ETV Bharat / state

ಮೇಕೆ ವಿಚಾರವಾಗಿ ಜಗಳ: ವೃದ್ಧೆ ಸಾವಿಗೆ ಕಾರಣವಾಗಿದ್ದ ಆರೋಪಿತೆಯ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್ - ಬೆಂಗಳೂರು

ಮೇಕೆಗಳು ಹಿತ್ತಲಿನ ಹೂ ಗಿಡಗಳನ್ನು ತಿಂದ ವಿಚಾರವಾಗಿ ನಡೆದ ಜಗಳದಲ್ಲಿ ವೃದ್ಧೆ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಗೆ ಸನ್ನಡತೆ ಪರಿಗಣಿಸಿ ಹೈಕೋರ್ಟ್ ಕ್ಷಮಾದಾನ ನೀಡಿದೆ.

High court
ಹೈಕೋರ್ಟ್
author img

By

Published : Jun 27, 2023, 10:21 AM IST

ಬೆಂಗಳೂರು: ಮನೆ ಹಿತ್ತಲಿನ ಹೂವಿನ ಗಿಡಗಳನ್ನು ಮೇಕೆಗಳು ತಿಂದ ವಿಚಾರವಾಗಿ ನಡೆದ ಜಗಳದಲ್ಲಿ 70 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಯ ಸನ್ನಡತೆ ಪರಿಗಣಿಸಿರುವ ಹೈಕೋರ್ಟ್ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದೆ.

ಆರೋಪಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ನಿವಾಸಿ ರೇಣುಕಾಗೆ ವಿಚಾರಣಾ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಆರೋಪಿತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಘಟನೆ ನಡೆದ ದಿನದಿಂದ ಈವರೆಗೆ ಆಕೆ ಇತರೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದೇ ಸನ್ನಡತೆ ಕಾಯ್ದುಕೊಂಡಿದ್ದಾರೆ. ವೃದ್ಧೆಯನ್ನು ಕೊಲೆ ಮಾಡುವ ಉದ್ದೇಶವೂ ಆಕೆಗೆ ಇರಲಿಲ್ಲ. ಕ್ಷಣ ಮಾತ್ರದಲ್ಲಿ ಉಂಟಾದ ಜಗಳದಲ್ಲಿ ಮಾಡಿದ ಹಲ್ಲೆಯ ಪರಿಣಾಮ ವೃದ್ಧೆ ಸಾವನ್ನಪ್ಪಿದ್ದಾರೆ. ಆದ್ದರಿಂದ ಅಪರಾಧಿಗಳ ಪರಿವೀಕ್ಷಣಾ ಕಾಯ್ದೆ-1958ರ ಸೌಲಭ್ಯ ಆರೋಪಿತಳಿಗೆ ಕಲ್ಪಿಸಿ ಬಂಧಮುಕ್ತ ಮಾಡಬಹುದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಆರೋಪಿತ ಮಹಿಳೆ ಒಂದು ವರ್ಷದವರೆಗೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡಬೇಕು ಮತ್ತು ಒಂದು ಲಕ್ಷ ರೂ. ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿ ಒದಗಿಸಬೇಕು ಎಂದು ಷರತ್ತು ವಿಧಿಸಿ ವಿಚಾರಣಾ ನಾಯಾಲಯ ವಿಧಿಸಿದ ಶಿಕ್ಷೆಯನ್ನು ರದ್ದುಪಡಿಸಿ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?: 2009ರ ಮೇ 24ರಂದು ಮಧ್ಯಾಹ್ನ ನಂಜಮ್ಮ ಅವರ ಮನೆಯ ಹಿತ್ತಲಲ್ಲಿ ಆಕೆ ಬೆಳೆಸಿದ್ದ ಹೂ ಗಿಡಗಳನ್ನು ಚಂದ್ರಣ್ಣ ಅವರ ಮನೆಯ ಮೇಕೆಗಳು ತಿನ್ನುತ್ತಿದ್ದವು. ಇದರಿಂದ ಬೆಸರಗೊಂಡಿದ್ದ ನಂಜಮ್ಮ, ಚಂದ್ರಣ್ಣನ ಮಗಳಾದ ರೇಣುಕಾ ಅವರನ್ನು ಉದ್ದೇಶಿಸಿ, ಪ್ರತಿ ದಿನ ನಮ್ಮ ಹಿತ್ತಲಿಗೆ ಮೇಕೆಗಳನ್ನು ಬಿಟ್ಟು ಸಸಿಗಳನ್ನು ಮೇಯಿಸುತ್ತಿದ್ದೀಯಾ, ನಿನಗೆ ಎಷ್ಟು ಹೇಳಿದರೂ ತಿಳಿಯುವುದಿಲ್ಲವೇ ಎಂದು ಜಗಳ ಪ್ರಾರಂಭಿಸಿದ್ದರು.

