ETV Bharat / state

ಮಳೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮರಣ ಪ್ರಮಾಣ ಪತ್ರ ವಿತರಿಸಲು ಹೈಕೋರ್ಟ್ ಸೂಚನೆ

ಬಿಬಿಎಂಪಿ ನೌಕರನ ಮರಣ ದೃಢೀಕರಣ ಪತ್ರವನ್ನು ಒಂದು ತಿಂಗಳೊಳಗೆ ಮರಣ ಪ್ರಮಾಣ ಪತ್ರ ವಿತರಿಸುವಂತೆ ಹೈಕೋರ್ಟ್​ ಸೂಚಿಸಿದೆ.

high-court-instructs-to-issue-death-certificate-of-person-washed-away-in-water
ಮಳೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮರಣ ಪ್ರಮಾಣ ಪತ್ರ ವಿತರಿಸಲು ಹೈಕೋರ್ಟ್ ಸೂಚನೆ
author img

By ETV Bharat Karnataka Team

Published : Sep 7, 2023, 9:26 PM IST

ಬೆಂಗಳೂರು : ಕಳೆದ ಆರು ವರ್ಷಗಳ ಹಿಂದೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಿಬಿಎಂಪಿ ನೌಕರನೊಬ್ಬನ ಮರಣ ದೃಢೀಕರಣ ಪತ್ರ ವಿತರಿಸಲು ವಿಳಂಬ ಧೋರಣೆ ಅನುಸರಿಸಿದ ಪಾಲಿಕೆಯ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮುಂದಿನ ಒಂದು ತಿಂಗಳೊಳಗೆ ಮರಣ ಪ್ರಮಾಣ ಪತ್ರ ವಿತರಿಸಲು ನಿರ್ದೇಶನ ನೀಡಿದೆ.

ಪತಿಯ ಮರಣ ದೃಢೀಕರಣ ಪತ್ರ ವಿತರಿಸಲು ವಿನಾಃಕಾರಣ ವಿಳಂಬ ಮಾಡುತ್ತಿದ್ದ ಬಿಬಿಎಂಪಿ ಕ್ರಮ ಪ್ರಶ್ನಿಸಿ ಎಸ್.ಪಿ. ಸರಸ್ವತಿ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ಪ್ರಕರಣದಲ್ಲಿ ಮೃತ ಬಿಬಿಎಂಪಿ ನೌಕರ ಶಾಂತಕುಮಾರ್ ಅವರ ಸಾವನ್ನು ವೈದ್ಯರಿಂದ ದೃಢೀಕರಿಸಿದ ಫಾರಂ ನಂ 4ಎ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿದ್ದ ಬಿಬಿಎಂಪಿ ನಡೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಅರ್ಜಿದಾರರ ಪತಿಯು ಬಿಬಿಎಂಪಿಯಲ್ಲಿ ಕೆಲಸ ಮಾಡುವ ವೇಳೆ ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಖುದ್ದು ಪಾಲಿಕೆಯ ಅಧಿಕಾರಿಗಳೇ ಹುಡುಕಾಟ ನಡೆಸಿದ್ದರೂ ಮೃತದೇಹ ಪತ್ತೆಯಾಗಲಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಬಿಬಿಎಂಪಿ ಮೃತನ ಪತ್ನಿಗೆ ಬಿಬಿಎಂಪಿ 10 ಲಕ್ಷ ರೂ. ಪರಿಹಾರ ಪಾವತಿಸಿದೆ. ಹೀಗಿದ್ದರೂ ವೈದ್ಯರು ಸಾವು ಸಂಭವಿಸಿದೆ ಎಂಬುದಾಗಿ ಧೃಢೀಕರಿಸಿ ಕರ್ನಾಟಕ ಮರಣ ಮತ್ತು ಜನನ ನೋಂದಣಿ ಅಧಿನಿಯಮ-199ರ ನಿಯಮ 10(3)ರ ಅಡಿ ಫಾರಂ ನಂ. 4ಎ ಪ್ರಮಾಣ ಪತ್ರ ನೀಡಬೇಕು ಎನ್ನುವುದು ಸಂಪೂರ್ಣವಾಗಿ ಸಮರ್ಥನೀಯ ಮತ್ತು ತರ್ಕಬದ್ಧವಾಗಿ ಇಲ್ಲ.

