ETV Bharat / state

ಪತ್ನಿ ತ್ಯಜಿಸಿ 2ನೇ ಮದುವೆಯಾದ್ರೂ ತಂದೆಗೆ ಮಗಳ ಭೇಟಿ ಮಾಡುವ ಹಕ್ಕಿದೆ: ಹೈಕೋರ್ಟ್ - ಹೈಕೋರ್ಟ್​ನಲ್ಲಿ ವಿಚ್ಛೇದನ ಪ್ರಕರಣ

ವಿಚ್ಛೇದಿತ ಪತಿಗೆ ಮಗಳನ್ನು ಭೇಟಿ ಮಾಡಲು ಅವಕಾಶ ನೀಡಬಾರದು ಎಂಬ ಮಹಿಳೆಯ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿತು.

high-court-says-divorced-person-have-right-to-meet-daughter
ಪತ್ನಿ ತ್ಯಜಿಸಿ ಎರಡನೇ ಮದುವೆ ಆದ್ರೂ ತಂದೆಗೆ ಮಗಳ ಭೇಟಿ ಮಾಡುವ ಹಕ್ಕಿದೆ : ಹೈಕೋರ್ಟ್
author img

By

Published : May 5, 2023, 7:00 AM IST

ಬೆಂಗಳೂರು : ಗಂಡ ತನ್ನನ್ನು ತ್ಯಜಿಸಿದ ನಂತರ ಎರಡು ಮದುವೆಯಾಗಿದ್ದು, ಅಪ್ರಾಪ್ತ ಮಗಳನ್ನು ನೋಡಲು ಒಮ್ಮೆಯೂ ಬರಲಿಲ್ಲ. ಅಂತಹವರಿಗೆ ಮಗಳನ್ನು ಭೇಟಿ ಮಾಡುವ ಹಕ್ಕು ನೀಡಬಾರದು ಎಂಬ ಮಹಿಳೆಯ ವಾದವನ್ನು ಒಪ್ಪದ ಹೈಕೋರ್ಟ್, ಮಗಳನ್ನು ಭೇಟಿ ಮಾಡಲು ತಂದೆಗೆ ಅನುಮತಿ ನೀಡಿ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ. ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿತು.

ಮೇಲ್ಮನವಿದಾರೆಯ ಪತಿ ಆಕೆಯಿಂದ ವಿಚ್ಛೇದನ ಪಡೆದ ನಂತರ ಎರಡು ಮದುವೆಯಾಗಿದ್ದಾರೆ. ವಿಚ್ಛೇದಿತ ಪತಿಯ ಎರಡನೇ ಪತ್ನಿಯು ತನ್ನ ಮೊದಲನೇ ಪತಿಯಿಂದ ಒಂದು ಮಗುವನ್ನು ಹೊಂದಿದ್ದಾರೆ. ಆಕೆಯ ಮಗ ಸಹ ವಿಚ್ಛೇದಿತ ಪತಿಯ ಸುಪರ್ದಿಯಲ್ಲಿದ್ದಾನೆ. ಮೇಲ್ಮನವಿದಾರೆಯ ಅಪ್ರಾಪ್ತ ಮಗಳ ಭೇಟಿಯ ಹಕ್ಕನ್ನು ವಿಚ್ಛೇದಿತ ಪತಿಗೆ ದಯಪಾಲಿಸಿದರೆ, ಕ್ಷೇಮವಾಗಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಆತಂಕವನ್ನು ಪರಿಗಣಿಸಿಯೇ ಕೌಟುಂಬಿಕ ನ್ಯಾಯಾಲಯವು ಅಪ್ರಾಪ್ತ ಮಗಳ ಶಾಶ್ವತ ಸುಪರ್ದಿಯನ್ನು ತಾಯಿಗೆ ನೀಡಿ, ಕೇವಲ ಭೇಟಿಯ ಹಕ್ಕನ್ನು ತಂದೆಗೆ ನೀಡಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅಪ್ರಾಪ್ತ ಮಗಳ ಭೇಟಿಯ ಹಕ್ಕನ್ನು ಮೇಲ್ಮನವಿದಾರಳ ವಿಚ್ಛೇದಿತ ಪತಿಗೆ ಅನುಮತಿ ನೀಡಿದೆ.

ಜೊತೆಗೆ, ತಿಂಗಳಲ್ಲಿ ಎರಡು ಭಾನುವಾರದಂದು ಮಗಳನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭೇಟಿ ಮಾಡಬಹುದು. ಮೇಲ್ಮನವಿದಾರೆಯ ಮನೆಯಿಂದ ಮಗಳನ್ನು ಕರೆದುಕೊಂಡು ಹೋಗಬೇಕು ಮತ್ತು ವಾಪಸ್ ತಂದು ಬಿಡಬೇಕು. ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗುವಾಗ ಮೊದಲ ಮಗ ಜೊತೆಗಿರಬೇಕು. ಎಲ್ಲಾ ಖರ್ಚು ವೆಚ್ಚ ಮತ್ತು ಶಿಕ್ಷಣದ ಖರ್ಚುಗಳನ್ನು ಮೇಲ್ಮನವಿದಾರೆಗೆ ವರ್ಗಾವಣೆ ಮಾಡಬೇಕು. ಮಗಳನ್ನು ಸುರಕ್ಷತೆಯಿಂದ ನೋಡಿಕೊಳ್ಳಬೇಕು. ಸುಪರ್ದಿಯಲ್ಲಿರುವ ಸಂದರ್ಭದಲ್ಲಿ ಮಗಳನ್ನು ಬೇರೊಬ್ಬ ವ್ಯಕ್ತಿಯ ಜೊತೆಗೆ ಬಿಡಬಾರದು ಎಂದು ಷರತ್ತು ವಿಧಿಸಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿದೆ.

