ಬೆಂಗಳೂರು: ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪಾದರಾಯನಪುರ ಪ್ರದೇಶ ಸದ್ಯ ಅತಿಸೂಕ್ಷ್ಮ ಪ್ರದೇಶವಾಗಿ ಹೈಲೈಟ್ ಆಗಿದೆ.
ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಸೀಲ್ಡೌನ್ ಮಾಡಲಾದ ಪಾದರಾಯನಪುರದಲ್ಲಿ ಸದ್ಯ ಪೊಲೀಸರು, ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳು, ಸ್ವ್ಕಾಡ್ ಟೀಂ ಮೊಕ್ಕಾಂ ಹೂಡಿ ಪಾದರಯನಪುರದ ಬಳಿ ಕೊರೊನಾ ಸೋಂಕು ಹೆಚ್ಚು ಪತ್ತೆಯಾದ ಕಾರಣ ರ್ಯಾಂಡಮ್ ಚೆಕ್ ಮಾಡಲು ಮುಂದಾಗಿದ್ದಾರೆ.
ಈಗಾಗ್ಲೇ ಪಾದರಾಯನಪುರದ ಬಳಿ ಪಾಸಿಟಿವ್ ಕೇಸ್ ಜೊತೆ ಸಂಪರ್ಕ ಹೊಂದಿದವರನ್ನ ಕ್ವಾರಂಟೈನ್ ಮಾಡಲು ತೆರಳಿದ ಅಧಿಕಾರಿಗಳ ಮೇಲೆ ರೊಚ್ಚಿಗೆದ್ದು ಜನ ಹಲ್ಲೆ ನಡೆಸಿದ್ರು. ಸದ್ಯ ಪಾದರಾಯನಪುರ ಸಮುದಾಯಕ್ಕೆ ಸೋಂಕು ಹಬ್ಬಿರುವ ಆತಂಕ ಹಿನ್ನೆಲೆ ರ್ಯಾಂಡಮ್ ಟೆಸ್ಟ್ ಮಾಡಲು ಮುಂದಾಗಿದೆ. ಈ ವೇಳೆ ಯಾವುದೇ ತೊಂದರೆಯಾಗಬಾರದೆಂಬ ಕಾರಣಕ್ಕೆ ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳ ಸಹಾಯಕ್ಕೆ ಪೊಲೀಸರು ಬೆನ್ನೆಲುಬಾಗಿ ನಿಂತಿದ್ದಾರೆ.
ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಅವರ ನೇತೃತ್ವದಲ್ಲಿ ಪಾದರಾಯನಪುರದ ಪ್ರವೇಶ ಕೊಡುವ ಪ್ರದೇಶ ಹಾಗೂ ಗಲ್ಲಿ ಗಲ್ಲಿಯ ರಸ್ತೆಗಳನ್ನ ಸೀಲ್ಡೌನ್ ಮಾಡಿದ್ದಾರೆ. ಪಾದರಾಯನಪುರದಲ್ಲಿ ಯಾವುದೇ ತೊಂದರೆಯಾಗಬಾರದೆಂದು ಸದ್ಯ ಅತೀ ಹೆಚ್ಚು ಸೂಕ್ಷ ಪ್ರದೇಶವಾಗಿ ಪರಿಗಣಿಸಿ ಸ್ಥಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಪಾದರಾಯನಪುರದ ಜನ ದಿನ ಬಳಕೆಗೆ ಬೇಕಾದ ಅಗತ್ಯ ಸಾಮಾಗ್ರಿಗಳು, ಓಡಾಟ ಮಾಡಲು ಸಾಧ್ಯವಾಗದೇ ಕಾಂಪೌಡ್ ಹಾರಿ ಸಿಲಿಕಾನ್ ಸಿಟಿ ಸುತ್ತಿ ಬರ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ. ಹೀಗಾಗಿ ಪೊಲೀಸರು ಇದರ ಕುರಿತು ಒಂದು ತಂಡ ರಚನೆ ಮಾಡಿ ತನಿಖೆ ಮುಂದುವರೆಸಿದ್ದಾರೆ.