ETV Bharat / state

ಹೈಕೋರ್ಟ್, ಕರ್ನಾಟಕ ಸಿವಿಲ್ ಕೋರ್ಟ್ ಕಾಯಿದೆಗೆ ತಿದ್ದುಪಡಿ ಅಗತ್ಯ: ಹೈಕೋರ್ಟ್ - high court of karnataka

ಸಿವಿಲ್​ ವ್ಯಾಜ್ಯಗಳ ವಿಚಾರಣೆ ನಡೆಸುವ ಅಧಿಕಾರ ಕುರಿತಂತೆ ಹೈಕೋರ್ಟ್ ಮತ್ತು ಕರ್ನಾಟಕ ಸಿವಿಲ್ ಕೋರ್ಟ್ ಕಾಯಿದೆಗೆ ತಿದ್ದುಪಡಿ ಅಗತ್ಯವಿದೆ ಎಂದು ಧಾರವಾಡ ಹೈಕೋರ್ಟ್​ ಪೀಠ ಸಲಹೆ ನೀಡಿದೆ.

high-court-and-karnataka-civil-court-act-require-amendment-high-court
ಹೈಕೋರ್ಟ್ ಮತ್ತು ಕರ್ನಾಟಕ ಸಿವಿಲ್ ಕೋರ್ಟ್ ಕಾಯಿದೆಗೆ ತಿದ್ದುಪಡಿ ಅಗತ್ಯವಿದೆ: ಹೈಕೋರ್ಟ್
author img

By

Published : Apr 19, 2023, 8:15 PM IST

ಬೆಂಗಳೂರು: ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಪ್ರಥಮ ಮೇಲ್ಮನವಿ (ಆರ್​ಎಫ್​ಎ)ಗಳ ವಿಚಾರಣೆ ನಡೆಸುವ ಅಧಿಕಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಾಯಿದೆ ಮತ್ತು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯಿದೆಯ ನಿಯಮಗಳನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತಿರಕವ್ವ ಎಂಬವರು 16 ವರ್ಷಗಳ ಹಿಂದೆ ಸಲ್ಲಿಸಿದ್ದ ಮೇಲ್ಮನವಿ ಬಾಕಿಯಿರುವ ಹಿನ್ನೆಲೆಯಲ್ಲಿ ಆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ಹೆಗಡೆ ಅವರಿದ್ದ ಧಾರವಾಡ ಪೀಠ ಈ ಸಲಹೆ ನೀಡಿತು. ಅಲ್ಲದೆ, ಇದರಿಂದ ನ್ಯಾಯಾಲಯಗಳ ಮೇಲಿನ ವ್ಯಾಜ್ಯಗಳ ಹೊರೆ ತಗ್ಗಿಸಬಹುದು ಎಂದು ತಿಳಿಸಿದೆ. ನಾಗರಿಕ ದಂಡ ಸಂಹಿತೆ ಸೆಕ್ಷನ್ 9ರ ಪ್ರಕಾರ 10 ಲಕ್ಷಕ್ಕಿಂತ ಅಧಿಕ ಮೌಲ್ಯದ ಸಿವಿಲ್ ವ್ಯಾಜ್ಯದ ಕುರಿತಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹೊರಡಿಸಿದ ತೀರ್ಪು ಪ್ರಶ್ನಿಸಿದ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಧೀಶರು ವಿಚಾರಣೆ ನಡೆಸಲು ನಿರ್ಬಂಧವಿದೆ. ಬದಲಾಗಿ ಹೈಕೋರ್ಟ್ ಮಾತ್ರ ವಿಚಾರಣೆ ನಡೆಸಬೇಕಿದೆ. ಇದರಿಂದ ಹೈಕೋರ್ಟ್ ಮೇಲೆ ಹೊರೆ ಹೆಚ್ಚಾಗಿದ್ದು, ಈ ನಿಯಮ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಸಾಮಾನ್ಯವಾಗಿ ಮೇಲ್ಮನವಿಗಳ ವಿಚಾರಣೆಗೆ ಸ್ವೀಕರಿಸಿದ ನಂತರ ಎರಡು ವರ್ಷಗಳಲ್ಲಿ ಅಂತಿಮ ಆದೇಶ ಹೊರಡಿಸಬೇಕಾಗುತ್ತದೆ. ಆದರೆ ಅರ್ಜಿ ಸಲ್ಲಿಸಿದ ನಂತರ ಅದು ಇತ್ಯರ್ಥವಾಗುವವರೆಗೆ ಇರುವ ಪ್ರಕ್ರಿಯೆ ಕಾಲಹರಣಕ್ಕೆ ಕಾರಣವಾಗುತ್ತಿದೆ. ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಗಳು ಹೊರಡಿಸಿರುವ ಆದೇಶಗಳ ಮೇಲೆ ಸಲ್ಲಿಸುವ ಮೇಲ್ಮನವಿಗಳ ತ್ವರಿತ ಇತ್ಯರ್ಥಕ್ಕೆ ತಿದ್ದುಪಡಿಗಳನ್ನು ಮಾಡಬೇಕಿದೆ. ನ್ಯಾಯವನ್ನರಸಿ ಕೋರ್ಟ್‌ಗಳಿಗೆ ಬರುವ ವ್ಯಕ್ತಿಗಳು ದಶಕಗಳ ಕಾಲ ಕಾಯಬೇಕಿಲ್ಲ. ಸಮಾಜದ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ. ಜೀವನ ಅತ್ಯಂತ ಅಲ್ಪಾವಧಿಯದಾಗಿದ್ದು, ದಶಕಗಳ ಕಾಲ ಕೋರ್ಟ್‌ನಲ್ಲಿಯೇ ವ್ಯಾಜ್ಯಗಳಿಗೆ ಕಳೆಯುವುದು ಸರಿಯಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ನಮ್ಮ ದೇಶ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಚಂದ್ರ ಹಾಗೂ ಮಂಗಳ ಗ್ರಹಕ್ಕೆ ಯಾತ್ರೆಗಳನ್ನು ಕೈಗೊಳ್ಳಲಾಗಿದೆ. ತಿದ್ದುಪಡಿಗಳು ಸಾಕಷ್ಟು ವರ್ಷಗಳ ಹಿಂದೆಯೇ ಆಗಬೇಕಿತ್ತು. ಕಾನೂನು ಸುಧಾರಣೆಗಳಿಗೆ ಸಂಬಂಧಿಸಿದಂತೆ ನಾವು ಹಿಂದೆ ಉಳಿಯಬಾರದು. ನಮಗೆ ಕಾನೂನು ಸುಧಾರಣೆಗಳನ್ನು ಕೈಗೊಳ್ಳದೆ ಬೇರೆ ಆಯ್ಕೆ ಇಲ್ಲ, ಅದರಲ್ಲೂ ವಿಶೇಷವಾಗಿ ಆಧುನಿಕ ಯುಗದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಹತ್ತಿಕ್ಕಲು ನಿಯಮಗಳಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ 10 ಲಕ್ಷದಿಂದ 15 ಲಕ್ಷದವರೆಗಿನ ವ್ಯಾಜ್ಯಗಳಾದರೆ ಕರ್ನಾಟಕ ಹೈಕೋರ್ಟ್ ಕಾಯಿದೆ 1961 ಸೆಕ್ಷನ್ 5ರ ಅಡಿ ರೆಗ್ಯುಲರ್ ಫಸ್ಟ್​ ಅಪೀಲ್‌ಗಳನ್ನು ಏಕ ಸದಸ್ಯಪೀಠದ ಮುಂದೆ ಸಲ್ಲಿಸಬೇಕಾಗುತ್ತದೆ. 15 ಲಕ್ಷ ರೂ. ಮೇಲ್ಪಟ್ಟ ವ್ಯಾಜ್ಯಗಳನ್ನು ವಿಭಾಗೀಯ ಪೀಠದ ಮುಂದೆ ಸಲ್ಲಿಸಬೇಕಾಗುತ್ತದೆ. ಸದ್ಯ ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದ್ದರೂ 53 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಲಿ ಹೈಕೋರ್ಟ್‌ನಲ್ಲಿ 19,275 ಆರ್​ಎಫ್​ಎ ಪ್ರಕರಣಗಳು ಬಾಕಿ ಇವೆ. ಇದರಿಂದ ವಿಚಾರಣಾ ಪ್ರಕ್ರಿಯೆಗಳು ವಿಳಂಬವಾಗುತ್ತಿದೆ, ಹಾಗಾಗಿ ಕೆಲವು ಸುಧಾರಣೆಗಳನ್ನು ತರಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಸೂಚನೆ ನೀಡಿದೆ.

