ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುತ್ತಿದ್ದ ತೆಲಂಗಾಣ ಮೂಲದ ವ್ಯಕ್ತಿಯನ್ನು ಬಂಧಿಸಿರುವ ಡಿಆರ್ಐ (ಕಂದಾಯ ಗುಪ್ತಚರ ನಿರ್ದೇಶನಾಲಯ) ಅಧಿಕಾರಿಗಳು ಆತನಿಂದ ಅಂದಾಜು 100 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ.
ಇಥಿಯೋಪಿಯಾದ ಅಡಿಸ್ ಅಬಾಬಾ ಸಿಟಿಯಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆಲಂಗಾಣ ಮೂಲದ 45 ವರ್ಷದ ವ್ಯಕ್ತಿ ಬಂದಿಳಿದಿದ್ದ. ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲವನ್ನು ಭೇದಿಸುವ ಪ್ರಯತ್ನದಲ್ಲಿದ್ದ ಡಿಆರ್ಐ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಆಗ ಆತ ಬ್ಯಾಗ್ನಲ್ಲಿ 14 ಕೆಜಿ ಹೆರಾಯಿನ್ ದೊರಿತಿದೆ.
ಆರೋಪಿ ಪ್ರಯಾಣಿಕ ದೆಹಲಿ ಮೂಲದ ಮತ್ತೊಬ್ಬ ವ್ಯಕ್ತಿಗೆ ಈ ಹೆರಾಯಿನ್ ಹಸ್ತಾಂತರಿಸುವ ಕಾರ್ಯದಲ್ಲಿದ್ದ. ಈತನಿಗೆ ಪ್ರಯಾಣದ ಟಿಕೆಟ್ ಜೊತೆ ಹಣ ಮತ್ತು ಸ್ಟಾರ್ ಹೊಟೇಲ್ನಲ್ಲಿ ವಾಸ್ತವ್ಯ ಹೂಡುವ ವ್ಯವಸ್ಥೆ ಸಹ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಇದೇ ಜುಲೈ 15ರಿಂದ ಆರ್ಡಿಐ ಅಧಿಕಾರಿಗಳು ಪತ್ತೆ ಮಾಡಿರುವ 8ನೇ ಪ್ರಕರಣ ಇದಾಗಿದೆ. ಒಟ್ಟಾರೆ ಇದುವರೆಗೆ 250 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಸೋನಾಲಿ ಫೋಗಟ್ ಸಾವಿಗೆ ಮಾದಕ ದ್ರವ್ಯ ಸೇವನೆ ಕಾರಣ: ಗೋವಾ ಐಜಿಪಿ