ಪ್ರಕರಣದ ಹಿನ್ನೆಲೆ: ಮೇಲ್ಮನವಿದಾರೆ ಮತ್ತು ಪ್ರತಿವಾದಿಯಾದ ವಿಚ್ಛೇದಿತ ಪತಿಯು 2001ರ ನವೆಂಬರ್​​ 14ರಂದು ಮದುವೆಯಾಗಿದ್ದರು. ಅವರಿಗೆ 2002ರ ಜುಲೈ 18ರಂದು ಪುತ್ರ, 2007ರ ಆಗಸ್ಟ್ 8ರಂದು ಪುತ್ರಿ ಜನಿಸಿದ್ದರು. ಕೆಲ ವರ್ಷಗಳ ನಂತರ ದಂಪತಿ ನಡುವಿನ ಸಂಬಂಧ ಹಳಸಿತ್ತು. ಮೇಲ್ಮನವಿದಾರೆಯು ಪರಿತ್ಯಾಗ ಮತ್ತು ಕ್ರೌರ್ಯ ಆಧಾರದ ಮೇಲೆ ವಿಚ್ಛೇದನ ಕೋರಿದ್ದರು. ದಕ್ಷಿಣ ಕನ್ನಡದ ವಿಚಾರಣಾ ನ್ಯಾಯಾಲಯವು 2010ರ ನವೆಂಬರ್​​ 23ರಂದು ದಂಪತಿಗೆ ವಿಚ್ಛೇದನ ಮಂಜೂರು ಮಾಡಿತ್ತು. ಮಗನನ್ನು ವಿಚ್ಛೇದಿತನ ಸುಪರ್ದಿಗೆ ನೀಡಲಾಗಿತ್ತು. ಬಳಿಕ ವಿಚ್ಛೇದಿತ ಪತಿ, ಅಪ್ರಾಪ್ತ ಮಗಳನ್ನು ತನ್ನ ಸುಪರ್ದಿಗೆ ನೀಡಬೇಕು ಮತ್ತು ತನ್ನನ್ನು ಆಕೆಯ ಪೋಷಕನಾಗಿ ನಿಯೋಜಿಸುವಂತೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಗೆ ಮೇಲ್ಮನವಿದಾರೆ ಆಕ್ಷೇಪಣೆ ಸಲ್ಲಿಸಿ, ಮೊದಲ ಮಗು (ಮಗ) ಈಗಾಗಲೇ ವಿಚ್ಛೇದಿತ ಪತಿಯ ಸುಪರ್ದಿಯಲ್ಲಿದೆ. ವಿಚ್ಛೇದನದ ಬಳಿಕ ಎರಡನೇ ಮದುವೆಯಾಗಿ ಪತ್ನಿಯೊಂದಿಗೆ ನೆಲೆಸಿದ್ದಾನೆ. ಎರಡನೇ ಮಗು ಹೆಣ್ಣು ಆಗಿರುವುದರಿಂದ ತನ್ನ ಬಳಿಯೇ ಇರುವಂತೆ ಆದೇಶಿಸಬೇಕು ಎಂದು ಕೋರಿದ್ದರು. ವಿಚ್ಛೇದಿತ ಪತಿಯ ಸುಪರ್ದಿಗೆ ಅಪ್ರಾಪ್ತ ಮಗಳನ್ನು ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ಮಗಳನ್ನು ಭೇಟಿ ಮಾಡುವ ಹಕ್ಕನ್ನು ಮಾತ್ರ ನೀಡಿತ್ತು.

ದಸರಾ ಮತ್ತು ಕ್ರಿಸ್ಮಸ್ ರಜೆಯ ಸಂದರ್ಭದಲ್ಲಿ ತಲಾ ಐದು ದಿನ, ಬೇಸಿಗೆ ರಜೆ ಸಂದರ್ಭದಲ್ಲಿ 15 ದಿನ ಮಗಳನ್ನು ಮೇಲ್ಮನವಿದಾರೆಯ ವಿಚ್ಛೇದಿತ ಪತಿ ಕರೆದುಕೊಂಡು ಹೋಗಬಹುದು. ಉಳಿದಂತೆ ಪ್ರತಿ ತಿಂಗಳ ಒಂದು ಭಾನುವಾರದಂದು ಮಗಳನ್ನು ಸಂಜೆ 3ರಿಂದ 6 ಗಂಟೆಯೊಳಗೆ ಭೇಟಿ ಮಾಡಲು ಅನುಮತಿ ನೀಡಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮೇಲ್ಮನವಿದಾರೆ ಹೈಕೋರ್ಟ್ ಮೊರೆ ಹೋಗಿದ್ದು, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿದ್ದರು.

ಇದನ್ನೂ ಓದಿ: ತಂದೆಯ ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.