ETV Bharat / state

ಬೆಂಗಳೂರಿನಲ್ಲಿ ಅಕ್ರಮ ಪಬ್​, ಬಾರ್​ ಮುಚ್ಚಲು ಹೈಕೋರ್ಟ್​ ಆದೇಶ

ಮಧ್ಯರಾತ್ರಿಯಲ್ಲಿ ಮನೆಗಳ ಮುಂದೆ ಯುವಕ-ಯುವತಿಯರ ಅನುಚಿತ ವರ್ತನೆ, ಪಬ್, ಬಾರ್ ಮತ್ತು ರೂಫ್ಟಾಪ್‌​ಗಳ ಅತಿಯಾದ ಧ್ವನಿವರ್ಧಕದಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನಗರದ ಅಕ್ರಮ ಪಬ್​, ಬಾರ್​ಗಳನ್ನು ಮುಚ್ಚಲು ಆದೇಶಿಸಿದೆ.

author img

By

Published : Nov 22, 2019, 11:04 AM IST

ಬಾರ್​ ಮುಚ್ಚಲು ಹೈಕೋರ್ಟ್​ ಆದೇಶ

ಬೆಂಗಳೂರು: ಬಾರ್​, ಪಬ್​ಗಳಿಂದ ತೊಂದರೆಯಾಗುತ್ತಿದೆ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್,​ ನಗರದಲ್ಲಿ ಪರವಾನಗಿ ಪಡೆಯದೆ ನಡೆಯುತ್ತಿರುವ ಕಾರ್ಯಾಚರಿಸುತ್ತಿರುವ ಪಬ್, ಬಾರ್​ಗಳನ್ನು ಮುಚ್ಚಲು ಆದೇಶಿಸಿದೆ.

ಮಧ್ಯರಾತ್ರಿಯಲ್ಲಿ ಮನೆಗಳ ಮುಂದೆ ಯುವಕ-ಯುವತಿಯರ ಅನುಚಿತ ವರ್ತನೆ, ಪಬ್, ಬಾರ್ ಮತ್ತು ರೂಫ್ಟಾಪ್‌​ಗಳ ಅತಿಯಾದ ಧ್ವನಿವರ್ಧಕದಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನಗರದ ಕೋರಮಂಗಲ, ಇಂದಿರಾನಗರ, ಮತ್ತು ದೊಮ್ಮಲೂರು ನಿವಾಸಿಗಳು ಅನೇಕ ಬಾರಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರು. ಈ ವೇಳೆ ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸಿ, ಮಾಲಿನ್ಯ ನಿಯಂತ್ರಿಸಲಾಗುವುದು ಎಂದು ಪೊಲೀಸ್ ಇಲಾಖೆಯೂ ಹೇಳಿತ್ತು. ಆದರೆ ಜನರಿಗೆ ಉಂಟಾಗುತ್ತಿದ್ದ ಕಿರಿಕಿರಿ ಮಾತ್ರ ಕಡಿಮೆಯಾಗಿರಲಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದುವರೆಗೆ ಯಾಕೆ ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಮಾಲಿನ್ಯ ಮಾಪಕಗಳ ಖರೀದಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಮತ್ತು ನಗರದಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ತಲೆ ಎತ್ತಿರುವ ಪಬ್ ಮತ್ತು ಬಾರ್‌ಗಳ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದೆ.

Intro:High courtBody:ಇಂದಿರಾನಗರದ ಜನ ಸ್ವಲ್ಪಮಟ್ಟಿಗೆ ರಿಲಾಕ್ಸ್ ಆಗಬಹುದು, ಅಕ್ರಮ ಮತ್ತು ಬಾರ್ಗಳು ಮುಚ್ಚಲು ಹೈಕೋರ್ಟ್ ಸೂಚನೆ!

ಕೋರಮಂಗಲ, ಇಂದಿರಾನಗರ, ಮತ್ತು ದೊಮ್ಮಲೂರು ನಿವಾಸಿಗಳು ಈ ಹಿಂದೆ ಅನೇಕ ಬಾರಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರು, ಮಧ್ಯರಾತ್ರಿಯಾದರೂ ತಮ್ಮ ಮನೆಗಳ ಮುಂದೆ ಯುವಕ-ಯುವತಿಯರ ಅನುಚಿತ ವರ್ತನೆ, ಪಬ್ ಬಾರ್ ಮತ್ತು ರೂಫ್ಟಾಪ್ ಅತಿಯಾದ ಧ್ವನಿವರ್ಧಕ, ಪಬ್ ಮತ್ತು ಬಾರಗಳಿಂದ ಆಗುತ್ತಿದ್ದಂತಾ ತೊಂದರೆಗಳಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸಿದ್ದರು.
ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸಿ, ಮಾಲಿನ್ಯವನ್ನು ನಿಯಂತ್ರಿಸಲಾಗುವುದು ಎಂದು ಪೊಲೀಸ್ ಇಲಾಖೆಯು ಹೇಳಿಕೆ ನೀಡಿತ್ತು.

ಆದರೆ, ಇಲ್ಲಿಯವರೆಗೆ ಯಾಕೆ ಮಾಪಕಗಳನ್ನು ಖರೀದಿಸಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಲೈಸೆನ್ಸ್ ಪಡೆಯದ ಪಬ್ ಮತ್ತು ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಬ್ದ ಮಾಲಿನ್ಯ ಮಾಪಕಗಳನ್ನು ಖರೀದಿಸಬೇಕೆಂದು ನಿರ್ದೇಶನ ನೀಡಿ ಎರಡುವಾರಗಳ ಡೆಡ್ಲೈನ್ ಕೊಟ್ಟಿದೆ.Conclusion:Use photos

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.