ETV Bharat / state

ಗಂಭೀರ ಸ್ವರೂಪದ ಪ್ರಕರಣದಲ್ಲಿ ದೂರು ಸಲ್ಲಿಸಿದರೂ ಎಫ್‌ಐಆರ್ ದಾಖಲಿಸದ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಕಿಡಿ - ಹೈಕೋರ್ಟ್

High Court: ಗಂಭೀರ ಸ್ವರೂಪದ ಪ್ರಕರಣಗಳ ಮಾಹಿತಿ ನೀಡಿದ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.

Etv Bharathigh-court-directs-fir-to-be-registered-immediately-in-serious-cases
ಗಂಭೀರ ಸ್ವರೂಪದ ಪ್ರಕರಣದಲ್ಲಿ ದೂರು ಸಲ್ಲಿಸಿದರೂ ಎಫ್‌ಐಆರ್ ದಾಖಲಿಸಿದ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ಕಿಡಿ
author img

By

Published : Aug 4, 2023, 8:09 AM IST

ಬೆಂಗಳೂರು: ಗಂಭೀರ ಸ್ವರೂಪದ ಅಪರಾಧದ ಪ್ರಕರಣಗಳ ಮಾಹಿತಿ ನೀಡಿದಾಗ ತಕ್ಷಣ ಎಫ್‌ಐಆರ್ ದಾಖಲು ಮಾಡಬೇಕು ಎಂದು ನಿರ್ದೇಶಿಸಿರುವ ಹೈಕೋರ್ಟ್, ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಲಲಿತಾಕುಮಾರಿ ಪ್ರಕರಣದ ಸಾರಾಂಶವನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಒದಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ದೂರು ಸಲ್ಲಿಸಿದ್ದರೂ ಎಫ್‌ಐಆರ್ ದಾಖಲಿಸದ ಬಬಲೇಶ್ವರ ಪೊಲೀಸ್ ಠಾಣಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಕಿಲಾರಹಟ್ಟಿಯ ವಿಠ್ಠಲ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಲಲಿತಾಕುಮಾರಿ ವಿರುದ್ಧದ ಉತ್ತರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೊರ್ಟ್ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಮಾರ್ಗಸೂಚಿಗಳುಳ್ಳ ಸುತ್ತೋಲೆ ಹೊರಡಿಸಲು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಅಲ್ಲದೇ, ತೀರ್ಪಿನ 120ನೇ ಪ್ಯಾರಾವನ್ನು ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಸುತ್ತೋಲೆ ಹೊರಡಿಸಬೇಕು. ಎಫ್‌ಐಆರ್ ದಾಖಲಿಸಲು ವಿಳಂಬ ಮಾಡದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್​ ತಾಕೀತು ಮಾಡಿದೆ. ಗಂಭೀರ ಅಪರಾಧದ ದೂರು ಬಂದಾಗ ಪ್ರಾಥಮಿಕ ತನಿಖೆ ನಡೆಸಬೇಕು ಎಂಬುದು ಅಗತ್ಯವಿಲ್ಲ. ಗಂಭೀರವಲ್ಲದ ಪ್ರಕರಣಗಳಲ್ಲಿ ಮಾತ್ರ ಪ್ರಾಥಮಿಕ ತನಿಖೆ ನಡೆಸಬಹುದು. 7 ದಿನಗಳೊಳಗೆ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು. ಗಂಭೀರ ಅಪರಾಧ ಕಂಡುಬಂದಾಗ ಎಫ್‌ಐಆರ್ ದಾಖಲಿಸಬೇಕು. ಈ ಸಂಬಂಧ ಪೊಲೀಸ್ ಠಾಣಾ ಡೈರಿಯಲ್ಲಿ ತನಿಖೆಯ ಸಂಪೂರ್ಣ ಮಾಹಿತಿ ಉಲ್ಲೇಖಿಸಬೇಕು ಎಂದು ಪೀಠ ತಿಳಿಸಿದೆ.

