ETV Bharat / state

ಕಾವೇರಿ ತಂತ್ರಾಂಶದ ಕುರಿತು ಪ್ರಚಾರ ನೀಡಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ - ದಾಖಲೆಗಳ ನೋಂದಣಿಗಾಗಿ ಅಳವಡಿಸಿರುವ ಕಾವೇರಿ

ಕಾವೇರಿ ತಂತ್ರಾಂಶದ ಕುರಿತು ಪ್ರಚಾರ ನೀಡಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

High Court directs government  promote Cauvery software  Cauvery software news  ಕಾವೇರಿ ತಂತ್ರಾಂಶದ ಕುರಿತು ಪ್ರಚಾರ  ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ  ಕಂದಾಯ ಇಲಾಖೆ ಅಧೀನದ ಸಬ್ ರಿಜಿಸ್ಟ್ರಾರ್ ಕಚೇರಿ  ದಾಖಲೆಗಳ ನೋಂದಣಿಗಾಗಿ ಅಳವಡಿಸಿರುವ ಕಾವೇರಿ  ಸಬ್ ರಿಜಿಸ್ಟ್ರಾರ್‌ಗಳು ಸೇವೆ ಸಲ್ಲಿಸಿ ವೇತನ ಪಡೆದ ಆರೋಪ
ಕಾವೇರಿ ತಂತ್ರಾಂಶದ ಕುರಿತು ಪ್ರಚಾರ ನೀಡಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
author img

By

Published : Jul 13, 2023, 9:16 PM IST

ಬೆಂಗಳೂರು : ಕಂದಾಯ ಇಲಾಖೆ ಅಧೀನದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಾಖಲೆಗಳ ನೋಂದಣಿಗಾಗಿ ಅಳವಡಿಸಿರುವ ಕಾವೇರಿ 2.೦ ತಂತ್ರಾಂಶದ ಕುರಿತು ಜನತೆಗೆ ತಿಳಿಯುವಂತಾಗಬೇಕು. ಇದರ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಸಾಫ್ಟ್‌ವೇರ್ ಬಳಕೆಯ ಅರಿವು ಮೂಡಿಸಬೇಕು ಎಂದು ಕಂದಾಯ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹುದ್ದೆಗಳು ಮಂಜೂರಾಗದ ಕಡೆಗಳಲ್ಲಿ ಕೆಲವು ಸಬ್ ರಿಜಿಸ್ಟ್ರಾರ್‌ಗಳು ಸೇವೆ ಸಲ್ಲಿಸಿ ವೇತನ ಪಡೆದ ಆರೋಪ ಸಂಬಂಧ ನಗರದ ಹಲವು ಸಬ್ ರಿಜಿಸ್ಟ್ರಾರ್‌ಗಳ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಕ್ಕೆ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಜು.19ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಖುದ್ದು ಹಾಜರಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದಶಿ ವಿ.ರಶ್ಮಿ, ನ್ಯಾಯಾಲಯದ ಆದೇಶದಂತೆ ಕಾವೇರಿ ತಂತ್ರಾಂಶ ರೂಪಿಸಿ ಜಾರಿಗೆ ತಂದು ದಾಖಲೆಗಳ ನೋಂದಣಿಯಲ್ಲಿ ಮಾನವ ಹಸ್ತಕ್ಷೇಪವನ್ನು ನಿಯಂತ್ರಿಸಲಾಗಿದೆ. ದಾಖಲೆಗಳಿಗೆ ಸಹಿ ಹಾಕಲು ಹಾಗೂ ಬೆರಳಚ್ಚುಗಳನ್ನು ಒದಗಿಸುವಾಗ ಮಾತ್ರ ಜನರು ಸಬ್ ರಿಜಿಸ್ಟ್ರಾರ್‌ಗಳ ಮುಂದೆ ಹಾಜರಾಗಬೇಕಾಗುತ್ತದೆ ಎಂದು ವಿವರಿಸಿದರು.

ಅಲ್ಲದೆ, ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯ ನಿರ್ವಹಣೆಯಲ್ಲಿ ನ್ಯಾಯಾಲಯವು ಗುರುತಿಸಿದ್ದ ಲೋಪಗಳನ್ನು ಸರಿಪಡಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಎಚ್ಚರವಹಿಸಲಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಜತೆಗೆ, ವ್ಯವಸ್ಥೆಯಲ್ಲಿರುವ ದೊಡ್ಡ ಸಮಸ್ಯೆಗಳನ್ನು ಸರಿಪಡಿಸಲು ಎರಡು ತಿಂಗಳ ಕಾಲಾವಕಾಶಬೇಕಿದೆ. ಈ ಪ್ರಕರಣದಲ್ಲಿ ಅರ್ಜಿದಾರರ ಸಮಸ್ಯೆಯನ್ನು ಪ್ರತ್ಯೇಕವಾಗಿ ಪರಿಗಣಿಸಿ ಶೀಘ್ರ ಬಗೆಹರಿಸಲಾಗುವುದು. ಸದ್ಯ ನಡೆಯುತ್ತಿರುವ ಬಜೆಟ್ ಅಧಿವೇಶನದ ಮುಗಿದ ನಂತರ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯನಿರ್ವಹಣೆಯಲ್ಲಿರುವ ಸಮಸ್ಯೆಗನ್ನು ಬಗೆಹರಿಸಲು ಸರ್ಕಾರ ಪೂರಕ ಕ್ರಮ ಕೈಗೊಂಡಿದೆ. ಆದರೂ ತಳಮಟ್ಟದಿಂದಲೇ ಫಲಿತಾಂಶ ನೀಡುವಂತಾಗಬೇಕು. ವ್ಯವಸ್ಥೆ ಜಾರಿಗೆ ತಂದಿದ್ದರೂ, ಅದರ ಬಗ್ಗೆ ವ್ಯಾಪಕ ಪ್ರಚಾರ ನೀಡಿಲ್ಲ ಎಂಬುದು ಕೋರ್ಟ್ ಗಮನಕ್ಕೆ ಬಂದಿರುವುದಾಗಿ ಹೇಳಿತು.

ಪ್ರಚಾರ ಅನುಪಸ್ಥಿತಿಯಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ನಿರೀಕ್ಷಿತ ಮಟ್ಟದ ಫಲಿತಾಂಶ ನೀಡುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರವು ಕಾವೇರಿ 2.೦ ತಂತ್ರಾಂಶ ಮತ್ತು ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೈಕೋರ್ಟ್​ ಹೇಳಿತು.

ತಂತ್ರಾಂಶವನ್ನು ಹೇಗೆ ಬಳಕೆ ಮಾಡಬೇಕೆಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅದರ ಉಪಯೋಗವನ್ನು ಹೆಚ್ಚು ಜನ ಪಡೆದುಕೊಳ್ಳುವಂತೆ ಮಾಡುವ ಕಾರ್ಯ ಆಗಬೇಕೆಂದು ಕೋರ್ಟ್​ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಓದಿ: ಕಾವೇರಿ 2 0 ತಂತ್ರಾಂಶ ಜಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತ ಪ್ರಾಧಿಕಾರಕ್ಕೆ ವಿವರವಾದ ಮನವಿ ಸಲ್ಲಿಸಿ : ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.