನಡೆದ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಆಡಳಿತಾಧಿಕಾರಿಗಳು ಈವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಸಾಲ ವಸೂಲಿ ಕುರಿತ ವರದಿಯನ್ನು ಸಲ್ಲಿಸಿದರು.

ವರದಿ ಪರಿಶೀಲಿಸಿದ ಪೀಠ, ಬ್ಯಾಂಕ್ 1450 ಕೋಟಿ ರೂಪಾಯಿ ಸಾಲ ನೀಡಿದೆ. ಆದರೆ, ಆಡಳಿತಾಧಿಕಾರಿ ಈವರೆಗೂ ಕೇವಲ 15.88 ಕೋಟಿ ರೂಪಾಯಿ ಮಾತ್ರ ವಸೂಲಿ ಮಾಡಿದ್ದಾರೆ. ಸಾಲ ವಸೂಲಿಯಲ್ಲಿ ವಿಳಂಬವೇಕೆ? ಸರ್ಕಾರ ಹಾಗೂ ಇತರೆ ಪ್ರಾಧಿಕಾರಗಳು ನೇಮಿಸಿರುವ ಆಡಿಟ್ ಈವರೆಗೂ ಪೂರ್ಣಗೊಂಡಿಲ್ಲವೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಬ್ಯಾಂಕ್ ನಿರ್ವಹಣೆಗೆ ಆಡಳಿತಾಧಿಕಾರಿ ಸಲಹಾ ಸಮಿತಿ ರಚಿಸಿದ್ದಾರೆ ಎಂಬ ವಿಚಾರಕ್ಕೆ ಸ್ಪಷ್ಟನೆ ಕೇಳಿದ್ದರೂ ಈವರೆಗೆ ಸರ್ಕಾರ ಮಾಹಿತಿ ನೀಡಿಲ್ಲ. ಅವರು ಯಾವ ಕಾನೂನು ಅಡಿ ಈ ಸಮಿತಿ ರಚಿಸಿದ್ದಾರೆ ಎಂದು ಕೋರಟ್ ಪ್ರಶ್ನಿಸಿತು.

ಅಲ್ಲದೇ, ಸೂಕ್ತ ಆಡಳಿತಾಧಿಕಾರಿ ನೇಮಿಸುವುದು ಸೇರಿದಂತೆ ಹೈಕೋರ್ಟ್ ಈವರೆಗೆ ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ, ಸರ್ಕಾರ ಅನುಪಾಲನಾ ವರದಿಯನ್ನು ಸಲ್ಲಿಸಿಲ್ಲ. ಹೀಗಾಗಿ ನವೆಂಬರ್ 7ರೊಳಗೆ ಕೋರ್ಟ್ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಎಲ್ಲ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತು.

ಇದೇ ವೇಳೆ ಆರ್‌ಬಿಐ ಪರ ವಕೀಲರು, ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತಕ್ಕೆ ಬ್ಯಾಂಕಿಂಗ್ ತಜ್ಞರನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಕುರಿತು ಅರ್ಹ ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.