ETV Bharat / state

ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗದು: ಹೈಕೋರ್ಟ್

ಮೋಟಾರು ವಾಹನಗಳ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ಆದೇಶಿಸಿದ ಪರಿಹಾರದ ಮೊತ್ತವನ್ನು ಹೈಕೋರ್ಟ್​ ಕಡಿಮೆ ಮಾಡಿದೆ.

High Court
ಹೈಕೋರ್ಟ್
author img

By

Published : Apr 19, 2023, 8:01 PM IST

Updated : Apr 19, 2023, 10:06 PM IST

ಬೆಂಗಳೂರು : ಬ್ಯಾಂಕ್‌ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನೇ ವ್ಯಕ್ತಿಯೊಬ್ಬರ ಆದಾಯ ಎಂಬುದಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಬ್ಯಾಂಕ್‌ ಪಾಸ್‌ಬುಕ್‌ನಲ್ಲಿ ನಮೂದಾಗುವ ಅಂಕಿಅಂಶಗಳನ್ನು ಪರಿಗಣಿಸಿ ಪರಿಹಾರ ನೀಡುವುದಕ್ಕೆ ಮೋಟಾರು ವಾಹನಗಳ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಪ್ರಭಾಕರ ಶಾಸ್ತ್ರಿ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಪರಿಹಾರ ಮೊತ್ತವನ್ನು ಕಡಿಮೆ ಮಾಡಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಮೃತರು ಬಟ್ಟೆ ವ್ಯಾಪಾರ ಮಾಡುತ್ತಿದ್ದು ಮಾಸಿಕ 50 ಸಾವಿರಗಳನ್ನು ದುಡಿಯುತ್ತಿದ್ದರು ಎಂಬುದಾಗಿ ಮೃತರ ಪತ್ನಿ ತಿಳಿಸಿದ್ದಾರೆ. ಆದರೆ, ಈ ವಾದವನ್ನು ಪುಷ್ಟೀಕರಿಸಲು ಯಾವುದೇ ಸೂಕ್ತ ದಾಖಲೆಗಳನ್ನು ಸಲ್ಲಿಸಿಲ್ಲ. ಬದಲಾಗಿ, ಮೃತರಿಗೆ ಸಂಬಂಧಿಸಿದ ಎರಡು ಬ್ಯಾಂಕ್ ಪಾಸ್‌ಬುಕ್‌ಗಳನ್ನು ಸಲ್ಲಿಸಿದ್ದಾರೆ. ಒಂದು ಮೃತರು ಮತ್ತವರ ಪತ್ನಿಯ ಜಂಟಿ ಖಾತೆಯಾಗಿದೆ. ಮತ್ತೊಂದು ಮೃತರ ಖಾತೆಯಾಗಿದ್ದು, ಎರಡು ಕೂಡಾ ವ್ಯವಹಾರ ಖಾತೆಗಳಲ್ಲ.

ಅಲ್ಲದೆ ಮಾಸಿಕ 50 ಸಾವಿರ ರೂ.ಗಳನ್ನು ದುಡಿಯುತ್ತಿರುವುದನ್ನು ನಂಬಿದರೂ ಅದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಈ ಸಂಬಂಧ ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಹೀಗಾಗಿ ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನೇ ಮಾಸಿಕ ಆದಾಯ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ನ್ಯಾಯಾಧಿಕರಣ 23.3 ಲಕ್ಷ ರೂ ಪರಿಹಾರ ಪಾವತಿಸುವಂತೆ ಸೂಚನೆ ನೀಡಿದ್ದ ಆದೇಶವನ್ನು ಬದಲಾಯಿಸಿ 16.00 ಲಕ್ಷ ರೂ.ಗಳನ್ನು ಪಾವತಿಸಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ..: ಆಂಧ್ರಪ್ರದೇಶ ಮೂಲದ ಕೆ.ಆರ್.ಪುರದ ನಿವಾಸಿ ಗಣೇಶ್ ಎಂಬುವರು 2016 ರ ಮಾರ್ಚ 3 ರಂದು ರಾತ್ರಿ 9.15ರ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಆಂಧ್ರದ ಚಿತ್ತೂರು-ಪಲಮನೇರು ಮುಖ್ಯರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಂಗಬಾಬು ವೃತ್ತದಲ್ಲಿ ಚಿತ್ತೂರು ಕಡೆಯಿಂದ ಅತಿ ವೇಗವಾಗಿ ಬಂದಿದ್ದ ಮಂಗಳೂರಿನಲ್ಲಿ ನೋಂದಾವಣೆಯಾಗಿರುವ ಮ್ಯಾಕ್ಸಿ ಕ್ಯಾಬ್ ಅರ್ಜಿದಾರರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ, ಅರ್ಜಿದಾರರ ಪತಿ ಸ್ಥಳದಲ್ಲಿಯೇ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.

ಮೃತರು 47 ವರ್ಷ ವಯಸ್ಸಿನವರಾಗಿದ್ದು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಮಾಸಿಕ 50 ಸಾವಿರ ರು.ಗಳನ್ನು ದುಡಿಯುತ್ತಿಸದ್ದು, ಅರ್ಜಿದಾರರು ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟ ವ್ಯಕ್ತಿಯನ್ನು ಅವಲಂಭಿಸಿದ್ದರು. ಇದರಿಂದಾಗಿ 50 ಲಕ್ಷ ರೂ ಪರಿಹಾರ ನೀಡಬೇಕು, ಮೃತರ ಪತ್ನಿ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಆಕ್ಷೇಪಣೆ ವ್ಯಕ್ತಪಡಿಸಿದ್ದ ವಿಮಾ ಕಂಪನಿ, ಅಪಘಾತಕ್ಕೀಡಾಚ ದ್ವಿಚಕ್ರವಾಹನ ಸವಾರ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕ ಚಾಲನಾ ಪರವಾನಗಿಯನ್ನು ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಪರಿಹಾರವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಎಲ್ಲ 22.3 ಲಕ್ಷ ರು.ಗಳ ಪರಿಹಾರವನ್ನು ನೀಡುವಂತೆ ನ್ಯಾಷನಲ್ ಇನ್ಷೂರೆನ್ಸ್ ಕಂಪನಿಗೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿ ವಿಮಾ ಕಂಪನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ : ಅರಣ್ಯ ಪ್ರದೇಶದಲ್ಲಿ ಗಾಳಿಯಂತ್ರ ಅಳವಡಿಕೆಗೆ ಅನುಮತಿ ಅಧಿಕಾರ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕಿಲ್ಲ: ಹೈಕೋರ್ಟ್​

Last Updated : Apr 19, 2023, 10:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.