ETV Bharat / state

ಬೆಂಗಳೂರು ಕೆರೆಗಳ ಒತ್ತುವರಿ ತೆರವಿಗೆ 16 ವಾರಗಳಲ್ಲಿ ಕಾರ್ಯಯೋಜನೆ ರೂಪಿಸಲು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ

High Court Notice to BBMP: ಬೆಂಗಳೂರಿನ ಕೆರೆಗಳ ಒತ್ತುವರಿಯನ್ನು 16 ವಾರಗಳಲ್ಲಿ ಪೂರ್ಣಗೊಳಿಸುವ ರೀತಿಯಲ್ಲಿ ಕಾರ್ಯ ರೂಪಿಸಲು ಬಿಬಿಎಂಪಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್
author img

By ETV Bharat Karnataka Team

Published : Sep 4, 2023, 9:04 PM IST

ಬೆಂಗಳೂರು: ನಗರದ 159 ಕೆರೆಗಳ ಒತ್ತುವರಿಯನ್ನು 16 ವಾರಗಳಲ್ಲಿ ಪೂರ್ಣಗೊಳಿಸುವ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಿ ಈ ಸಂಬಂಧ ಮುಂದಿನ ಆರು ವಾರಗಳಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹೈಕೋರ್ಟ್ ಸೂಚನೆ ನೀಡಿದೆ. ವಾರಕ್ಕೆ 10 ಕೆರೆಗಳಂತೆ 159 ಕೆರೆಗಳಲ್ಲಿನ ಒತ್ತುವರಿಯನ್ನು 16 ವಾರಗಳಲ್ಲಿ ಪೂರ್ಣಗೊಳಿಸಲು ಹೈಕೋರ್ಟ್​ ಹೇಳಿದೆ.

ಬೆಂಗಳೂರಿನ ಸಿಟಿಜನ್ ಆ್ಯಕ್ಷನ್ ಗ್ರೂಪ್ ಸೇರಿದಂತೆ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಬಿಬಿಎಂಪಿ ಪರ ವಕೀಲರು ಎರಡು ವರದಿಗಳನ್ನು ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಒತ್ತುವರಿಗೆ ಸಂಬಂಧಿಸಿದಂತೆ ದಾಖಲಾದ ಮಾಹಿತಿ ಆಧರಿಸಿ ಏಳು ದಿನಗಳ ಬದಲಿಗೆ ಮೂರು ದಿನದಲ್ಲಿ ಮಾಡಬೇಕು. ಆನಂತರ ಚಟುವಟಿಕೆಯನ್ನು ಏಳು ದಿನಗಳ ಒಳಗೆ ಪೂರ್ಣಗೊಳಿಸಬೇಕು. ಇದರಿಂದ ಇಡೀ ಪ್ರಕ್ರಿಯೆ ವೇಗ ಪಡೆಯಲಿದ್ದು, ಇಡೀ ಪ್ರಕ್ರಿಯೆ 76 ದಿನದಲ್ಲಿ ಮುಗಿಯುತ್ತದೆ ಸರಾಸರಿ 70 ದಿನದಲ್ಲಿ ಪೂರ್ಣಗೊಳಿಸಬೇಕು. ನ್ಯಾಯಾಲಯ ಮಾಡಿರುವ ಬದಲಾವಣೆಗೆ ಬಿಬಿಎಂಪಿ ಪರ ವಕೀಲರು ಅಧಿಕಾರಿಗಳ ಸೂಚನೆ ಮೇರೆಗೆ ಸಮ್ಮತಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

