ETV Bharat / state

ಸಾರಿಗೆ ಮುಷ್ಕರ: ನೌಕರರ ವಜಾ - ಅಮಾನತು ರದ್ದು ಕೋರಿ ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ - Bangalore news

ಈಗಾಗಲೇ ಸಾರಿಗೆ ನೌಕರರು ಮುಷ್ಕರ ಹಿಂಪಡೆದಿದ್ದಾರೆ, ಕೆಲ ನೌಕರರ ವಿರುದ್ಧ ಹೊರಡಿಸಲಾಗಿರುವ ವಜಾ, ಅಮಾನತು ಮತ್ತು ವರ್ಗಾವಣೆ ಆದೇಶಗಳನ್ನು ಕಾನೂನಾತ್ಮಕವಾಗಿ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ಸರ್ಕಾರ ಹಾಗೂ ಸಾರಿಗೆ ನಿಗಮಗಳು ತಿಳಿಸಿವೆ.

ನೌಕರರ ವಜಾ-ಅಮಾನತು ರದ್ದು ಕೋರಿ ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ
author img

By

Published : Apr 27, 2021, 6:06 PM IST

ಬೆಂಗಳೂರು: 6ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ನಡೆಸಿದ್ದ ಮುಷ್ಕರ ಹಿನ್ನೆಲೆ ಸೇವೆಯಿಂದ ಅಮಾನತುಗೊಂಡಿರುವ ಹಾಗೂ ವಜಾಗೊಂಡಿರುವ ಸಾರಿಗೆ ನೌಕರರು ತಮ್ಮ ವಿರುದ್ಧದ ಆದೇಶವನ್ನು ಹಿಂಪಡೆಯಲು ಸಂಬಂಧಿಸಿದ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಬೇಕು. ಈ ಸಂಬಂಧ ಪ್ರಾಧಿಕಾರಗಳು 2 ವಾರಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸಾರಿಗೆ ನೌಕರರಿಗೆ ಸೂಚಿಸಿದೆ.

ಇದೇ ವೇಳೆ, ಸಾರಿಗೆ ನೌಕರರು ಮುಷ್ಕರ ಮುಂದುವರೆಸಬಾರದು. ಪ್ರಸ್ತುತ ಕೋವಿಡ್ ಸಂಕಷ್ಟವಿದ್ದು, ಸಾರ್ವಜನಿಕರು ಸಾರಿಗೆ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುವುದನ್ನು ತಪ್ಪಿಸಬೇಕು ಎಂದು ಸರ್ಕಾರ, ಸಾರಿಗೆ ನಿಗಮ ಹಾಗೂ ನೌಕರರಿಗೆ ಹೈಕೋರ್ಟ್ ಸೂಚಿಸಿದೆ.

ಸಾರಿಗೆ ನೌಕರರ ಮಷ್ಕರ ತಡೆಯಲು ಹಾಗೂ ಮುಷ್ಕರದಿಂದ ಉಂಟಾಗಿರುವ ನಷ್ಟ ವಸೂಲಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ನಟರಾಜ್ ಶರ್ಮಾ, ‘ಸಮರ್ಪಣಾ' ಸ್ವಯಂ ಸೇವಾ ಸಂಸ್ಥೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಈಗಾಗಲೇ ನೌಕರರು ಮುಷ್ಕರ ಹಿಂಪಡೆದಿದ್ದಾರೆ, ಕೆಲ ನೌಕರರ ವಿರುದ್ಧ ಹೊರಡಿಸಲಾಗಿರುವ ವಜಾ, ಅಮಾನತು ಮತ್ತು ವರ್ಗಾವಣೆ ಆದೇಶಗಳನ್ನು ಕಾನೂನಾತ್ಮಕವಾಗಿ ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ಸರ್ಕಾರ ಹಾಗೂ ಸಾರಿಗೆ ನಿಗಮಗಳು ತಿಳಿಸಿವೆ. ಆದ್ದರಿಂದ, ಸಾರಿಗೆ ನೌಕರರ ಕೂಟ ಅಮಾನತುಗೊಂಡಿರುವ ಎಲ್ಲ ನೌಕರರ ಸಂರ್ಪೂಣ ವಿವರ ಒಳಗೊಂಡಂತೆ ಸಾಮಾನ್ಯ ಮನವಿಯೊಂದನ್ನು ಸಿದ್ಧಪಡಿಸಿ ಎಲ್ಲ 4 ಸಾರಿಗೆ ನಿಗಮಗಳ ಕಚೇರಿಗಳಿಗೆ ಸಲ್ಲಿಸಬೇಕು. ನಿಗಮಗಳು ಆ ಮನವಿಗಳನ್ನು ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರಕ್ಕೆ ರವಾನಿಸಬೇಕು. ಮನವಿ ಸ್ವೀಕರಿಸಿದ 2 ವಾರಗಳಲ್ಲಿ ಮೇಲ್ಮನವಿ ಪ್ರಾಧಿಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.

