ETV Bharat / state

ರಸ್ತೆ ವಿಸ್ತರಣೆಗೆ ಉಚಿತವಾಗಿ ಭೂಮಿ ಕೇಳಿದ್ದ ಬಿಬಿಎಂಪಿ ಸುತ್ತೋಲೆ ರದ್ದುಪಡಿಸಿದ ಹೈಕೋರ್ಟ್

author img

By

Published : Feb 7, 2022, 8:23 PM IST

ಸ್ಥಿರಾಸ್ತಿಯನ್ನು ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕಾಗಿ ಸ್ವಾಧೀನಪಡಿಸಿಕೊಂಡರೆ, ಅರ್ಜಿದಾರರು ಕೇವಲ ಕಟ್ಟಡ ಮಂಜೂರಾತಿ ಯೋಜನೆಯನ್ನು ಪಡೆಯುವ ಮೂಲಕ ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕಾರಣಕ್ಕಾಗಿ ಪರಿಷ್ಕೃತ ಮಾಸ್ಟರ್ ಪ್ಲಾನ್-2015ರಲ್ಲಿ ರಸ್ತೆಗಳಿಗಾಗಿ ಮೀಸಲಿಟ್ಟ ಅವರ ಅಸ್ತಿಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ..

high-court-quashed-bbmp-circular-asking-for-free-land-for-road-expansion
ರಸ್ತೆ ವಿಸ್ತರಣೆಗೆ ಉಚಿತವಾಗಿ ಭೂಮಿ ಕೇಳಿದ್ದ ಬಿಬಿಎಂಪಿ ಸುತ್ತೋಲೆ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಕಟ್ಟಡ ಯೋಜನೆಗೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದ ವೇಳೆ ರಸ್ತೆ ವಿಸ್ತರಣೆಗೆ ಭೂಮಿಯನ್ನು ಉಚಿತವಾಗಿ ನೀಡುವಂತೆ ಸೂಚಿಸಿ ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆಯನ್ನು ಸಂವಿಧಾನ ಬಾಹಿರ ಎಂದಿರುವ ಹೈಕೋರ್ಟ್​, ಅದನ್ನು ರದ್ದುಪಡಿಸಿ ಆದೇಶಿಸಿದೆ.

ರಸ್ತೆ ವಿಸ್ತರಣೆಗಾಗಿ ತಮ್ಮ ಭೂಮಿಯನ್ನು ಒಪ್ಪಿಸುವಂತೆ ಸೂಚಿಸಿ ಬಿಬಿಎಂಪಿ 2016ರ ಫೆ.29ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿ ನಗರದ ಜಿ.ಕೆ ಶ್ರೀಧರ್ ಹಾಗೂ ಇತರೆ ನಾಲ್ವರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ ಕಟ್ಟಡ ಯೋಜನೆ ಮಂಜೂರಾತಿ ಕೋರಿದ ಅರ್ಜಿ ಬಾಕಿ ಇರುವಾಗ ಭೂ ಮಾಲೀಕರು ತಮ್ಮ ಆಸ್ತಿಯನ್ನು ರಸ್ತೆ ವಿಸ್ತರಣೆಗೆ ಉಚಿತವಾಗಿ ಒಪ್ಪಿಸುವಂತೆ ಬಿಬಿಎಂಪಿ ಹೊರಡಿಸಿದ ಸುತ್ತೋಲೆ ಸಂವಿಧಾನದ ವಿಧಿ 300(ಎ) ಯನ್ನು ಉಲ್ಲಂಘಿಸುತ್ತದೆ.

ಬಿಬಿಎಂಪಿ ಹೊರಡಿಸಿರುವ ಸುತ್ತೋಲೆ ಅನಿಯಂತ್ರಿತ ಮತ್ತು ತಾರತಮ್ಯದಿಂದ ಕೂಡಿದೆ. ಮಾಸ್ಟರ್ ಪ್ಲಾನ್ 2015ರಲ್ಲಿ 'ರಸ್ತೆ' ಎಂದು ನಿಗದಿಪಡಿಸಲಾದ ಆಸ್ತಿ ವ್ಯಾಪ್ತಿಯಲ್ಲಿನ ವಾರಸುದಾರರು ಮತ್ತು ಯಾರು ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಕಟ್ಟಡ ಯೋಜನೆ ಮಂಜೂರಾತಿಗೆ ಅರ್ಜಿ ಸಲ್ಲಿಸಿಲ್ಲವೋ, ಅಂತಹವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಕಲಂ 71ರ ಅಡಿಯಲ್ಲಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.

ಇಂತಹ ಸ್ಥಿರಾಸ್ತಿಯನ್ನು ಮಾಸ್ಟರ್ ಪ್ಲಾನ್ ಅನುಷ್ಠಾನಕ್ಕಾಗಿ ಸ್ವಾಧೀನಪಡಿಸಿಕೊಂಡರೆ, ಅರ್ಜಿದಾರರು ಕೇವಲ ಕಟ್ಟಡ ಮಂಜೂರಾತಿ ಯೋಜನೆಯನ್ನು ಪಡೆಯುವ ಮೂಲಕ ತಮ್ಮ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಕಾರಣಕ್ಕಾಗಿ ಪರಿಷ್ಕೃತ ಮಾಸ್ಟರ್ ಪ್ಲಾನ್-2015ರಲ್ಲಿ ರಸ್ತೆಗಳಿಗಾಗಿ ಮೀಸಲಿಟ್ಟ ಅವರ ಆಸ್ತಿಗಳಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಕೆಟ್ ಪ್ಲಾಂಟೇಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿರುವ ಪೀಠ, ನಿರ್ದಿಷ್ಟ ಕಾನೂನು ಅಧಿಕಾರ ಅಥವಾ ಸಮರ್ಥ ಶಾಸನವಿಲ್ಲದೆ ಕೇವಲ ಕಾರ್ಯನಿರ್ವಾಹಕ ಅದೇಶದ ಮೂಲಕ ಸ್ಥಿರಾಸ್ತಿಯ ಮಾಲೀಕತ್ವವನ್ನು ಕಸಿದುಕೊಳ್ಳಲಾಗದು' ಎಂದು ತಿಳಿಸಿದೆ.

ಇದನ್ನೂ ಓದಿ: ಮಹಿಳಾ ಕಾನ್​ಸ್ಟೇಬಲ್​​ಗಳ ಬಟ್ಟೆಗಾಗಿ ಅಳತೆ ತೆಗೆದುಕೊಂಡ ಟೈಲರ್​.. ವಿಡಿಯೋ ವೈರಲ್​​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.