ETV Bharat / state

ನೇವಾ ಮೂಲಕ ಇ-ವಿಧಾನ ಮಂಡಲ ಯೋಜನೆ ಜಾರಿಗೆ ಕೋರಿಕೆ: ಸರ್ಕಾರಕ್ಕೆ ನೋಟಿಸ್​

author img

By

Published : Jan 4, 2023, 7:16 AM IST

Updated : Jan 4, 2023, 7:56 AM IST

ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (ನೇವಾ) ಮೂಲಕ ಇ-ವಿಧಾನ ಮಂಡಲ ಯೋಜನೆ ಜಾರಿಗೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಯು ಹೈಕೋರ್ಟ್​ನಲ್ಲಿ ಮಂಗಳವಾರ ನಡೆಯಿತು. ಈ ಕುರಿತಂತೆ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

high-court-notice-to-government-in-e-vidhanamandal-scheme
ನೇವಾ ಮೂಲಕ ಇ-ವಿಧಾನ ಮಂಡಲ ಯೋಜನೆ ಜಾರಿಗೆ ಕೋರಿಕೆ: ಸರ್ಕಾರಕ್ಕೆ ನೋಟಿಸ್​

ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ವ್ಯವಹಾರವನ್ನು ಕಾಗದರಹಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲು ಯೋಜಿಸಿದ್ದ ಇ-ವಿಧಾನ ಮಂಡಲ ಯೋಜನೆಯನ್ನು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (ನೇವಾ) ಮೂಲಕ ಜಾರಿಗೊಳಿಸಲು ಆದೇಶಿಸುವಂತೆ ಕೋರಿ ವಿಧಾನ ಪರಿಷತ್​ನ ಮಾಜಿ ಸದಸ್ಯ ರಮೇಶ್​ ಬಾಬು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿಧಾನಸಭೆ ಮತ್ತು ಪರಿಷತ್ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಿಯೋನಿಕ್ಸ್ ಮೂಲಕ 253.75 ಕೋಟಿ ರೂಪಾಯಿ ವೆಚ್ಚದಲ್ಲಿ ಇ ವಿಧಾನ ಮಂಡಲ ಯೋಜನೆ ಜಾರಿ ಮಾಡುವುದಕ್ಕೆ ಬದಲಾಗಿ ನೇವಾ ಮೂಲಕ ಜಾರಿಗೊಳಿಸಲು ಆದೇಶಿಸಿಬೇಕು ಎಂದು ಕೋರಿದರು.

ನೇವಾ ಮೂಲಕ ಇ-ವಿಧಾನ ಮಂಡಲ ಯೋಜನೆ ಜಾರಿ ಮಾಡಿದರೆ ಆಗುವ ಅನುಕೂಲಗಳ ಕುರಿತು ವಿಧಾನಸಭೆಯ ಸ್ಪೀಕರ್​ಗೆ 2022ರ ಮೇ 5ರಂದು ಪತ್ರ ಬರೆಯಲಾಗಿದೆ. ಕಿಯೋನಿಕ್ಸ್ ಮೂಲಕ ಯೋಜನೆ ಜಾರಿ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ 254 ಕೋಟಿ ರೂಪಾಯಿ ನಷ್ಟವಾಗಲಿರುವುದರಿಂದ ಮಧ್ಯಪ್ರವೇಶಿಸುವಂತೆ ಸ್ಪೀಕರ್​​ಗೆ ಮನವಿಯಲ್ಲಿ ಕೋರಲಾಗಿತ್ತು. ಸ್ಪೀಕರ್ ಅವರಿಂದ ಯಾವುದೇ ಕ್ರಮವಾಗಲಿ ಅಥವಾ ಅದಕ್ಕೆ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಇ-ವಿಧಾನ ಮಂಡಲ ಯೋಜನೆ ಜಾರಿಗೆ 2016-17ರಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) 60.84 ಕೋಟಿ ರೂಪಾಯಿ ಅಂದಾಜಿಸಿತ್ತು. ಆದರೆ, ಕರ್ನಾಟಕ ವಿಧಾನ ಮಂಡಲವು ಈ ಯೋಜನೆ ಜಾರಿಗೆ ಕಿಯೋನಿಕ್ಸ್ ಸಂಸ್ಥೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಿತ್ತು. ಇದರಂತೆ ಕಿಯೋನಿಕ್ಸ್ ಸುಮಾರು 254 ಕೋಟಿ ರೂಪಾಯಿ ಯೋಜನೆಗೆ ತಗುಲುವುದಾಗಿ ವರದಿ ನೀಡಿತ್ತು.

ಇದನ್ನೂ ಓದಿ: ನಾಮ ಪತ್ರದಲ್ಲಿ ಕ್ರಿಮಿನಲ್​ ಪ್ರಕರಣಗಳ ಉಲ್ಲೇಖಿಸದ ಆರೋಪ: ಚುನಾವಣಾ ಆಯೋಗಕ್ಕೆ ನೋಟಿಸ್​ ಜಾರಿ

Last Updated : Jan 4, 2023, 7:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.