ಅಲ್ಲದೇ, ಪ್ರಸ್ತುತದ ಪ್ರಕರಣದಲ್ಲಿ ಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸಿದಾಗ ಎಫ್‌ಐಆರ್ ದಾಖಲಿಸಬಹುದಾಗಿತ್ತು. ಆದರೆ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರುವವರೆಗೂ ದಾಖಲಿಸದಿರುವುದು ಕರ್ತವ್ಯಲೋಪಕ್ಕೆ ಕಾರಣವಾಗಲಿದೆ. ಇದೇ ರೀತಿಯ ಹಲವು ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರುತ್ತಿದ್ದು, ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೇ, ಈ ಸಂಬಂಧದ ಅನುಪಾಲನಾ ವರದಿಯನ್ನು ಆಗಸ್ಟ್ 29ರಂದು ಸಲ್ಲಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ವಿಠ್ಠಲ ಅವರ ಸೊಸೆಯ ಮೇಲೆ ಕೆಲ ವ್ಯಕ್ತಿಗಳು ಹಲ್ಲೆ ನಡೆಸಿ ಆಕೆಯ ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ, ಆಕೆಯನ್ನು ನಿಂದಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ 2022ರ ನವೆಂಬರ್ 18ರಂದು ವಿಠ್ಠಲ ಅವರು ಬಬಲೇಶ್ವರ ಠಾಣೆಗೆ ದೂರು ನೀಡಿದ್ದರು. ಆದರೆ, ದೂರಿನ ಸಂಬಂಧ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ಐಪಿಸಿ ಅಡಿಯಲ್ಲಿ ಇದು ಸಂಜ್ಞೇಯ ಅಪರಾಧವಾಗಿದ್ದರೂ, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದಿಲ್ಲ. ಇದನ್ನು ಪ್ರಶ್ನಿಸಿ ವಿಠ್ಠಲ ಹೈಕೋರ್ಟ್ ಮೆಟ್ಟಿಲೇರಿದ್ದರು.

ಲಲಿತಾಕುಮಾರಿ ಪ್ರಕರಣದಲ್ಲಿನ ಸುಪ್ರೀಂಕೋರ್ಟ್ ನಿರ್ದೇಶನಗಳಿವು:

