ETV Bharat / state

ಎಐಂಎ ಹಗರಣ: 2,695 ಕೋಟಿ ರೂ. ಠೇವಣಿ ಹಣ ವಾಪಸ್​​​ ಕೋರಿ 65 ಸಾವಿರ ಅರ್ಜಿ ಸಲ್ಲಿಕೆ - IMA FRAUD

ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತಾ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ 2,695.13 ಕೋಟಿ ಠೇವಣಿ ಹಿಂದಿರುಗಿಸಲು ಕೋರಿ 69,099 ಖಾತೆದಾರರು 65,258 ಕ್ಲೇಮು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ 45 ಸಾವಿರ ಕ್ಲೇಮು ಅರ್ಜಿಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಉಳಿದ ಅರ್ಜಿಗಳ ಪರಿಶೀಲನೆಗೆ ಮತ್ತೊಂದು ತಿಂಗಳ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

high-court-judgemnet-about-ima-fraud-case
ಹೈಕೋರ್ಟ್
author img

By

Published : Feb 11, 2021, 8:53 PM IST

ಬೆಂಗಳೂರು: ಐಎಂಎನಲ್ಲಿ ಹೂಡಿಕೆ ಮಾಡಿದ್ದ 2,695 ಕೋಟಿ ರೂಪಾಯಿ ಠೇವಣಿ ಹಿಂದಿರುಗಿಸಲು ಕೋರಿ ಒಟ್ಟು 65,258 ಕ್ಲೇಮು ಅರ್ಜಿಗಳನ್ನು ಸ್ವೀಕರಿಸಿದ್ದೇವೆ ಎಂದು ಸಕ್ಷಮ ಪ್ರಾಧಿಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

ಈ ಕುರಿತು ಇಮ್ರಾನ್ ಪಾಷಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಮಾಹಿತಿ ನೀಡಲಾಗಿದೆ.

ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತಾ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ 2695.13 ಕೋಟಿ ರೂ. ಠೇವಣಿ ಹಿಂದಿರುಗಿಸಲು ಕೋರಿ 69,099 ಖಾತೆದಾರರು 65,258 ಕ್ಲೇಮು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ 45 ಸಾವಿರ ಕ್ಲೇಮು ಅರ್ಜಿಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಉಳಿದ ಅರ್ಜಿಗಳ ಪರಿಶೀಲನೆಗೆ ಮತ್ತೊಂದು ತಿಂಗಳ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ಹಂತದ ಅರ್ಜಿಗಳನ್ನು ಪರಿಶೀಲನೆ ನಡೆಸಿದ ನಂತರ ಅರ್ಹ ಕ್ಲೇಮುದಾರರಿಗೆ 2,646 ಕೋಟಿ ರೂಪಾಯಿ ಠೇವಣಿ ಹಿಂದಿರುಗಿಸಬೇಕಾಗುತ್ತದೆ. ಈಗಾಗಲೇ ಪಾವತಿಯಾಗಿರುವ ಹಣ ಕಡಿತಗೊಳಿಸಿದರೆ 1372 ಕೋಟಿ ನೀಡಬೇಕಾಗುತ್ತದೆ. ಮೊದಲಿಗೆ 50 ಸಾವಿರ ರೂ.ವರೆಗಿನ ಹಣ ಮರುಪಾವತಿಸಲಾಗುವುದು. ಇನ್ನು 134 ಕೋಟಿ ರೂ. ಹಿಂದಿರುಗಿಸುವಂತೆ ಐಟಿ ಇಲಾಖೆಗೆ ಪತ್ರ ಬರೆಯಲಾಗಿದೆ. ಠೇವಣಿಗಿಂತ ಹೆಚ್ಚಿನ ಹಣ ಪಡೆದವರಿಂದಲೂ ಹಣ ಹಿಂದಿರುಗಿಸಲು ಸೂಚಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ಓದಿ: ಬಾದಾಮಿ : ವಿವಿಧ ಅಭಿವೃದ್ದಿ ಕಾರ್ಯಗಳಿಗೆ ನಾಳೆ ಶಂಕುಸ್ಥಾಪನೆ

ಲಿಖಿತ ವರದಿ ದಾಖಲಿಸಿಕೊಂಡಿರುವ ಪೀಠ, ಆದಷ್ಟು ಬೇಗ ಠೇವಣಿದಾರರಿಗೆ ಹಣ ಹಿಂದಿರುಗಿಸಬೇಕು. ಎಷ್ಟು ಸಮಯದೊಳಗೆ ಉಳಿದ ಅರ್ಜಿಗಳ ಪರಿಶೀಲನಾ ಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾ. 15ರೊಳಗೆ ವರದಿ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.