ಇದಕ್ಕೆ ಪ್ರತಿಯಾಗಿ ರೇಣುಕಾ ನಮ್ಮ ಆಡುಗಳಿಗೆ ಹೊಡೆದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಬೈಯುತ್ತಾ ಜಗಳ ಮುಂದುವರೆಸಿ, ಜುಟ್ಟನ್ನು ಹಿಡಿದುಕೊಂಡು ಎಳೆದಾಡಿದ್ದಲ್ಲದೇ, ಕೆಡವಿಕೊಂಡು ಕಾಲನಿಂದ ಹೊಟ್ಟೆಯ ಮೇಲೆ ತುಳಿದು ನೋವುಂಟು ಮಾಡಿದ್ದರು. ಆಗ ನೆರೆಹೊಯವರು ಬಂದು ಜಗಳ ಬಿಡಿಸಿದ್ದರು. ನಂತರ ನಂಜಮ್ಮ ಅವರ ಪತಿ ಮಾಸ್ತಯ್ಯ ಮಳವಳ್ಳಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಸಿದರು. ಘಟನೆ ಕುರಿತು ಮಳ್ಳವಳ್ಳಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮೇ 25ರಂದು ಆಸ್ಪತ್ರೆಗೆ ತೆರಳಿದ್ದ ಮಳವಳ್ಳಿ ಠಾಣಾ ಪೊಲೀಸರು ನಂಜಮ್ಮ ಅವರು ಹೇಳಿಕೆ ದಾಖಲಿಸಿಕೊಂಡಿದ್ದರು. ಅದನ್ನು ಆಧರಿಸಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 341 (ಅಕ್ರಮವಾಗಿ ವ್ಯಕ್ತಿಯನ್ನು ತಡೆಹಿಡಿದ), 323 (ಗಾಯಗೊಳಿಸಿದ) ಮತ್ತು 504 (ಶಾಂತಿ ಭಂಗವನ್ನ ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಿಸಿದ) ಅಡಿಯಲ್ಲಿ ರೇಣುಕಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ನಡುವೆ ಚಿಕಿತ್ಸೆ ಫಲಕಾರಿಯಾಗದೆ ಮೇ 26 ರಂದು ನಂಜಮ್ಮ ಮೃತಪಟ್ಟಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಅಕ್ರಮವಾಗಿ ತಡೆದ 341, 504 ಮತ್ತು 302 (ಕೊಲೆ) ಅಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಮಂಡ್ಯ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 305-2(ಉದ್ದೇಶ ಪೂರ್ವಕವಲ್ಲದೆ ಸಾವಿಗೆ ಕಾರಣವಾದ) ಅಡಿಯಲ್ಲಿ ಮೂರು ವರ್ಷ ಸಾಧಾರಣಾ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ 2011 ರ ಆ.6ರಂದು ಆದೇಶಿಸಿತ್ತು. ಜತೆಗೆ, ದಂಡ ಪಾವತಿಸಲು ವಿಫಲವಾದರೆ ಆರು ತಿಂಗಳು ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ರೇಣುಕಾ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ಸಾಕ್ಷಿಗಳ ಹೇಳಿಕೆಗಳಲ್ಲಿ ಸಂಶಯ: ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.