ETV Bharat / state

ರಾಜ್ಯಕ್ಕೆ ಆಕ್ಸಿಜೆನ್, ರೆಮ್​​​ಡಿಸಿವಿರ್ ಪೂರೈಸಲು ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ - corona news

ರಾಜ್ಯಕ್ಕೆ ಆಕ್ಸಿಜೆನ್, ರೆಮ್​​​ಡಿಸಿವಿರ್ ಪೂರೈಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಒಂದು ವೇಳೆ ಯಾವುದೇ ನಾಗರಿಕರಿಗೆ ಚಿಕಿತ್ಸೆ ಸಿಗದೆ ಮೃತಪಟ್ಟರೆ ಅದಕ್ಕೆ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಬಹುದಾಗಿದೆ. ಹೀಗಾಗಿ ಸರ್ಕಾರ ಚಿಕಿತ್ಸೆಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಅಗತ್ಯ ಸಂಖ್ಯೆಯಲ್ಲಿ ಬೆಡ್​​​ಗಳನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್​ ಹೇಳಿದೆ.

ಹೈಕೋರ್ಟ್
author img

By

Published : Apr 29, 2021, 6:43 PM IST

ಬೆಂಗಳೂರು: ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ರೆಮ್​​​​ಡಿಸಿವಿರ್ ಹಾಗೂ ಆಕ್ಸಿಜೆನ್ ಪೂರೈಸುವಂತೆ ರಾಜ್ಯ ಉಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ರಾಜ್ಯ ಸರ್ಕಾರ ಈ ಸಂಬಂಧ 2 ದಿನಗಳಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಈ ಮನವಿ ಪರಿಗಣಿಸಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಮೇ 4ರೊಳಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡಿರುವ 802 ಮೆಟ್ರಿಕ್ ಟನ್ ಆಕ್ಸಿಜೆನ್ ಹಾಗೂ ಅಗತ್ಯ ಪ್ರಮಾಣದಲ್ಲಿ ರೆಮ್​​ಡೆಸಿವಿರ್ ಪೂರೈಸಬೇಕು ಎಂದು ಹೈಕೋರ್ಟ್ ಹೇಳಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ ರೆಮ್​​ಡಿಸಿವರ್ ಪೂರೈಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಏಪ್ರಿಲ್ 30ರವರೆಗೆ ರಾಜ್ಯಕ್ಕೆ 1,22,000 ರೆಮ್​​ಡಿಸಿವರ್ ಹಂಚಿಕೆ‌ ಮಾಡಿದೆ.

ನಿತ್ಯವೂ 20 ಸಾವಿರಕ್ಕೂ ಹೆಚ್ಚು ರೆಮ್​ಡಿಸಿವರ್​​ಗೆ ಬೇಡಿಕೆಯಿದ್ದು, ಲಭ್ಯವಿರುವ ರೆಮ್​​ಡಿಸಿವರ್ ಮಾಹಿತಿ‌ಯನ್ನು ವೆಬ್​ಸೈಟ್​​​ನಲ್ಲಿ ಪ್ರಕಟಿಸಲಾಗುತ್ತಿದೆ. ಪ್ರಸ್ತುತ 38,420 ರೆಮ್​ಡಿಸಿವರ್ ಸ್ಟಾಕ್ ಇದ್ದು, ವಾರ್ ರೂಮ್​ನಲ್ಲಿ ರೆಮ್​ಡಿಸಿವರ್ ನಿರ್ವಹಣೆಗೆ ಅಧಿಕಾರಿ ನೇಮಿಸಲಾಗಿದೆ. ಬೇಡಿಕೆ ಇದ್ದಲ್ಲಿ ವಾಟ್ಸಾಪ್​, ಎಸ್ಎಂಎಸ್, ಇಮೇಲ್ ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ವಿವರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ರೆಮ್​​ಡೆಸಿವಿರ್ ಅನಗತ್ಯ ಬಳಕೆ: ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಅಗತ್ಯವಿಲ್ಲದಿದ್ದರೂ ರೆಮ್​ಡಿಸಿವರ್ ನೀಡುತ್ತಿದ್ದು, ಅನಗತ್ಯವಾಗಿ ರೆಮ್​ಡಿಸಿವರ್ ಬೇಡಿಕೆ ಸೃಷ್ಟಿಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ 10,000 ರೆಮ್​ಡಿಸಿವರ್ ಅಗತ್ಯವಿದೆ. ಸರ್ಕಾರದಿಂದಲೇ ಈ ರೆಮ್​​ಡಿಸಿವರ್ ಖರೀದಿಸುತ್ತಿದ್ದು, ಶೇ.90ರಷ್ಟು ಲಸಿಕೆ ಸರ್ಕಾರಿ ಕೋಟಾದ ಸೋಂಕಿತರಿಗೆ ಸಿಗುತ್ತಿದೆ.

