ETV Bharat / state

ಹೈಕೋರ್ಟ್ ಛೀಮಾರಿ ಹಾಕಿದ್ರೂ ಎಚ್ಚೆತ್ತುಕೊಂಡಿಲ್ಲ ಬಿಬಿಎಂಪಿ: ಹೊಸ ಟೆಂಡರ್ ಜಾರಿ ಯಾವಾಗ?

author img

By

Published : Oct 17, 2019, 6:06 AM IST

ಬೆಂಗಳೂರು ನಗರದಲ್ಲಿ ಇರುವ ರಾಶಿ ರಾಶಿ ಕಸ ನಿರ್ವಹಣೆಯಲ್ಲಿ ಬಿಬಿಎಂಪಿ ಎಡವಿದಂತೆ ಕಾಣುತ್ತಿದೆ. ಹೀಗೆ ಆದ್ರೆ ಬಿಬಿಎಂಪಿಯನ್ನು ಸೂಪರ್​ ಸೀಡ್​ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಹೈಕೋರ್ಟ್​ ನೀಡಿದ್ರೂ ಬಿಬಿಎಂಪಿ ಮೇಯರ್​ ಗೌತಮ್​ ಕುಮಾರ್​ ಅವರು ಮಾತ್ರ ಎಚ್ಚಂತೆ ಕಾಣುತ್ತಿಲ್ಲ.

ಹೈಕೋರ್ಟ್ ಛೀಮಾರಿ ಹಾಕಿದ್ರೂ, ಎಚ್ಚೆತ್ತುಕೊಂಡಿಲ್ಲ ಬಿಬಿಎಂಪಿ

ಬೆಂಗಳೂರು: ನಗರದೆಲ್ಲೆಡೆ ರಾಶಿ ರಾಶಿ ಕಸ ಬಿದ್ದಿರುತ್ತೆ. ನಿರ್ವಹಣೆಯಲ್ಲಿ ಬಿಬಿಎಂಪಿ ಎಡವಿದೆ. ಹೀಗೆ ಆದ್ರೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕಾಗುತ್ತೆ. ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಬೇಕಾಗುತ್ತೆ ಎಂಬೆಲ್ಲ ಎಚ್ಚರಿಕೆಯನ್ನು ಹೈಕೋರ್ಟ್ ನೀಡಿದ್ರೂ ಬಿಬಿಎಂಪಿ ಮೇಯರ್ ಗೌತಮ್​ಕುಮಾರ್​​ ಅವರು ಮಾತ್ರ ಇನ್ನೂ ಎಚ್ಚಂತೆ ಕಾಣುತ್ತಿಲ್ಲ.

ಹೈಕೋರ್ಟ್ ವಿಚಾರಣೆ ಇಂದು ನಿನ್ನೆಯದ್ದಲ್ಲ, 2012 ರಿಂದ ನಡೆದುಕೊಂಡು ಬಂದಿರುವ ಪಿಐಎಲ್ ಎಂದಿರುವ ಅವರು, ನಗರದ ತ್ಯಾಜ್ಯ ಸಮಸ್ಯೆಗೆ ಪಾಲಿಕೆ ನಿರಂತರ ಕೆಲಸ ಮಾಡುತ್ತಿದೆ ಎಂದು ಸಬೂಬು ಹೇಳಿದ್ದಾರೆ. ಅಲ್ಲದೆ ಹೊಸ ಟೆಂಡರ್ ಬಗ್ಗೆ ಹೈಕೋರ್ಟ್ ಮಾತನಾಡಿಲ್ಲ. ನಿಯಮದ ಬಗ್ಗೆ ಮಾತ್ರ ಹೇಳಿದೆ ಎಂದು ಹೊಸ ಟೆಂಡರ್ ಜಾರಿಯಲ್ಲಾಗಿರುವ ವಿಳಂಬಕ್ಕೆ ಉತ್ತರಿಸದೆ ಜಾರಿಕೊಂಡಿದ್ದಾರೆ.

