ETV Bharat / state

ಅವಧಿಗೂ ಮುನ್ನ ನೌಕರನ ನಿವೃತ್ತಿಗೆ ಸೂಚಿಸಿದ್ದ ಕೆಎಸ್​​ಸಿಎಗೆ ಹೈಕೋರ್ಟ್ ನೋಟಿಸ್​ - ಈಟಿವಿ ಭಾರತ ಕರ್ನಾಟಕ

ನೌಕರರೊಬ್ಬರನ್ನು ಅವಧಿಗೂ ಮೊದಲು ನಿವೃತ್ತಿಯಾಗುವಂತೆ ಒತ್ತಾಯಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್​.ಜಿ ಪಂಡಿತ್ ಅವರಿದ್ದ ಏಕಸದಸ್ಯ ಪೀಠವು ಪ್ರತಿವಾದಿಗಳಾದ ಕಾರ್ಮಿಕ ಇಲಾಖೆ ಹಾಗೂ ಕೆಎಸ್​​ಸಿಎಗೆ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ಹೈಕೋರ್ಟ್
karnataka high court
author img

By

Published : Nov 11, 2022, 8:21 AM IST

ಬೆಂಗಳೂರು: ರಾಜ್ಯದಲ್ಲಿ ನಿವೃತ್ತಿ ವಯಸ್ಸು 60 ಇದ್ದರೂ 58 ವರ್ಷಕ್ಕೆ ನೌಕರರೊಬ್ಬರನ್ನು ನಿವೃತ್ತಿಗೊಳಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್​​ಸಿಎ) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಕೆಎಸ್‌ಸಿಎಯ 58 ವರ್ಷದ ನೌಕರ ಜೆ.ರಾಜಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಏಕಸದಸ್ಯ ಪೀಠವು ಪ್ರತಿವಾದಿಗಳಾದ ಕಾರ್ಮಿಕ ಇಲಾಖೆ ಹಾಗೂ ಕೆಎಸ್​​ಸಿಎಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರಿಗೆ 58 ವರ್ಷ ತುಂಬಿರುವುದಾಗಿ ತಿಳಿಸಿ ಕೆಎಸ್​​ಸಿಎ 2022ರ ಮಾರ್ಚ್ 13 ರಂದು ಪತ್ರ ಬರೆದು ನಿವೃತ್ತರಾಗುವಂತೆ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜಿದಾರ, ನನ್ನ ನಿವೃತ್ತಿಯ ಆದೇಶ ಪತ್ರ ಮರುಪರಿಶೀಲನೆ ಮಾಡಬೇಕು ಎಂದು ಕೋರಿ 2022ರ ಜುಲೈ 11ರಂದು ಕೆಎಸ್‌ಸಿಎಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ, ಕೆಎಸ್​​ಸಿಎ ಈ ಮನವಿಯನ್ನು ತಿರಸ್ಕರಿಸಿತ್ತು.

ರಾಜ್ಯ ಸರ್ಕಾರದ ಅಧಿಸೂಚನೆ: ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದು, ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸನ್ನು 58 ರಿಂದ 60 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಕರ್ನಾಟಕ ಕೈಗಾರಿಕಾ ಸ್ಥಾಪನೆ ನಿಯಮಗಳು 1961ರ ವೇಳಾಪಟ್ಟಿ1 ಅನ್ನು ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ 2017ರ ಮಾರ್ಚ್ 27ರಂದು ಅಧಿಸೂಚನೆ ಹೊರಡಿಸಿದೆ.

ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ನಿವೃತ್ತಿಯ ವಯಸ್ಸು 60 ವರ್ಷಗಳಾಗಿರಬೇಕು. ಆದರೆ, ಕೆಎಸ್​​ಸಿಎ 58 ವರ್ಷಕ್ಕೆ ನಿವೃತ್ತರಾಗುವಂತೆ ಸೂಚಿಸಿದೆ. ಹೀಗಾಗಿ ಕೆಎಸ್​​ಸಿಎ ಸೂಚನೆ ರದ್ದು ಪಡಿಸಬೇಕೆಂದು ಅವರು ಕೋರಿದ್ದರು.

ಇದನ್ನೂ ಓದಿ:'ವಶಪಡಿಸಿಕೊಂಡ ವಾಹನವನ್ನು ಠಾಣೆ ಮುಂದೆ ನಿಲ್ಲಿಸುವುದರಿಂದ ಪ್ರಯೋಜನವಿಲ್ಲ, ಬಾಂಡ್ ಪಡೆದು ಬಿಡುಗಡೆಗೆ ಸೂಚನೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.