ಆದರೆ ಖಾಸಗಿ ಆಸ್ಪತ್ರೆಗಳ ಸೋಂಕಿತರಿಗೆ ಕೊರತೆ ಇದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತುರ್ತು ಅಗತ್ಯವಿದ್ದವರಿಗೆ ಮಾತ್ರ ರೆಮ್​ಡಿಸಿವರ್ ನೀಡಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿತು. ಜತೆಗೆ ರೆಮ್​​​ಡಿಸಿವಿರ್ ಕೊರತೆ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೇ ಸರ್ಕಾರ ಸೋಂಕಿತರಿಗೆ ರೆಮ್​​ಡಿಸಿವಿರ್ ಅಗತ್ಯವಿದ್ದರೆ ಸಂಬಂಧಿಕರು ಕೋವಿಡ್ ವಾರ್ ರೂಮ್​ನ ಡೆಪ್ಯುಟಿ ಡ್ರಗ್ ಕಂಟ್ರೋಲರ್ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ. ಈ ಸಂಬಂಧ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಆಸ್ಪತ್ರೆಗಳ ಮುಂದೆ ಸಂಪರ್ಕ ವಿವರ ಪ್ರಕಟಿಸಬೇಕು ಎಂದು ಸೂಚಿಸಿತು.

ಕೋವಿಡ್ ಬೆಡ್ ಹೆಚ್ಚಿಸಲು ಸೂಚನೆ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಕರ್ತವ್ಯ. ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನಲ್ಲಿ ಆರೋಗ್ಯದ ಹಕ್ಕೂ ಸೇರಿದೆ. ಹೀಗಾಗಿ ಸೋಂಕಿತರಿಗೆ ಸರ್ಕಾರ ಚಿಕಿತ್ಸೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಒಂದು ವೇಳೆ ಯಾವುದೇ ನಾಗರಿಕರಿಗೆ ಚಿಕಿತ್ಸೆ ಸಿಗದೆ ಮೃತಪಟ್ಟರೆ ಅದಕ್ಕೆ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಬಹುದಾಗಿದೆ. ಹೀಗಾಗಿ ಸರ್ಕಾರ ಚಿಕಿತ್ಸೆಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಅಗತ್ಯ ಸಂಖ್ಯೆಯಲ್ಲಿ ಬೆಡ್​​​ಗಳನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.

ಸೇನೆಗೆ ಮನವಿ: ರಾಜ್ಯದ ಆಸ್ಪತ್ರೆಗಳಲ್ಲಿ ಬೆಡ್​​​ಗಳ ಕೊರತೆ ಸರಿಪಡಿಸಲು ಸರ್ಕಾರ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಆಕ್ಸಿಜನ್ ಬೆಡ್​​​ಗಳ ಸಂಖ್ಯೆಯನ್ನು 22 ಸಾವಿರಕ್ಕೆ, ಹೆಚ್ಎಫ್ಎನ್​ಸಿ ಬೆಡ್​​ಗಳ ಸಂಖ್ಯೆಯನ್ನು 1,248ಕ್ಕೆ, ಐಸಿಯು ಬೆಡ್​​​​ಗಳನ್ನು 701ಕ್ಕೆ, ವೆಂಟಿಲೇಟರ್ ಬೆಡ್​​​ಗಳನ್ನು 1,548ಕ್ಕೆ ಹೆಚ್ಚಿಸಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.

ಕಮಾಂಡ್ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್​​​ಗಾಗಿ‌ ಮನವಿ ಸಲ್ಲಿಸಲಾಗಿದೆ. ಹಜ್ ಭವನ್, ಪಶುವೈದ್ಯ ಕಾಲೇಜಿನಲ್ಲಿ ತಲಾ 100 ಬೆಡ್ ಸೇರಿದಂತೆ ಇನ್ನೂ 1,500 ಬೆಡ್ ಗಳನ್ನು ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನೈರುತ್ಯ ರೈಲ್ವೆ 300 ಆಕ್ಸಿಜನ್ ಕೋಚ್ ಬೆಡ್ ಒದಗಿಸಲು ಸಿದ್ಧವಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಕೋಚ್​ಗಳು ಲಭ್ಯವಿದೆ. ಬಿಬಿಎಂಪಿ ಹಾಗೂ ಸರ್ಕಾರ ತಕ್ಷಣ ಈ ಬೆಡ್​ಗಳನ್ನು ಪಡೆದುಕೊಳ್ಳಬೇಕು ಎಂದು ಪೀಠ ಸೂಚಿಸಿತು.

ಸೈನಿಕ ಆಸ್ಪತ್ರೆಗಳಲ್ಲಿ ಬೆಡ್​​​ಗಳು ಖಾಲಿ ಇಲ್ಲ ಎಂಬಂತಹ ಮಾಹಿತಿ ಕೇಳಿ ಬಂದಿದೆ. ಅನಾಹುತಗಳಾದಾಗ ಸೇನೆ ಜನಸಾಮಾನ್ಯರಿಗೆ ನೆರವಾಗಿದೆ. ಬೆಂಗಳೂರಿನ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದ್ದು ಸೇನೆ ಈ ಹಂತದಲ್ಲಿ ನೆರವು ನೀಡಬೇಕೆಂದು ಪೀಠ ಮನವಿ ಮಾಡಿತು. ಅಲ್ಲದೇ, ಖಾಸಗಿ ಆಸ್ಪತ್ರೆಗಳು ಖಾಲಿ ಬೆಡ್​​​ಗಳ ಮಾಹಿತಿ ನೀಡಬೇಕು. ಈ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಖಾಸಗಿ ಆಸ್ಪತ್ರೆಗಳ ಸಂಘ 24 ಗಂಟೆಗಳಲ್ಲಿ ವೆಬ್​ಸೈಟ್ ರಚಿಸಬೇಕು ಎಂದು ಸೂಚಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.