ಬಿಬಿಎಂಪಿಯ ನಡೆ ತೃಪ್ತಿದಾಯಕವಾಗಿಲ್ಲ ಹಾಗೂ ಅರ್ಜಿದಾರರಿಗೆ ಅನ್ಯಾಯ ಉಂಟು ಮಾಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಅಲ್ಲದೆ, ಅರ್ಜಿದಾರರ ಪತಿ 2017ರಲ್ಲಿ ಸಾವನ್ನಪ್ಪಿದ್ದಾರೆ. ಅವರ ಮರಣ ಧೃಡೀಕರಣ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ಆರು ವರ್ಷಗಳಿಂದ ವಂಚಿತರಾಗಿದ್ದಾರೆ. ಇದರಿಂದ ಮರಣ ವರದಿಯನ್ನು ವೈದ್ಯಕೀಯ ದೃಢೀಕರಣ ಮಾಡಬೇಕಿಲ್ಲ. ನಿಯಮಗಳನ್ನು ಪಾಲಿಸಬೇಕು ಎಂದು ಆದ್ಯತೆ ನೀಡುವ ಮೂಲಕ ಬಿಬಿಎಂಪಿ ನಿಯಮ ನಿಷ್ಠುರವಾಗಿ ನಡೆದುಕೊಳ್ಳಬಾರದು. ಇದೊಂದು ವಿಶೇಷ ಪ್ರಕರಣವಾಗಿ ಪರಿಗಣಿಸಿ, 30 ದಿನಗಳಲ್ಲಿ ಅರ್ಜಿದಾರರಿಗೆ ಪತಿಯ ಮರಣ ದೃಢೀಕರಣ ಪತ್ರ ನೀಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಎಸ್.ಶಾಂತಕುಮಾರ (35) ಅವರು ಬಿಬಿಎಂಪಿಯಲ್ಲಿ ಎಕ್ಸವೇಟರ್ ಅಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2017ರ ಮೇ 20ರಂದು ನಗರದಲ್ಲಿ ಭಾರಿ ಮಳೆ ಸುರಿದಿತ್ತು. ಅಂದು ರಾತ್ರಿ 9 ಗಂಟೆ ವೇಳೆಗೆ ಜೆ.ಸಿ. ನಗರದ 60 ಅಡಿ ರಸ್ತೆಯಲ್ಲಿ ಇಟಾಚಿ ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದರು. ಮಳೆ ಜೋರಾಗಿ ಬಂದ ಕಾರಣ ಅವರು ನೀರಿನಲ್ಲಿ ಕೊಚ್ಚಿ ಹೋಗಿ, ಎಲ್ಲಿಯೂ ಅವರ ದೇಹ ಪತ್ತೆಯಾಗಲಿಲ್ಲ. ಇದರಿಂದ ಶಾಂತಕುಮಾರ್ ಸಾವನ್ನಪ್ಪಿದ್ದಾರೆ ಎಂದು ಹೇಳಿ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಅವರ ಆದೇಶದ ಮೇರೆಗೆ ಅರ್ಜಿದಾರರಿಗೆ 10 ಲಕ್ಷ ರೂ. ಪರಿಹಾರ ಪಾವತಿಸಲಾಗಿತ್ತು. ಬಳಿಕ ಸರಸ್ವತಿ ತಮ್ಮ ಪತಿಯ ಮರಣ ದೃಢೀಕರಣ ಪತ್ರ ನೀಡುವಂತೆ ಕೋರಿದ್ದು, ಅದನ್ನು ಬಿಬಿಎಂಪಿ ವಿತರಿಸದ್ದಕ್ಕೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ಕರ್ನಾಟಕ ಮರಣ ಮತ್ತು ಜನ ನೋಂದಣಿ ಅಧಿನಿಯಮಗಳು-1999ರ ನಿಯಮ 7ರ ಪ್ರಕಾರ ಮರಣ ಪ್ರಮಾಣಪತ್ರ ವಿತರಿಸಲು ಕೆಲವೊಂದು ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ಆಸ್ಪತ್ರೆಯಲ್ಲಿ ಸಾವನ್ನಪಿದರೆ ಸೆಕ್ಷನ್ 103)ರ ಪ್ರಕಾರ ಫಾರಂ ನಂ.4ನ್ನು ನೀಡಬೇಕಾಗುತ್ತದೆ. ಇತರೆ ಪ್ರದೇಶದಲ್ಲಿ ಸಾವು ಸಂಭವಿಸಿದ್ದರೆ ಫಾರಂ ನಂ.4ಎ ರೂಪದಲ್ಲಿ ವೈದ್ಯರಿಂದ ಮರಣ ವರದಿ ದೃಢೀಕರಣ ಮಾಡಿಕೊಂಡು ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಅದರ ಆಧಾರದ ಮೇಲೆ ಮರಣ ಪತ್ರ ಕೋರಿದರೆ ಪರಿಗಣಿಸಲು ಸಾಧ್ಯವಿದೆ. ಅರ್ಜಿದಾರರು ಅಂತಹ ಪ್ರಮಾಣ ಪತ್ರವನ್ನು ಒದಗಿಸದ ಕಾರಣ ಧೃಢೀಕರಣ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಶಾಂತಕುಮಾರ್ ಮೃತದೇಹ ಪತ್ತೆಯಾಗಿಲ್ಲ. ಒಂದೊಮ್ಮೆ ಅವರು ಹಿಂದಿರುಗಿ ಬಂದರೆ ಮರಣ ಪ್ರಮಾಣ ಪತ್ರವು ಸುಳ್ಳಾಗಲಿದೆ ಎಂದು ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.