ಹೈಕೋರ್ಟ್ ಛೀಮಾರಿ ಹಾಕಿದ್ರೂ, ಎಚ್ಚೆತ್ತುಕೊಂಡಿಲ್ಲ ಬಿಬಿಎಂಪಿ

ನಗರದ ರಸ್ತೆಗಳಲ್ಲಿ ಬಿದ್ದಿರುವ ಕಸ ಎತ್ತುವುದಷ್ಟೇ ಅಲ್ಲ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ. ಅಲ್ಲದೆ ಕಂದಾಯ ಸಚಿವರಾದ ಆರ್. ಅಶೋಕ್ ಅವರನ್ನು ಭೇಟಿಯಾಗಿ, ಕಸದಿಂದ ವಿದ್ಯುತ್ ತಯಾರಿಸುವ ಘಟಕ ನಿರ್ಮಾಣಕ್ಕೆ ಜಾಗ ಕೇಳಿದ್ದೇವೆ. ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ತಂಡ ಅಧ್ಯಯನಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಅಲ್ಲಿ ಎನ್​ಜಿಟಿ ವಿಚಾರಣೆಗೆ ಹಾಜರಾಗುವುದರ ಜೊತೆಗೆ, ಬಯೋಮಿಥನೈಸೇಷನ್ ಪ್ಲಾಂಟ್ ಬಗ್ಗೆ ಅಧ್ಯಯನ ಮಾಡಿ ಬರಲಿದ್ದಾರೆ ಎಂದರು.

ಆದರೆ ನೂತನ ಹಸಿ ತ್ಯಾಜ್ಯದ ಟೆಂಡರ್ ಜಾರಿ ಬಗ್ಗೆ ಇನ್ನು ಸೂಕ್ತ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. 30 ಪ್ರಕರಣಗಳು ಕೋರ್ಟ್​ನಲ್ಲಿವೆ ಎಂದು ಹೇಳುತ್ತಿದ್ದಾರೆ. ಉಳಿದ 130 ವಾರ್ಡ್​ಗಳ ಟೆಂಡರ್ ಜಾರಿ ಬಗ್ಗೆ ಇನ್ನೂ ಬಿಬಿಎಂಪಿ ತಲೆಕೆಡಿಸಿಕೊಂಡಿಲ್ಲ. ಒಟ್ಟಿನಲ್ಲಿ ಹೈಕೋರ್ಟ್ ಛೀಮಾರಿ ಬಳಿಕವಾದರೂ, ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಾ ಎಂಬುದು ಕಾದುನೋಡಬೇಕಿದೆ.

Intro:ಹೈಕೋರ್ಟ್ ಛೀಮಾರಿ ಹಾಕಿದ್ರೂ, ಎಚ್ಚೆತ್ತುಕೊಂಡಿಲ್ಲ ಬಿಬಿಎಂಪಿ- ಹೊಸ ಟೆಂಡರ್ ಜಾರಿ ಯಾವಾಗ?

