ETV Bharat / state

ಕೋವಿಡ್ ಟೆಸ್ಟ್ ವರದಿ ವಿಳಂಬ: ಸರ್ಕಾರದ ವಿವರಣೆಗೆ ಹೈಕೋರ್ಟ್ ಅಸಮಾಧಾನ - ಹೈಕೋರ್ಟ್

ಕೊರೊನಾ ಸೋಂಕಿತ ಮೃತಪಟ್ಟರು ಸಹ ವರದಿ ತಡವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹೊಸದಾಗಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

high-court-is-displeased-with-the-governments-explanation
ಸರ್ಕಾರದ ವಿವರಣೆಗೆ ಹೈಕೋರ್ಟ್ ಅಸಮಾಧಾನ
author img

By

Published : May 21, 2021, 10:57 PM IST

ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಹೈಕೋರ್ಟ್ ಚಾಲಕನ ಪ್ರಯೋಗಾಲಯದ ವರದಿ ವಿಳಂಬವಾದ ಕುರಿತು ಸರ್ಕಾರ ಸಲ್ಲಿಸಿರುವ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ ಹೊಸದಾಗಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.

ವರದಿ ವಿಳಂಬಕ್ಕೆ ಕಾರಣವಾದ ಪ್ರಯೋಗಾಲಯದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪರೀಕ್ಷಾ ವರದಿ ಕೇವಲ ಎರಡು ಗಂಟೆ ವಿಳಂಬವಾಗಿದೆ ಎಂದು ಹೇಳಲಾಗಿದೆ. ಇವೆಲ್ಲಾ ಕಣ್ಣೊರೆಸುವ ತಂತ್ರ, ಇದನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರದ ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ಸರ್ಕಾರದ ವರದಿ ತಿರಸ್ಕರಿಸಿರುವ ಪೀಠ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ವರದಿ ವಿಳಂಬಕ್ಕೆ ಕಾರಣವಾದ ಪ್ರಯೋಗಾಲಯದ ವಿರುದ್ಧ ಕ್ರಮ ಕೈಗೊಂಡು ಹೊಸದಾಗಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್.ಸುಬ್ರಮಣ್ಯ, ವರದಿ ಮೊಹರು ಮಾಡಿದ ಲಕೋಟೆಯಲ್ಲಿತ್ತು. ಅದರಲ್ಲಿನ ವಿವರಗಳು ತಿಳಿದಿಲ್ಲ. ಹಾಗಾಗಿ ಪರಿಶೀಲಿಸಿ ಕ್ರಮ ಕೈಗೊಂಡು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹೊಸದಾಗಿ ವರದಿ ಸಲ್ಲಿಸುವ ಭರವಸೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ : ಕೋವಿಡ್ ಸೋಂಕಿಗೆ ತುತ್ತಾಗಿದ್ದ ಹೈಕೋರ್ಟ್ ಚಾಲಕ ನಗರದ ಖಾಸಗಿ ಲ್ಯಾಬ್​ನಲ್ಲಿ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಿದ್ದರು. ಗಂಟಲು ದ್ರವದ ಮಾದರಿ ಕೊಟ್ಟು ಮೂರು ದಿನ ಕಳೆದು ಸೋಂಕಿತ ಮೃತಪಟ್ಟರು ವರದಿ ಬಂದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೀಠ, ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

ಓದಿ:ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲಗಳ ಮರುಪಾವತಿ ಗಡುವು ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.