ವೈಯಕ್ತಿಕವಾಗಿ ಮನವಿ ಸಲ್ಲಿಸಲು ಸ್ವತಂತ್ರರು

ಇದೇ ವೇಳೆ ಸೇವೆಯಿಂದ ವಜಾಗೊಂಡಿರುವ ನೌಕರರು ಆ ಆದೇಶವನ್ನು ಪ್ರಶ್ನಿಸಿ ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರದ ಮುಂದೆ ವೈಯಕ್ತಿಕವಾಗಿ ಮನವಿ ಸಲ್ಲಿಸಲು ಸ್ವತಂತ್ರರಾಗಿದ್ದಾರೆ. ಹೀಗೆ ಮನವಿ ಸಲ್ಲಿಕೆಯಾದರೆ ಸಂಬಂಧಪಟ್ಟ ಪ್ರಾಧಿಕಾರ ಅವುಗಳನ್ನು 2 ತಿಂಗಳ ಒಳಗೆ ಇತ್ಯರ್ಥಪಡಿಸಬೇಕು. ಇನ್ನು ವರ್ಗಾವಣೆ ಆದೇಶಗಳಿಗೆ ಸಂಬಂಧಿಸಿದಂತೆ ನೌಕರರು ಅಥವಾ ನೌಕರರ ಸಂಘ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಈ ಮನವಿಗಳನ್ನು 10 ದಿನಗಳಲ್ಲಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿತು.

ಸಮಾಲೋಚನೆ ಮುಂದುವರಿಯಲಿ

ನೌಕರರ ಬೇಡಿಕೆಗಳಿಗೆ ಸಂಬಂಧಿಸಿದ ವಿಚಾರ ಕೈಗಾರಿಕಾ ನ್ಯಾಯಾಧಿಕರಣದ ಮುಂದಿರುವುದರಿಂದ ಈ ಕುರಿತ ಕಾನೂನಾತ್ಮಕ ಅಂಶಗಳ ಮೇಲೆ ನಾವು ವಿಚಾರಣೆ ನಡೆಸುವುದಿಲ್ಲ. ಆದರೆ, ನೌಕರರೊಂದಿಗೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಸಮಾಲೋಚನೆ ಮುಂದುವರಿಯಬಹುದು. ಸಮಾಲೋಚನೆ ನಡೆದರೆ, ಅದರ ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು.

ಒಂದೊಮ್ಮೆ ಸಮಾಲೋಚನೆ ನಡೆಸಲು ಸಾಧ್ಯವಾಗದಿದ್ದರೆ, ಮಧ್ಯಸ್ಥಿಕೆ ವಹಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಒಬ್ಬರನ್ನು ನೇಮಿಸುವ ಕುರಿತು ಮುಂದಿನ ವಿಚಾರಣೆ ವೇಳೆ ತೀರ್ಮಾನಿಸಲಾಗುವುದು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.