ETV Bharat / state

ಕಡಿಮೆ ಬೆಲೆಗೆ ಮಾರಾಟ ಆರೋಪ : ತನಿಖೆ ಪ್ರಶ್ನಿಸಿ ಅಮೆಜಾನ್, ಫ್ಲಿಪ್ ಕಾರ್ಟ್ ಸಲ್ಲಿಸಿದ್ದ ಅರ್ಜಿ ವಜಾ - application filed by Amazon and Flipkart in High Court

ತಮ್ಮ ವಿರುದ್ಧ ಸಿಸಿಐ ನಡೆಸಲು ಉದ್ದೇಶಿಸಿರುವ ತನಿಖೆ ಪ್ರಶ್ನಿಸಿ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಹಾಗೂ ಫ್ಲಿಪ್‌ ಕಾರ್ಟ್‌ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ಧ ಏಕಸದಸ್ಯ ಪೀಠವು ಅರ್ಜಿಗಳ ವಿಚಾರಣೆ ನಡೆಸಿ, ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬಳಿಕ ವಜಾ ಮಾಡಿ ಆದೇಶಿಸಿದೆ.

high-court-dismisses-application-filed-by-amazon-and-flipkart-challenging-the-investigation
ತನಿಖೆ ಪ್ರಶ್ನಿಸಿ ಅಮೆಜಾನ್, ಫ್ಲಿಪ್ ಕಾರ್ಟ್ ಸಲ್ಲಿಸಿದ್ದ ಅರ್ಜಿ ವಜಾ
author img

By

Published : Jun 12, 2021, 12:00 AM IST

ಬೆಂಗಳೂರು : ಸ್ಪರ್ಧಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದಡಿ ಭಾರತ ಸ್ಪರ್ಧಾ ಆಯೋಗ (ಸಿಸಿಐ) ತನಿಖೆ ಮಾಡಲು ಮುಂದಾಗಿರುವ ಕ್ರಮ ಪ್ರಶ್ನಿಸಿ ಅಮೆಜಾನ್ ಹಾಗೂ ಫ್ಲಿಫ್ ಕಾರ್ಟ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ. ತಮ್ಮ ವಿರುದ್ಧ ಸಿಸಿಐ ನಡೆಸಲು ಉದ್ದೇಶಿಸಿರುವ ತನಿಖೆ ಪ್ರಶ್ನಿಸಿ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಹಾಗೂ ಫ್ಲಿಪ್‌ ಕಾರ್ಟ್‌ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು.

ನ್ಯಾ. ಪಿ.ಎಸ್ ದಿನೇಶ್ ಕುಮಾರ್ ಅವರಿದ್ಧ ಏಕಸದಸ್ಯ ಪೀಠವು ಅರ್ಜಿಗಳ ವಿಚಾರಣೆ ನಡೆಸಿ, ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬಳಿಕ ವಜಾ ಮಾಡಿ ಆದೇಶಿಸಿದೆ. ಸ್ಪರ್ಧಾ ಕಾಯಿದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸಿಸಿಐ ಈ ಎರಡೂ ಕಂಪೆನಿಗಳ ವಿರುದ್ಧ ತನಿಖೆಗೆ ಮುಂದಾಗಿತ್ತು. ಅಮೆಜಾನ್‌ ಹಾಗೂ ಫ್ಲಿಪ್ ಕಾರ್ಟ್ ಸಂಸ್ಥೆಗಳ ಪರ ವಾದ ಮಂಡಿಸಿದ್ದ ವಕೀಲರು, ಇ-ಕಾಮರ್ಸ್ ಸಂಸ್ಥೆಗಳು ಎಲ್ಲಿಯೂ ಸ್ಪರ್ಧಾ ಕಾಯ್ದೆ ಉಲ್ಲಂಘನೆ ಮಾಡಿಲ್ಲ. ಹೀಗಾಗಿ ಸಿಸಿಐ ನಡೆಸುತ್ತಿರುವ ತನಿಖೆಯನ್ನು ರದ್ದು ಮಾಡಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ:

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ಸಂಸ್ಥೆಗಳು ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿಯಲ್ಲಿ ಬೆಲೆ ನಿಗದಿ ಮಾಡುತ್ತಿವೆ. ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿರುವ ಜತೆಗೆ, ಆದ್ಯತೆಯ ಮಾರಾಟಗಾರರ ಜತೆಗೆ ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಎಂದು ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ಹಾಗೂ ದೆಹಲಿ ವ್ಯಾಪಾರ್ ಮಹಾಸಂಘ್ (ಡಿವಿಎಂ) ಆರೋಪಿಸಿದ್ದವು. ಅಲ್ಲದೇ, ಈ ಕುರಿತು ಸಿಸಿಐಗೆ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಸಿಸಿಐ ಅಮೆಜಾನ್ ಹಾಗೂ ಫ್ಲಿಫ್ ಕಾರ್ಟ್ ವಿರುದ್ಧ ತನಿಖೆಗೆ ಮುಂದಾಗಿದ್ದರಿಂದ, ತನಿಖೆ ರದ್ದು ಕೋರಿ ಇ-ಕಾಮರ್ಸ್ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.

ಇದನ್ನೂ ಓದಿ: ಸಂಬಳ ಹೈಕ್​ ಆಗದೇ ಸಂಸಾರ ನಡೆಸಲಾಗುತ್ತಿಲ್ಲ: ಡೆತ್​ನೋಟ್​ ಬರೆದಿಟ್ಟು ಕಾರ್ಮಿಕ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.