ETV Bharat / state

ಸಮಾಜದ ಒಂದು ವರ್ಗದವರಿಗೆ ಪ್ರಬುದ್ಧತೆ ಕಡಿಮೆ, ಎಲ್ಲವನ್ನೂ ನಂಬುತ್ತಾರೆ: ಹೈಕೋರ್ಟ್ - twitter case in high Court

ಟ್ವಿಟರ್ ಖಾತೆ ರದ್ದು ಮಾಡಿರುವುದನ್ನು ಪ್ರಶ್ನಿಸಿ ಖಾತೆದಾರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಹೈಕೋರ್ಟ್ ನಿರಾಕರಿಸಿದೆ. ಹಲವರ ಟ್ವಿಟರ್ ಖಾತೆಗಳು ರದ್ದಾಗಿವೆ. ಅವರೆಲ್ಲ ನ್ಯಾಯಾಲಯಕ್ಕೆ ಬಂದಲ್ಲಿ ವಿಚಾರಣೆ ನಡೆಸುವುದಕ್ಕೆ ಸಮಯ ಸಾಕಾಗುವುದಿಲ್ಲ. ಈ ರೀತಿಯ ಅರ್ಜಿ ಸಲ್ಲಿಸಿದಲ್ಲಿ ಅತಿ ಹೆಚ್ಚು ದಂಡ ವಿಧಿಸಬೇಕಾಗುತ್ತದೆ ಎಂದು ಕೋರ್ಟ್​​ ಎಚ್ಚರಿಕೆ ನೀಡಿದೆ.

high-court-hearing-on-twitter-blocking-order
ಸಮಾಜದ ಒಂದು ವರ್ಗದವರಿಗೆ ಪ್ರಬುದ್ಧತೆ ಕಡಿಮೆ, ಎಲ್ಲವನ್ನೂ ನಂಬುತ್ತಾರೆ: ಹೈಕೋರ್ಟ್
author img

By

Published : Oct 28, 2022, 9:25 AM IST

ಬೆಂಗಳೂರು: ಸಮಾಜದ ಒಂದು ವರ್ಗದ ಪ್ರಬುದ್ಧತೆ ಮಟ್ಟ ಕಡಿಮೆಯಿದ್ದು, ಅವರು ಏನೇ ಇದ್ದರೂ ಅದನ್ನೇ ಸತ್ಯ ಎಂಬುದಾಗಿ ನಂಬುತ್ತಾರೆ ಎಂದು ಹೈಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ. ಕೆಲ ಟ್ವಿಟರ್​ ಖಾತೆಗಳನ್ನು ರದ್ದುಪಡಿಸಲು ಸೂಚನೆ ನೀಡಿದ್ದ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಟ್ವಿಟರ್​ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ದೀಕ್ಷಿತ್​ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಆಶೋಕ ಹಾರನಹಳ್ಳಿ, ಸರ್ಕಾರದ ಆದೇಶದಂತೆ ಒಂದು ಖಾತೆಯನ್ನು ರದ್ದು ಮಾಡಿದರೆ ಇಡೀ ಭವಿಷ್ಯದ ಮಾಹಿತಿಯನ್ನೇ ಬಂದ್​ ಮಾಡಿದಂತಾಗಲಿದೆ. ಅಲ್ಲದೆ, ಕೆಲವು ಟ್ವೀಟ್​ಗಳಿಂದ ಮಾನನಷ್ಟವಾಗಬಹುದು ಎಂದ ಮಾತ್ರಕ್ಕೆ ಖಾತೆಗಳನ್ನೇ ನಿರ್ಬಂಧಿಸಬೇಕೇ? ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದ ಮಾತ್ರಕ್ಕೆ ವಿದೇಶಿ ಮಾಲೀಕತ್ವದ ಸಂಸ್ಥೆಯನ್ನೇ ರದ್ದು ಮಾಡಬೇಕೇ ಎಂದು ನ್ಯಾಯಪೀಠಕ್ಕೆ ಪ್ರಶ್ನೆ ಮಾಡಿದರು.

ಅಲ್ಲದೆ, ನಾಗರಿಕರು ಸರಿಯಾದ ಮಾಹಿತಿ ಏನೆಂದು ಪತ್ತೆ ಮಾಡಬೇಕಾಗುತ್ತದೆ. ಪ್ರತಿ ದಿನ ಮಾಧ್ಯಮಗಳ ಮೆಲೆ ಅವಲಂಬನೆಯಾಗುವುದಕ್ಕೆ ಸಾಧ್ಯವಿಲ್ಲ. ಬಹುತೇಕ ಮಂದಿ ಸಾಮಾಜಿಕ ಜಾಲಾತಾಣಗಳನ್ನು ಬಳಕೆ ಮಾಡುತ್ತಿರುತ್ತಾರೆ. ಆದ್ದರಿಂದ ಮಾಹಿತಿಯ ಹರಿವನ್ನು ನಿರ್ಬಂಧಿಸುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ನೋಟಿಸ್​ ಜಾರಿ ಮಾಡದೆ ಟ್ವಿಟರ್​ ಖಾತೆ ರದ್ದು ಮಾಡುವಂತಿಲ್ಲ. ಈ ರೀತಿ ಖಾತೆ ರದ್ದು ಮಾಡಿರುವುದನ್ನು ಪ್ರಶ್ನಿಸಿ ಖಾತೆದಾರರು ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಮಧ್ಯಂತರ ಅರ್ಜಿ ವಿಚಾರಣೆಗೆ ನಿರಾಕಾರ: ಇದೇ ವೇಳೆ ಟ್ವಿಟರ್ ಖಾತೆ ರದ್ದು ಮಾಡಿರುವುದನ್ನು ಪ್ರಶ್ನಿಸಿ ಖಾತೆದಾರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಹೈಕೋರ್ಟ್ ನಿರಾಕರಿಸಿತು. ಹಲವು ಮಂದಿಯ ಖಾತೆಗಳು ರದ್ದಾಗಿವೆ. ಅವರುಗಳು ನ್ಯಾಯಾಲಯಕ್ಕೆ ಬಂದಲ್ಲಿ ವಿಚಾರಣೆ ನಡೆಸುವುದಕ್ಕೆ ಸಮಯ ಸಾಕಾಗುವುದಿಲ್ಲ. ಈ ರೀತಿಯ ಅರ್ಜಿ ಸಲ್ಲಿಸಿದಲ್ಲಿ ಅತಿ ಹೆಚ್ಚು ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ ಅರ್ಜಿದಾರರು ತಮ್ಮ ಅರ್ಜಿ ಹಿಂಪಡೆದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ನವೆಂಬರ್​ 16ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಆನ್ಲೈನ್​ ಗೇಮ್​ಗಳಿಗೆ ಹೆಚ್ಚುವರಿ ಟ್ಯಾಕ್ಸ್ ವಿಧಿಸಿದ ತೆರಿಗೆ ಇಲಾಖೆ.. ಹೈಕೋರ್ಟ್ ಮೆಟ್ಟಿಲೇರಿದ ಕಂಪನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.