ETV Bharat / state

ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ತೋರಿದ ಹೈಕೋರ್ಟ್ - bangalore traffic

ಮರಗಳನ್ನು ಕಡಿಯುವುದರಿಂದ ಪರಿಸರಕ್ಕೆ ದೊಡ್ಡಮಟ್ಟದ ನಷ್ಟ ಉಂಟಾಗುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೂಡಾ ಅಗತ್ಯ. ಸುರಂಜನ್ ದಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ಕೆಳ ಸೇತುವೆ ನಿರ್ಮಾಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಉಳಿದ 10 ಮರಗಳನ್ನು ತೆರವು ಮಾಡಿ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಮುಂದುವರೆಸಬಹುದು ಎಂದು ನ್ಯಾಯಾಲಯ ಹೇಳಿದೆ.

ಅಂಡರ್ ಪಾಸ್ ನಿರ್ಮಾಣ ಕಾಮಗಾರಿಗೆ ಹೈಕೋರ್ಟ್ ಗ್ರೀನ್​ ಸಿಗ್ನಲ್​

author img

By

Published : Aug 31, 2021, 7:16 AM IST

ಬೆಂಗಳೂರು: ನಗರದ ಸುರಂಜನ್ ದಾಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಅಂಡರ್‌ಪಾಸ್ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಗ್ರೀನ್‌ಸಿಗ್ನಲ್ ನೀಡಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮರಗಳನ್ನು ಕತ್ತರಿಸುವುದನ್ನು ಪ್ರಶ್ನಿಸಿ ಸ್ವಾತಿ ದಾಮೋದರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ, ಉದ್ದೇಶಿತ 10 ಮರಗಳನ್ನು ಕತ್ತರಿಸಿ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿತು.

ಸಂಚಾರ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ಭಾಗವಾಗಿ ನಗರದ ಸುರಂಜನ್ ದಾಸ್ ರಸ್ತೆಯ ಜಂಕ್ಷನ್ ಬಳಿ ಬಿಬಿಎಂಪಿಯು ಅಂಡರ್‌ಪಾಸ್ ನಿರ್ಮಾಣ ಮಾಡಲು ಯೋಜನೆ ಜಾರಿ ಮಾಡಿದೆ. ಅದಕ್ಕಾಗಿ 48 ಮರಗಳನ್ನು ತೆರವು ಮಾಡಲು ಉದ್ದೇಶಿಸಿದೆ. ಅದರಂತೆ ಈಗಾಗಲೇ ಒಂದಷ್ಟು ಮರಗಳನ್ನು ತೆರವು ಮಾಡಿದ್ದು, ಕೆಲವನ್ನು ಸ್ಥಳಾಂತರಿಸಲಾಗಿದೆ. ಅದರ ಭಾಗವಾಗಿ 10 ಮರಗಳನ್ನು ತೆರವು ಮಾಡಬೇಕಿತ್ತು. ಆದರೆ, ನ್ಯಾಯಾಲಯದ ತಡೆಯಾಜ್ಞೆ ಇದ್ದ ಹಿನ್ನೆಲೆಯಲ್ಲಿ ಮರಗಳನ್ನು ಕತ್ತರಿಸಿರಲಿಲ್ಲ. ಅರ್ಜಿ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಪ್ರಕರಣದಲ್ಲಿ ಮರಗಳನ್ನು ಕತ್ತರಿಸುವುದಕ್ಕೆ ಸಂಬಂಧಿಸಿದಂತೆ ಮರ ತಜ್ಞ ಸಮಿತಿ ನೀಡಿದ್ದ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಹಾಗೆಯೇ, ಎಚ್‌ಎಎಲ್, ವೈಟ್‌ಫೀಲ್ಡ್ ಮತ್ತು ಮಾರತಹಳ್ಳಿಗೆ ಹೋಗುವ ದಾರಿಯಾಗಿದ್ದು, ಅಂಡರ್ ಪಾಸ್ ಕಾಮಗಾರಿಗೆ ಎಚ್‌ಎಎಲ್ ತನ್ನ ಜಾಗವನ್ನು ಉಚಿತವಾಗಿ ಬಿಬಿಎಂಪಿಗೆ ಬಿಟ್ಟುಕೊಟ್ಟಿದೆ. ಈಗಾಗಲೇ ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕೆಲಸಗಳು ಬಾಕಿ ಇವೆ. ಕತ್ತರಿಸಿದ ಮರಗಳಿಗೆ ಪರಿಹಾರವಾಗಿ ಈಗಾಗಲೇ ಸಾಕಷ್ಟು ಗಿಡಗಳನ್ನು ನೆಡೆಲಾಗುವುದು ಎಂದು ಪೀಠಕ್ಕೆ ತಿಳಿಸಿದರು.

ಹೇಳಿಕೆ ಪರಿಗಣಿಸಿದ ಪೀಠ, ಮರಗಳನ್ನು ಕಡಿಯುವುದರಿಂದ ವಾಸ್ತವವಾಗಿ ಪರಿಸರಕ್ಕೆ ದೊಡ್ಡಮಟ್ಟದ ನಷ್ಟ ಉಂಟಾಗುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಅಗತ್ಯವಾಗಿರುತ್ತದೆ. ಇನ್ನು ಸುರಂಜನ್ ದಾಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ಕೆಳ ಸೇತುವೆ ನಿರ್ಮಾಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಉಳಿದ 10 ಮರಗಳನ್ನು ತೆರವು ಮಾಡಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಮುಂದುವರೆಸಬಹುದು. ಕತ್ತರಿಸಿದ ಮರಗಳಿಗೆ ಪರಿಹಾರವಾಗಿ ಗಿಡಗಳನ್ನು ಬೆಳೆಸಬೇಕು. ಈ ಸಂಬಂಧ 3 ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಪಾಲಿಕೆಗೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.