172 ದಿನಗಳ ಅಗತ್ಯ: ರಾಜಕಾಲುವೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿಯಲ್ಲಿ 172 ದಿನಗಳು ಅಗತ್ಯ ಎಂದು ಹೇಳಲಾಗಿದೆ. ರಾಜಕಾಲುವೆಗಳ ಒತ್ತುವರಿ ಪತ್ತೆಗೆ 20 ದಿನ, ಆನಂತರ ತಹಶೀಲ್ದಾರ್ ಎದುರು ದೂರು ದಾಖಲಿಸಲು ಐದು ದಿನ, ಬಳಿಕ ಸಮೀಕ್ಷೆಗೆ ಆದೇಶಿಸಲು ಮತ್ತು ಮಾರ್ಕ್ ಮಾಡಲು ತಹಶೀಲ್ದಾರ್​​ಗೆ ಐದು ದಿನ, ಆನಂತರ ಸಮೀಕ್ಷೆಗೆ 50 ದಿನ, ಬಳಿಕ 10 ದಿನ ಸಮೀಕ್ಷೆ ರಚನೆ, ಬಳಿಕ ಒತ್ತುವರಿದಾರರಿಗೆ ಹತ್ತು ದಿನಗಳಲ್ಲಿ ನೋಟಿಸ್ ಜಾರಿ, ಅವರಿಂದ ಪ್ರತಿಕ್ರಿಯೆ ಪಡೆಯಲು ಏಳು ದಿನ, ಆನಂತರ 10 ದಿನಗಳ ಬಳಿಕ ತಹಶೀಲ್ದಾರ್ ಅವರಿಂದ ಅಂತಿಮ ಆದೇಶಕ್ಕೆ ಕಾಲಮಿತಿ ನಿಗದಿ ಮಾಡಲಾಗಿದೆ ಎಂದು ಅನುಪಾಲನಾ ವರದಿಯಲ್ಲಿ ಹೇಳಲಾಗಿದೆ.

ಮೇಲ್ಮನವಿಗೆ 30 ದಿನ ಸಮಯ: ಮೇಲ್ಮನವಿ ಸಲ್ಲಿಸಲು 30 ದಿನ, ಆನಂತರ ಸಿದ್ದತೆ ಮಾಡಿಕೊಂಡು ಒತ್ತುವರಿ ತೆರವು ಮಾಡಲು 15 ದಿನ ನಿಗದಿಪಡಿಸಲಾಗಿದೆ. ಆನಂತರ 10 ದಿನಗಳ ಒಳಗೆ ತಹಶೀಲ್ದಾರ್ ಅವರು ಭೂಕಬಳಿಕೆ ನಿಷೇಧ ನ್ಯಾಯಾಲಯದ ಮುಂದೆ ದೂರು ದಾಖಲಿಸಬೇಕು ಎಂದು ವಿವರಿಸಲಾಗಿದೆ. ಬೆಂಗಳೂರು ನಗರದಲ್ಲಿ 202 ಕೆರೆಗಳಿದ್ದು, ವಾರದಲ್ಲಿ 10 ಕೆರೆಗಳನ್ನು ಗುರುತಿಸಿ ಒತ್ತವರಿ ತೆರವು ಮಾಡುವ ಕಾರ್ಯ ಯೋಜನೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈವರೆಗೂ 24 ಕೆರೆಗಳನ್ನು ಒತ್ತುವರಿ ಮುಕ್ತ ಕೆರೆಗಳಾಗಿವೆ. ಜತೆಗೆ, 19 ಕೆರೆಗಳು ಬಳಕೆಯಾಗದೇ ಉಳಿದುಕೊಂಡಿವೆ ಎಂದು ತಿಳಿಸಿದೆ.

