ETV Bharat / state

ಅನಗತ್ಯ ದಾವೆಗಳು ಸೃಷ್ಟಿಸಲು ಸರ್ಕಾರವೇ ಕಾರಣವಾಗುತ್ತಿದೆ: ಹೈಕೋರ್ಟ್ ಕಿಡಿ

ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಎಂ.ರಹಮತುಲ್ಲಾ ವಿರುದ್ಧದ ಪ್ರಕರಣದಲ್ಲಿ ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ​ವಜಾಗೊಳಿಸಿದ ಹೈಕೋರ್ಟ್.

author img

By

Published : Nov 25, 2022, 9:19 PM IST

KN_BNG
ಹೈಕೋರ್ಟ್

ಬೆಂಗಳೂರು: ಅನಗತ್ಯ ಹಾಗೂ ಕ್ಷುಲ್ಲಕ ದಾವೆಗಳನ್ನು ಹೂಡುವ ಮೂಲಕ ರಾಜ್ಯ ಸರ್ಕಾರ ವ್ಯಾಜ್ಯಗಳು ಉಂಟಾಗುವುದಕ್ಕೆ ಕಾರಣವಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಅಂತಹ ವ್ಯಾಜ್ಯಗಳನ್ನು ನಿಯಂತ್ರಿಸದಿದ್ದರೆ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಎಂ.ರಹಮತುಲ್ಲಾ ವಿರುದ್ಧದ ಪ್ರಕರಣದಲ್ಲಿ ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಜಿ.ನರೇಂದರ್‌ ಮತ್ತು ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಅಲ್ಲದೇ ಅಂತಹ ದಂಡವನ್ನು ಯಾವ ಅಧಿಕಾರಿಗಳು ವ್ಯಾಜ್ಯಕ್ಕೆ ಕಾರಣವಾಗುತ್ತಾರೋ ಅಂತಹವರಿಂದಲೇ ವಸೂಲು ಮಾಡಲು ಸೂಚನೆ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಕಾನೂನು ಇಲಾಖೆ ಆದೇಶಕ್ಕೆ ವಿರುದ್ಧವಾಗಿ ಗೃಹ ಇಲಾಖೆ ಪ್ರಕರಣ ದಾಖಲಿಸಿದೆ. ಆನಂತರ ಮೇಲ್ಮನವಿ ಬಳಿಕ ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದೆ ಮತ್ತು ಇದಕ್ಕೆ ಇಲಾಖೆಯ ಮುಖ್ಯಸ್ಥರು ಲಿಖಿತ ರೂಪದಲ್ಲಿ ಕಾರಣಗಳನ್ನು ದಾಖಲಿಸಬೇಕಿತ್ತು.

ಆ ರೀತಿಯಲ್ಲಿ ಸಲ್ಲಿಸಿದ್ದ ಅರ್ಜಿ/ಮೇಲ್ಮನವಿಯನ್ನು ಒಂದು ವೇಳೆ ನ್ಯಾಯಾಲಯ ಪುರಸ್ಕರಿಸದಿದ್ದರೆ ಅದಕ್ಕೆ ತಗುಲುವ ವೆಚ್ಚವನ್ನು ಸಂಬಂಧಿಸಿದ ಅಧಿಕಾರಿಗಳ ವೇತನದಿಂದ ವಸೂಲು ಮಾಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವ್ಯಾಜ್ಯ ಪರಿಹಾರ ನೀತಿ 2021 ಅನ್ನು ಕಾನೂನು ಇಲಾಖೆಯು ರೂಪಿಸಿದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅನಗತ್ಯ ಅರ್ಜಿಗಳು, ಮೇಲ್ಮನವಿಗಳು ಇತ್ಯಾದಿಗಳನ್ನು ಭರ್ತಿ ಮಾಡುವುದನ್ನು ತಪ್ಪಿಸಲು ನೀತಿಯ ಬಗ್ಗೆ ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ರಾಜ್ಯದಲ್ಲಿ ವಿಭಾಗಾವಾರು ಕಾರ್ಯಾಗಾರಗಳನ್ನು ನಡೆಸುವಂತೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಅಲ್ಲದೇ, ಅನಗತ್ಯ ದಾವೆಗಳನ್ನು ತಪ್ಪಿಸಲು ಕ್ರಮಗಳು ಸಿದ್ಧಪಡಿಸಿದ ನೀತಿ ದಾಖಲೆಯನ್ನು ಎಲ್ಲ ಇಲಾಖೆಗಳಿಗೆ ರವಾನಿಸಲು ಕ್ರಮಕೈಗೊಳ್ಳುವಂತೆ ಪೀಠವು ರಾಜ್ಯ ಅಡ್ವೊಕೇಟ್ ಜನರಲ್ ಕಚೇರಿಗೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ ಏನು? : ರಹಮತುಲ್ಲಾ ನಿವೃತ್ತಿಯಾಗುವ ಮೊದಲು ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಅವರ ವಿರುದ್ಧ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ದೂರು ಬಂದಿತ್ತು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 1978ರ ಮೇ 29 ಹಾಗೂ 2014ರ ನ.29 ರ ನಡುವೆ ಅವರು ತಮ್ಮ ಆದಾಯಕ್ಕೂ ಮೀರಿ 23.8 ಲಕ್ಷ ಆಸ್ತಿ ಹೊಂದಿದ್ದರು ಎಂದು ವರದಿ ನೀಡಿತ್ತು.

ಆದರೂ ಅವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಿತ್ತು. ಆದರೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ ಅವರ ವಿರುದ್ಧದ ಶಿಸ್ತು ಕ್ರಮಗಳನ್ನು ರದ್ದುಗೊಳಿಸಿತ್ತು. ಹೈಕೋರ್ಟ್‌ನಲ್ಲಿ ಕೆಎಸ್‌ಎಟಿಯ ತೀರ್ಪನ್ನು ಪ್ರಶ್ನಿಸದಂತೆ ಕಾನೂನು ಇಲಾಖೆ ಸೂಚಿಸಿದ್ದರೂ, ಗೃಹ ಇಲಾಖೆಯು ಮೇಲ್ಮನವಿಯನ್ನು ಸಲ್ಲಿಸಿತ್ತು.

ಕಸದ ತೊಟ್ಟಿಯಂತೆ ಪರಿಗಣಿಸಬೇಡಿ: ಅಷ್ಟೇ ಅಲ್ಲದೆ, ಅನಗತ್ಯ ವ್ಯಾಜ್ಯಗಳನ್ನು ಸಲ್ಲಿಸುವ ಪ್ರವೃತ್ತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ಕೋರ್ಟ್‌ಗಳನ್ನು ಕಸದ ತೊಟ್ಟಿಗಳಂತೆ ಪರಿಗಣಿಸಬೇಡಿ ಎಂದು ಹೈಕೋರ್ಟ್​ ಚಾಟಿ ಬೀಸಿದೆ. ನ್ಯಾಯ ವಿತರಣಾ ವ್ಯವಸ್ಥೆಯ ಬಗ್ಗೆ ಸರ್ಕಾರವೂ ಜವಾಬ್ದಾರವಾಗಿರಬೇಕು ಮತ್ತು ಅದು ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಅನುದಾನ ರಹಿತ ಶಾಲೆಗಳ ಸ್ವಂತ ಪಠ್ಯ ಪುಸ್ತಕಕ್ಕೆ ಅನುಮತಿ: ಕುಸ್ಮ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿಟ್ಟ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.