ETV Bharat / state

ರಾಜ್ಯದಲ್ಲಿ ಶಬ್ದ ಮಾಲಿನ್ಯ ಅಳೆಯಲು ಅಗತ್ಯ ಉಪಕರಣಗಳನ್ನು ಒದಗಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - ಮಾಲಿನ್ಯ ನಿಯಂತ್ರಣ ಮಂಡಳಿ

ರಾಜ್ಯ ಸರ್ಕಾರ ಶಬ್ದ ಮಾಲಿನ್ಯ ಅಳೆಯಲು ಕೂಡಲೇ ಅಗತ್ಯ ಪ್ರಮಾಣದಲ್ಲಿ ನಾಯ್ಸ್ ಮೀಟರ್​​ಗಳನ್ನು ಖರೀದಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

High Court instructs the government to provide the necessary tools to measure noise pollution
ರಾಜ್ಯದಲ್ಲಿ ಶಬ್ಧ ಮಾಲಿನ್ಯ ಅಳೆಯಲು ಅಗತ್ಯ ಉಪಕರಣಗಳನ್ನು ಒದಗಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
author img

By

Published : Dec 21, 2020, 4:00 PM IST

ಬೆಂಗಳೂರು: ರಾಜ್ಯದಲ್ಲಿನ ಶಬ್ದ ಮಾಲಿನ್ಯ ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಇರುವುದೇ 234 ಉಪಕರಣಗಳು ಎಂಬ ಹೇಳಿಕೆಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಮಾಲಿನ್ಯ ಅಳೆಯಲು ಅಗತ್ಯ ಪ್ರಮಾಣದಲ್ಲಿ ಉಪಕರಣಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ವಿವಿಧ ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ರಾಜ್ಯದಲ್ಲಿನ ಶಬ್ದ ಮಾಲಿನ್ಯ ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಕೇವಲ 234 ನಾಯ್ಸ್ ಮೀಟರ್​ಗಳಿವೆ ಎನ್ನಲಾಗಿದೆ. ಇಷ್ಟು ಕಡಿಮೆ ಸಂಖ್ಯೆ ಉಪಕರಣಗಳು ರಾಜ್ಯದಲ್ಲಿನ ಶಬ್ದ ಮಾಲಿನ್ಯ ಅಳೆಯಲು ಸಾಕಾಗುವುದಿಲ್ಲ. ಶಬ್ದ ಮಾಲಿನ್ಯ ತಡೆ ಕಾಯ್ದೆ ಜಾರಿಯಾದ 20 ವರ್ಷಗಳ ನಂತರವೂ ಸೂಕ್ತ ಪ್ರಮಾಣದಲ್ಲಿ ಉಪಕರಣಗಳನ್ನು ಹೊಂದಿಲ್ಲದಿರುವುದು ಸರಿಯಲ್ಲ. ಹೀಗಾಗಿ ರಾಜ್ಯ ಸರ್ಕಾರ ಶಬ್ದ ಮಾಲಿನ್ಯ ಅಳೆಯಲು ಕೂಡಲೇ ಅಗತ್ಯ ಪ್ರಮಾಣದಲ್ಲಿ ನಾಯ್ಸ್ ಮೀಟರ್​​ಗಳನ್ನು ಖರೀದಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ಪೀಠಕ್ಕೆ ವಿವರಿಸಿ, ಮಂಡಳಿ ಬಳಿ ಒಟ್ಟು 234 ನಾಯ್ಸ್ ಮೀಟರ್​ಗಳಿವೆ. ಅವುಗಳಲ್ಲಿ ಈಗಾಗಲೇ 108 ಮೀಟರ್​ಗಳನ್ನು ಶಬ್ದ ಮಾಲಿನ್ಯ ಅಳೆಯಲು ಪೊಲೀಸರು ಮತ್ತಿತರೆ ಅಧಿಕಾರಿಗಳಿಗೆ ನೀಡಲಾಗಿದೆ. ಉಳಿದಂತೆ 126 ಮೀಟರ್​ಗಳ ಮಂಡಳಿಯಲ್ಲೇ ಇವೆ ಎಂದರು.

ಓದಿ: ಇಂಗ್ಲೆಂಡ್​ನಲ್ಲಿ ರೂಪ ಬದಲಿಸಿದ ಕೊರೊನಾ ವೈರಸ್: ಭಾರತದಲ್ಲಿ ಮುಂಜಾಗ್ರತೆ

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬೆಳಗಾವಿಯಲ್ಲಿ ಎಷ್ಟು ಮೀಟರ್​ಗಳನ್ನು ಅಳವಡಿಸಿದ್ದೀರಿ ಎಂದು ಪ್ರಶ್ನಿಸಿತು. ಸರ್ಕಾರಿ ವಕೀಲರು ಉತ್ತರಿಸಿ, ಬೆಳಗಾವಿಯನ್ನು ನಾಲ್ಕು ವಿಭಾಗಗಳಾಗಿ ವಿಂಡಗಿಸಿ ನಾಲ್ಕು ಕಡೆ ಮೀಟರ್ ಅಳವಡಿಸಲಾಗಿದೆ ಎಂದರು. ಅಷ್ಟು ದೊಡ್ಡ ನಗರಕ್ಕೆ 4 ಮೀಟರ್ ಸಾಕಾಗುತ್ತವೆಯೇ ಎಂದು ಪೀಠ ಪ್ರಶ್ನಿಸಿತು. ಜತೆಗೆ ದೊಡ್ಡ ನಗರ ಪ್ರದೇಶಗಳಲ್ಲಿ ಕಡಿಮೆ ಉಪಕರಣಗಳನ್ನು ಅಳವಡಿಸಿ ಸ್ಪಷ್ಟ ಅಂಕಿ-ಅಂಶ ಪಡೆಯಲು ಸಾಧ್ಯವಾಗದು. ಹೀಗಾಗಿ ಅಗತ್ಯ ಪ್ರಮಾಣದಲ್ಲಿ ಮೀಟರ್ ಅಳವಡಿಸಬೇಕಿದೆ ಎಂದಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.