ETV Bharat / state

ಬ್ಯಾಂಕ್​ಗಳ ಸಾಲ ವಸೂಲಿಗೆ ಹೈಕೋರ್ಟ್ ತಡೆ

ಸಾಲ ವಸೂಲಿಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಹಾಗೂ ಸಾಲಗಾರರ ಆಸ್ತಿ ಹರಾಜು ಹಾಕದಂತೆ ಹೈಕೋರ್ಟ್​ ಆದೇಶ ಹೊರಡಿಸಿದೆ. ಲಾಕ್​ಡೌನ್​ ಹಿನ್ನೆಲೆ ಎಲ್ಲ ಬ್ಯಾಂಕ್​ ಗಳಿಗೆ ಈ ಸೂಚನೆ ನೀಡಲಾಗಿದೆ.

High Court barrier to bank loans
ಬ್ಯಾಂಕ್​ಗಳ ಸಾಲ ವಸೂಲಿಗೆ ಹೈಕೋರ್ಟ್ ತಡೆ
author img

By

Published : Mar 28, 2020, 6:57 PM IST

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ಸರ್ಕಾರಗಳು ಜನತೆಯ ಮೇಲೆ ವಿಧಿಸಿರುವ ಲಾಕ್ ಡೌನ್ ತೆರವು ಮಾಡುವವರೆಗೆ ಬ್ಯಾಂಕ್​​ಗಳು ಯಾವುದೇ ರೀತಿಯ ಸಾಲ ವಸೂಲಾತಿಗೆ ಮುಂದಾಗಬಾರದು. ಒಂದು ವೇಳೆ ಯಾವುದೇ ಕೋರ್ಟ್ ವಸೂಲಿ ಮಾಡಲು ಅನುಮತಿ ನೀಡಿದ್ದರೂ, ಬ್ಯಾಂಕ್​ಗಳು ರಾಜ್ಯದಲ್ಲಿ ವಸೂಲಿ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಎಲ್ಲ ಬ್ಯಾಂಕ್​ಗಳಿಗೆ ಆದೇಶ ನೀಡಿದೆ.

High Court barrier to bank loans
ಬ್ಯಾಂಕ್​ಗಳ ಸಾಲ ವಸೂಲಿಗೆ ಹೈಕೋರ್ಟ್ ತಡೆ

ಸಾಲ ವಸೂಲಾತಿ ಮಂಡಳಿ (ಡಿ.ಆರ್.ಟಿ) ವ್ಯಕ್ತಿಯೊಬ್ಬರ ಸಾಲ ವಸೂಲಿ ಸಂಬಂಧ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ.

ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ತಮ್ಮ ಆಸ್ತಿ ಹರಾಜು ಹಾಕಲು ಮುಂದಾಗಿರುವ ಕ್ರಮಕ್ಕೆ ಮತ್ತು ಡಿಆರ್​ಟಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಜಿ.ನರೇಂದರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ರಾಜ್ಯದಲ್ಲಿ ಲಾಕ್ ಡೌನ್ ತೆರವಾಗುವವರೆಗೆ ಕಾನೂನು ಕ್ರಮ ಜರುಗಿಸಬಾರದು ಎಂದು ಆದೇಶಿಸಿದೆ. ಪ್ರಸ್ತುತ ರಾಜ್ಯಾದ್ಯಂತ ಸರ್ಕಾರ ಅಗತ್ಯ ಸರಕು ಸೇವೆ ಪೂರೈಸಲು ಮಾತ್ರ ಈ ಅವಧಿಯಲ್ಲಿ ಅನುಮತಿ ನೀಡಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್​ಗಳು ತಮ್ಮ ಸಾಲ ವಸೂಲಿಗಾಗಿ ಸಾಲಗಾರರ ಆಸ್ತಿ ಹರಾಜು ಮಾಡುವ ಕ್ರಮ ಸರ್ಕಾರದ ಆದೇಶದ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.

ಹೀಗಾಗಿ ಬ್ಯಾಂಕ್​ಗಳು ಲಾಕ್ ಡೌನ್ ತೆರವಾಗುವವರೆಗೆ ಕಾನೂನು ರೀತಿಯಲ್ಲೂ ಸಾಲ ವಸೂಲಿಗೆ ಮುಂದಾಗಬಾರದು. ಒಂದು ವೇಳೆ ಬ್ಯಾಂಕ್​ಗಳು ಸಾಲ ವಸೂಲಿ ಮಾಡಿದ್ದೇ ಆದರೆ, ಅಂತಹ ಬ್ಯಾಂಕುಗಳ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಬಹುದು ಎಂದು ಸೂಚಿಸಿದೆ.

ಆದೇಶದ ಪ್ರತಿಯನ್ನು ಗೃಹ ಇಲಾಖೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ತಲುಪಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್​ಗೆ ಸೂಚನೆ ನೀಡಿದೆ. ಈಚೆಗಷ್ಟೇ ಆರ್.ಬಿ.ಐ ಕೂಡ ಇಎಂಐ ಸೇರಿದಂತೆ ಮುಂದಿನ ಮೂರು ತಿಂಗಳ ಕಾಲ ಯಾವುದೇ ಸಾಲ ಕೇಳದಂತೆ ಬ್ಯಾಂಕ್​ಗಳಿಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.