ಬೆಂಗಳೂರು- ನಗರದೆಲ್ಲಡೆ ರಾಶಿ ರಾಶಿ ಕಸ ಬಿದ್ದಿರುತ್ತೆ. ನಿರ್ವಹಣೆಯಲ್ಲಿ ಬಿಬಿಎಂಪಿ ಎಡವಿದೆ. ಹೀಗೇ ಆದ್ರೆ ಹೊಸ ಕಟ್ಟಡಗಳ ನಿರ್ಮಾಣಕ್ಕೇ ಕಡಿವಾಣ ಹಾಕಬೇಕಾಗುತ್ತೆ, ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಬೇಕಾಗುತ್ತೆ ಎಂಬೆಲ್ಲ ಎಚ್ಚರಿಕೆಯನ್ನು ಹೈಕೋರ್ಟ್ ನೀಡಿದ್ರೂ ಬಿಬಿಎಂಪಿ ಮೇಯರ್ ಮಾತ್ರ‌ ಇನ್ನೂ ಎಚ್ಚೆತ್ತಂತೆ ಕಾಣುತ್ತಿಲ್ಲ.
ಹೈಕೋರ್ಟ್ ವಿಚಾರಣೆ ಇಂದು ನಿನ್ನೆಯದ್ದಲ್ಲ, 2012 ರಿಂದ ನಡೆದುಕೊಂಡು ಬಂದಿರುವ ಪಿಐಎಲ್, ಎಂದಿರುವ ಅವರು, ನಗರದ ತ್ಯಾಜ್ಯ ಸಮಸ್ಯೆಗೆ ಪಾಲಿಕೆ ನಿರಂತರ ಕೆಲಸ ಮಾಡುತ್ತಿದೆ ಎಂದು ಸಬೂಬು ಹೇಳಿದ್ದಾರೆ. ಅಲ್ಲದೆ ಹೊಸ ಟೆಂಡರ್ ಬಗ್ಗೆ ಹೈಕೋರ್ಟ್ ಮಾತನಾಡಿಲ್ಲ, ನಿಯಮದ ಬಗ್ಗೆ ಮಾತ್ರ ಹೇಳಿದೆ ಎಂದುಹೊಸ ಟೆಂಡರ್ ಜಾರಿಯಲ್ಲಾಗಿರುವ ವಿಳಂಬಕ್ಕೆ ಉತ್ತರಿಸದೆ ಜಾರಿಕೊಂಡಿದ್ದಾರೆ.
ನಗರದ ರಸ್ತೆಗಳಲ್ಲಿ ಬಿದ್ದಿರುವ ಕಸ ಎತ್ತುವುದಷ್ಟೇ ಅಲ್ಲ ಶಾಶ್ವತ ಪರಿಹಾರಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ. ಅಲ್ಲದೆ ಕಂದಾಯ ಸಚಿವರಾದ ಆರ್ ಅಶೋಕ್ ಭೇಟಿಯಾಗಿ, ಕಸದಿಂದ ವಿದ್ಯುತ್ ತಯಾರಿಸುವ ಘಟಕ ನಿರ್ಮಾಣಕ್ಕೆ ಜಾಗ ಕೇಳಿದ್ದೇವೆ. ಅಲ್ಲದೆ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಂಡ ಅಧ್ಯಯನಕ್ಕಾಗಿ ದೆಹಲಿಗೆ ಹೋಗಿದ್ದಾರೆ. ಅಲ್ಲಿ ಎನ್ ಜಿಟಿ ವಿಚಾರಣೆಗೆ ಹಾಜರಾಗುವುದರ ಜೊತೆಗೆ, ಬಯೋಮಿಥನೈಸೇಷನ್ ಪ್ಲಾಂಟ್ ಬಗ್ಗೆ ಅಧ್ಯಯನ ಮಾಡಿ ಬರಲಿದ್ದಾರೆ ಎಂದರು.
ಆದರೆ ನೂತನ ಹಸಿ ತ್ಯಾಜ್ಯದ ಟೆಂಡರ್ ಜಾರಿ ಬಗ್ಗೆ ಇನ್ನು ಸೂಕ್ತ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. 30 ಪ್ರಕರಣಗಳು ಕೋರ್ಟ್ ನಲ್ಲಿವೆ ಎಂದು ಹೇಳುತ್ತಿದ್ದಾರೆ. ಆದರೆ ಉಳಿದ 130 ವಾರ್ಡ್ ಗಳ ಟೆಂಡರ್ ಜಾರಿ ಬಗ್ಗೆ ಇನ್ನೂ ಬಿಬಿಎಂಪಿ ತಲೆಕೆಡಿಸಿಕೊಂಡಿಲ್ಲ.
ಒಟ್ನಲ್ಲಿ ಹೈಕೋರ್ಟ್ ಛೀಮಾರಿ ಬಳಿಕವಾದರೂ, ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಾ ಕಾದುನೋಡಬೇಕಿದೆ.

ಸೌಮ್ಯಶ್ರೀ
Kn_bng_03_mayor_garbage_7202707

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.