ETV Bharat / state

ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಗೋಮಾಂಸ ಮಾರಾಟಗಾರರಿಂದ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಸುಗ್ರೀವಾಜ್ಞೆ ರದ್ದು ಕೋರಿ ಖಾಸಿಂ ಅಜಾಜ್ ಅಹ್ಮದ್ ಖುರೇಷಿ ಸೇರಿದಂತೆ 12 ಮಂದಿ ಕಸಾಯಿ ಖಾನೆ ಮಾಲೀಕರು ಹಾಗೂ ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಸರ್ಕಾರಕ್ಕೆ  ಹೈಕೋರ್ಟ್ ನೋಟಿಸ್​​
ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​​
author img

By

Published : Feb 2, 2021, 3:43 AM IST

ಬೆಂಗಳೂರು : ಜಾನುವಾರು ಹತ್ಯೆ ಪ್ರತಿಬಂಧಕ ಸುಗ್ರೀವಾಜ್ಞೆ ಪ್ರಶ್ನಿಸಿ ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸುಗ್ರೀವಾಜ್ಞೆ ರದ್ದು ಕೋರಿ ಖಾಸಿಂ ಅಜಾಜ್ ಅಹ್ಮದ್ ಖುರೇಷಿ ಸೇರಿದಂತೆ 12 ಮಂದಿ ಕಸಾಯಿ ಖಾನೆ ಮಾಲೀಕರು ಹಾಗೂ ಗೋಮಾಂಸ ಮಾರಾಟಗಾರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ರವಿವರ್ಮ ಕುಮಾರ್ ವಾದ ಆಲಿಸಿದ ಪೀಠ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಕೋರಿಕೆ :
ಸುಗ್ರೀವಾಜ್ಞೆಯ ಸೆಕ್ಷನ್ 4 ಪ್ರಕಾರ ರಾಜ್ಯದಲ್ಲಿ ಹಸು, ಎತ್ತು ಮತ್ತು ಕೋಣ ಹತ್ಯೆ ಸಂಪೂರ್ಣ ನಿಷಿದ್ಧ. ಆದರೆ, ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಗೋಮಾಂಸ ವ್ಯಾಪಾರಿಗಳಿದ್ದಾರೆ. ರಾಜ್ಯದ ಶೇ.50ರಷ್ಟು ಜನರು ಗೋಮಾಂಸವನ್ನು ಸೇವಿಸುತ್ತಾರೆ. ಸುಗ್ರೀವಾಜ್ಞೆ ಜಾರಿಯಿಂದ ಗೋಮಾಂಸ ವ್ಯಾಪಾರಿಗಳು ತಮ್ಮ ವೃತ್ತಿ ಕಳೆದುಕೊಳ್ಳುತ್ತಾರೆ. ಗೋಮಾಂಸ ಸೇವಕರ ಆಹಾರದ ಹಕ್ಕಿಗೆ ಧಕ್ಕೆಯಾಗುತ್ತದೆ. ಆದ್ದರಿಂದ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥದವರೆಗೆ ಸುಗ್ರೀವಾಜ್ಞೆ ಮತ್ತು ಅದನ್ನು ಆಧರಿಸಿ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.