  1. ಪ್ರಕರಣ ಸಂಜ್ಞೇಯ ಎಂಬುದಾಗಿ ತಿಳಿಯುತ್ತಿದ್ದಂತೆ ಯಾವುದೇ ಪ್ರಾರ್ಥಮಿಕ ತನಿಖೆ ನಡೆಸದೆ ತಕ್ಷಣ ಎಫ್‌ಐಆರ್ ದಾಖಲಿಸಬೇಕು.
  2. ಸ್ವೀಕರಿಸಿದ ದೂರಿನ ಮಾಹಿತಿಯ ಪ್ರಕಾರ ಪ್ರಕರಣ ಸಂಜ್ಞೇಯವಲ್ಲ ಎಂಬುದು ಗೊತ್ತಾದಲ್ಲಿ ಅದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾತ್ರ ಪ್ರಾರ್ಥಮಿಕ ತನಿಖೆ ನಡೆಸಬೇಕು.
  3. ಪ್ರಕರಣ ಸಂಜ್ಞೇಯ ಎಂಬುದಾಗಿ ಗೊತ್ತಾದರೆ ತಕ್ಷಣ ಎಫ್‌ಐಆರ್ ದಾಖಲಿಸಬೇಕು. ಒಂದು ವೇಳೆ ಪ್ರಾಥಮಿಕ ವಿಚಾರಣೆಯಲ್ಲಿ ದೂರನ್ನು ಮುಕ್ತಾಯ ಮಾಡುವಂತಿದ್ದರೆ, ದೂರುದಾರರಿಗೆ ಒಂದು ವಾರದ ಒಳಗಾಗಿ ಮಾಹಿತಿ ನೀಡಬೇಕು. ಅಲ್ಲದೆ, ದೂರನ್ನು ಮುಕ್ತಾಯಗೊಳಿಸುತ್ತಿರುವ ಸಂಕ್ಷಿಪ್ತ ಕಾರಣಗಳನ್ನು ಒದಗಿಸಬೇಕು.
  4. ಸಂಜ್ಞೇಯ ಪ್ರಕರಣ ಎಂಬುದಾಗಿ ಗೊತ್ತಾದ ತಕ್ಷಣ ಎಫ್‌ಐಆರ್ ದಾಖಲಿಸುವುದು ಠಾಣೆಯ ಮುಖ್ಯಸ್ಥರ ಕರ್ತವ್ಯವಾಗಿರಲಿದೆ. ಒಂದು ವೇಳೆ ಸಂಜ್ಞೇಯ ಅಪರಾಧ ಎಂಬುದಾಗಿ ಗೊತ್ತಿದ್ದರೂ ದೂರು ದಾಖಲಿಸದಿದ್ದಲ್ಲಿ ಅಂತಹ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
  5. ಪ್ರಾರ್ಥಮಿಕ ತನಿಖೆ ಕೇವಲ ದೂರಿಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಲ್ಲ. ಬದಲಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಸಂಜ್ಞೇಯ ಅಪರಾಧವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ಆಗಿರಲಿದೆ.
  6. ಯಾವ ಯಾವ ಪ್ರಕರಣಗಳಲ್ಲಿ ಪ್ರಾರ್ಥಮಿಕ ತನಿಖೆ ಮಾಡಬಹುದು? ಎ. ಕೌಟುಂಬಿಕ ವಿವಾದಗಳು, ಬಿ. ವಾಣಿಜ್ಯ ಅಪರಾಧಗಳು, ಸಿ. ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು, ಡಿ. ಭ್ರಷ್ಟಾಚಾರ ಪ್ರಕರಣಗಳು, ಇ. ಕ್ರಿಮಿನಲ್ ಪ್ರಕರಣಗಳಲ್ಲಿ 3 ತಿಂಗಳು ವಿಳಂಬವಾಗಿರುವುದು.
  7. ಆರೋಪಿ ಮತ್ತು ದೂರುದಾರರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವ ಸಂದರ್ಭದಲ್ಲಿ ಮಾತ್ರ ಪ್ರಾಥಮಿಕ ವಿಚಾರಣೆಗೆ ಒಳಪಡಿಸಬೇಕು. ಅದು 7 ದಿನಗಳಿಗೆ ಮೀರದಂತಿರಬೇಕು. ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ಠಾಣೆಯ ಡೈರಿಯಲ್ಲಿ ನಮೂದಿಸಬೇಕು.
  8. ಠಾಣೆಯ ಡೈರಿಯು ದೂರು ಸ್ವೀಕಾರದ ಮಾಹಿತಿಯ ದಾಖಲೆಯಾಗಿದ್ದು, ಎಫ್‌ಐಆರ್ ನೋಂದಣಿ, ತನಿಖೆಗೆ ಅಗತ್ಯವಿರುವ ಸಂಜ್ಞೇಯ ಅಪರಾಧಗಳ ಕುರಿತ ಸಂಪೂರ್ಣ ಮಾಹಿತಿ ದಾಖಲಿಸಬೇಕು. ಜೊತೆಗೆ, ಪ್ರಾಥಮಿಕ ವಿಚಾರಣೆ ನಡೆಸುವ ನಿರ್ಧಾರವನ್ನು ತಿಳಿಸಿರಬೇಕು.

ಇದನ್ನೂ ಓದಿ: ಅಕ್ರಮ ಡೀಸೆಲ್ ಸಾಗಣೆ ದಾಳಿ ಮಾಡಲು ಡಿವೈಎಸ್ಪಿ ಅದಕ್ಕಿಂತ ಮೇಲಾಧಿಕಾರಿಗಳಿರಬೇಕು: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.