ಈ ಅಂಶಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ಹೊಸ ಒತ್ತುವರಿ ಪತ್ತೆಯನ್ನು 20 ದಿನಗಳಿಂದ 10 ದಿನಗಳಿಗೆ ಇಳಿಸಿದೆ. ಕಾರ್ಯಕಾರಿ ಎಂಜಿನಿಯರ್ ವ್ಯಾಪ್ತಿ ದೊಡ್ಡದಿದ್ದು, ಅವರ ಅಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ಗಳ ಶೇ.50ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಬಿಬಿಎಂಪಿ ವಕೀಲರು ಹೇಳಿದರು. ಅದಾಗ್ಯೂ, ಪೀಠವು ಕಾಲಮಿತಿಯನ್ನು 10 ದಿನಕ್ಕೆ ಇಳಿಸಿತು. ಅಲ್ಲದೇ, ಕಾರ್ಯಕಾರಿ ಎಂಜಿನಿಯರ್ ಅವರ ಕಚೇರಿಯಲ್ಲಿ ಶೇ. 50ರಷ್ಟು ಹುದ್ದೆಗಳು ಖಾಲಿ ಇದ್ದರೆ, ಅವುಗಳನ್ನು ಭರ್ತಿ ಮಾಡುವ ಸಂಬಂಧ ಸರ್ಕಾರವು ಸೂಕ್ತ ವಿಧಿ-ವಿಧಾನಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಆಗಸ್ಟ್ 1ರಂದು ನ್ಯಾಯಾಲಯ ಮಾಡಿರುವ ಆದೇಶ ಆಧರಿಸಿ ಸಂಬಂಧಿತ ಎಲ್ಲರ ಜೊತೆ ಸಮನ್ವಯ ಸಾಧಿಸಿ ಕಾರ್ಯಗತ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಮತ್ತು ರಾಜಕಾಲುವೆಗಳು ಮತ್ತು ಕೆರೆಗಳ ಒತ್ತುವರಿ ನಿಷೇಧಿಸಲು, ತೆರವು ಮಾಡುವುದಕ್ಕೆ ಸಂಬಂಧಿಸಿದ ವರದಿ, ಕಾರ್ಯಗತಗೊಳಿಸಲು ಮತ್ತು ಭೂಕಬಳಿಕೆ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ. ವಿಭಾಗದ ಕಾರ್ಯಕಾರಿ ಎಂಜಿನಿಯರ್ ಅವರು ದೂರು ಪ್ರಾಧಿಕಾರವಾಗಲಿದ್ದು, ತಹಶೀಲ್ದಾರ್ ಅವರು ದೂರು ಸ್ವೀಕಾರ, ತನಿಖೆ ಮತ್ತು ಅಗತ್ಯ ಆದೇಶ ಮಾಡುವ ಪ್ರಾಧಿಕಾರವಾಗಿ ಕೆಲಸ ಮಾಡಲಿದ್ದಾರೆ.

ತಹಶೀಲ್ದಾರ್ ಆದೇಶಿಸಿದ ಬಳಿಕ ವಲಯ ಕಾರ್ಯಕಾರಿ ಎಂಜಿನಿಯರ್ ಅವರು ಒತ್ತುವರಿ ತೆರವು ಪ್ರಾಧಿಕಾರವಾಗಿ ಕೆಲಸ ಮಾಡಲಿದ್ದಾರೆ. ಭೂ ಒತ್ತುವರಿ ಕಬಳಿಕೆ ನಿಷೇಧ ನ್ಯಾಯಾಲಯದ ಮುಂದೆ ದೂರು ದಾಖಲಿಸುವ ಹೊಣೆಯು ತಹಶೀಲ್ದಾರ್ ಅವರ ಮೇಲಿರಲಿದೆ ಎಂದು ನ್ಯಾಯಾಲಯ ಹೇಳಿದೆ. 859.79 ಕಿ ಮೀ ರಾಜಕಾಲುವೆಯಲ್ಲಿ 655 ನದಿ (ಸ್ಟ್ರೀಮ್ಸ್) ಹರಿಯುತ್ತವೆ. ಇವೆಲ್ಲವೂ ಕರ್ನಾಟಕ ಭೂ ಕಂದಾಯ ಕಾಯಿದೆ ಅಡಿ ಸರ್ಕಾರದ ಆಸ್ತಿಗಳಾಗಿವೆ ಎಂದು ಅನುಪಾಲನಾ ವರದಿಯಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.