ಪ್ರಮುಖ ಸಲಹೆಗಳು: ಪ್ರಥಮ ಮೇಲ್ಮನವಿಗಳನ್ನು ಕ್ಷಕಿದಾರರ ವಾಸಿಸುವ ಸ್ಥಳದಲ್ಲೇ ನಿರ್ಧರಿಸುವಂತಾಗಬೇಕು. ಆ ಮೂಲಕ ನ್ಯಾಯವನ್ನು ಮನೆಬಾಗಿಲಿಗೆ ಕೊಂಡೊಯ್ಯಬೇಕು. ನಿಯಮ ತಿದ್ದುಪಡಿ ಮಾಡಿದರೆ ಹೈಕೋರ್ಟ್ ಬದಲು ಹೆಚ್ಚಿನ ಅಧಿಕಾರ ವಿಚಾರಣಾ ನ್ಯಾಯಾಲಯಗಳು ಲಭ್ಯವಾಗಲಿದ್ದು, ಅಲ್ಲಿ ತ್ವರಿತ ವಿಚಾರಣೆಗೆ ಸಹಕಾರಿಯಾಗಲಿದೆ. ಇದರಿಂದ ಹೈಕೋರ್ಟ್ ಮೇಲಿನ ಹೊರೆ ತಗ್ಗಲಿದೆ. ಈಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ನ್ಯಾಯಾಲಯಗಳನ್ನು ಆರಂಭಿಸಿರುವುದರಿಂದ ಮೇಲ್ಮನವಿಗಳನ್ನು ಸುಲಭವಾಗಿ ಬಗೆಹರಿಸಬಹುದಾಗಿದೆ. ಮೂಲ ದಾವೆ ಹೂಡಿದವರಿಗೆ ಆರ್​ಎಸ್​ಎ ಹಾಕಲು ಅವಕಾಶ ಸಿಗಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಬ್ಯಾಂಕ್ ಪಾಸ್‌ಬುಕ್‌ನಲ್ಲಿ ನಮೂದಾಗುವ ಮೊತ್ತವನ್ನು ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗದು: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.