ETV Bharat / state

ಅಭ್ಯರ್ಥಿಗಳ ಗೆಲುವಿಗೆ ಕಸರತ್ತು ಶುರು: ಆರ್ ಆರ್ ನಗರ ಸುತ್ತ ಖಾಕಿ ಕಣ್ಗಾವಲು!

ಕಳೆದೆರಡು ದಿನಗಳಿಗಳಿಂದ ಆರ್.ಆರ್ ನಗರ ಸುತ್ತ ಖಾಕಿ ಪಡೆ, ಕೇಂದ್ರೀಯ ಪ್ಯಾರಾ ಮಿಲಿಟರಿ, ಸಿಐಎಸ್ಎಫ್ ತಂಡ, ಗುಪ್ತಚರ ಇಲಾಖೆ, ಕೆ.ಎಸ್.ಆರ್. ಪಿ ಪಥ ಸಂಚಲನ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.

High Alert around RR City
ಆರ್ ಆರ್ ನಗರ ಸುತ್ತಾ ಖಾಕಿ ಕಣ್ಗಾವಲು
author img

By

Published : Oct 25, 2020, 1:43 PM IST

ಬೆಂಗಳೂರು: ಆರ್ ಆರ್ ನಗರ ಬೈ ಎಲೆಕ್ಷನ್ ಅಖಾಡ ರಂಗೇರುತ್ತಿದ್ದು, ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ನಾನಾ ಕಸರತ್ತು ಶುರು ಮಾಡಿವೆ. ಈ ನಡುವೆ ಮತದಾರರಿಗೆ ಆಮಿಷವೊಡ್ಡುವ ಸಾಧ್ಯತೆ ಕೂಡ ಇರುವುದರಿಂದ ಸದ್ಯ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ಆದೇಶದಂತೆ ಆರ್ ಆರ್ ನಗರ ಸುತ್ತ ಖಾಕಿ ಕಣ್ಗಾವಲಿರಿಸಿದೆ.

ಕಳೆದೆರಡು ದಿನಗಳಿಗಳಿಂದ ಆರ್.ಆರ್ ನಗರ ಸುತ್ತ ಖಾಕಿ ಪಡೆ, ಸೆಂಟ್ರಲ್ ಪ್ಯಾರಾ ಮಿಲಿಟರಿ, ಸಿಐಎಸ್ಎಫ್ ತಂಡ, ಗುಪ್ತಚಾರ ಇಲಾಖೆ, ಕೆ.ಎಸ್.ಆರ್. ಪಿ ಪಥ ಸಂಚಲನ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಆದರೆ, ಇಂದು ಭಾನುವಾರವಾದ ಕಾರಣ ಜನಜಂಗುಳಿ ಜಾಸ್ತಿಯಾಗಿರುತ್ತದೆ. ಎಲ್ಲರೂ ಮನೆಯಲ್ಲೇ ಇರುವ ಕಾರಣ ತಮ್ಮ ಪಕ್ಷದ ಅಭ್ಯರ್ಥಿಗೆ‌ ಮತದಾನ ಮಾಡುವಂತೆ ಮನವಿ ಮಾಡಲು ಪಕ್ಷಗಳು ಮುಂದಾಗಲಿವೆ. ಈ ಸಂದರ್ಭದಲ್ಲಿ ಗಲಾಟೆ, ಅಥವಾ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇರುವ ಕಾರಣ ಸದ್ಯ ಎಲ್ಲೆಡೆ ಖಾಕಿ ಕಣ್ಗಾವಲಿನಲ್ಲಿದೆ.

ಮತ್ತೊಂದೆಡೆ ಆರ್.ಆರ್ ನಗರ ಪೊಲೀಸ್ ಠಾಣೆ ಬಳಿ ಕೂಡ ಭದ್ರತೆ ನೀಡಲಾಗಿದ್ದು, ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ದ ದೂರು ದಾಖಲು ಮಾಡಿದ ಇನ್ಸ್​ಪೆಕ್ಟರ್​ವೊಬ್ಬರನ್ನು ನಿನ್ನೆ ವರ್ಗಾವಣೆ ಮಾಡಲಾಗಿದೆ. ಆರ್.ಆರ್. ನಗರ ಸುತ್ತ ಬಹಳ ಸೂಕ್ಷ್ಮ ಪ್ರದೇಶವಾದ ಕಾರಣ ಸಂಜೆ ಕೂಡಾ ಪಥ ಸಂಚಲನ ನಡೆಯಲಿದ್ದು, ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.