ETV Bharat / state

ಇಂದು ಬಿಎಸ್​ವೈ ಬರ್ತ್​ ಡೇ: ಅರಮನೆ ಮೈದಾನದಲ್ಲಿ ಹಾಲಿ-ಮಾಜಿ ಸಿಎಂಗಳ ಸಮಾಗಮ - ಸಂಸದೆ ಶೋಭ ಕರಂದ್ಲಾಜೆ ಭೇಟಿ

ಇಂದು‌ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರ ಹುಟ್ಟು ಹಬ್ಬ ಹಿನ್ನೆಲೆ ಧವಳಗಿರಿ ನಿವಾಸಕ್ಕೆ ಸಂಸದೆ ಶೋಭ ಕರಂದ್ಲಾಜೆ ಭೇಟಿ ನೀಡಿ ಶುಭ ಹಾರೈಸಿದರು.

Here is brief detail of CM birth day celebration
ಇಲ್ಲಿದೆ ಸಿಎಂ ಬರ್ತ್​ ಡೇ ಆಚರಣೆಯ ಕಂಪ್ಲೀಟ್​ ಪ್ಲಾನ್​
author img

By

Published : Feb 27, 2020, 12:35 PM IST

ಬೆಂಗಳೂರು: ಇಂದು‌ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಅವರ ಹುಟ್ಟು ಹಬ್ಬ ಹಿನ್ನೆಲೆ ಧವಳಗಿರಿ ನಿವಾಸಕ್ಕೆ ಸಂಸದೆ ಶೋಭ ಕರಂದ್ಲಾಜೆ ಭೇಟಿ ನೀಡಿ ಶುಭ ಹಾರೈಸಿದರು.

ಇಲ್ಲಿದೆ ಸಿಎಂ ಬರ್ತ್​ ಡೇ ಆಚರಣೆಯ ಕಂಪ್ಲೀಟ್​ ಪ್ಲಾನ್​

ಭೇಟಿ ನಂತರ ಮಾಧ್ಯಮದವರೊಂದಿ ಅವರು ಮಾತನಾಡಿ, ಬಿಎಸ್​ವೈ ನಮ್ಮೆಲ್ಲರ ಮುಖಂಡ, ಅವರು ಧಣಿವರಿಯದ ರೈತ ನಾಯಕ. ಕಳೆದ ಬಾರಿ ಯಡಿಯೂರಪ್ಪ ಅವರ ಹುಟ್ಟು ಹಬ್ಬ ಆಚರಿಸುವಾಗ ಅವರು ಈ ಬಾರಿ ಸಿಎಂ ಆಗಲಿ ಎಂಬುದು ನಮ್ಮೆಲ್ಲರ ಸಂಕಲ್ಪವಾಗಿತ್ತು. ಅದರಂತೆ ಈ ಬಾರಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಅವರು ಸಿಎಂ ಆಗಿದ್ದಾರೆ. ಈ ಭಾಗ್ಯವನ್ನು ಕರುಣಿಸಿರುವ ಚಾಮುಂಡೆಶ್ವರಿ ದೇವರಿಗೆ ನಮ್ಮ ಪ್ರಣಾಮಗಳು ಎಂದರು.

ಹುಟ್ಟುಹಬ್ಬಕ್ಕೆ ಶುಭಕೋರಿದ ಅವರು, ಯಡಿಯೂರಪ್ಪ ಅವರಿಗೆ ಸದಾ ದೇವರ ಆಶೀರ್ವಾದ ಇರಲಿ ಎಂದು ಆಶಿಸಿದರು. 78ನೇ ವಸಂತಕ್ಕೆ ಕಾಲಿಡುತ್ತಿರುವ ಸಿಎಂ ಬಿಎಸ್ ವೈ ಇಂದು ಕುಟುಂಬಸ್ಥರು, ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಲಿದ್ದಾರೆ‌ ಎಂದು ತಿಳಿಸಿದರು.

ಸಿಎಂ ಹುಟ್ಟುಹಬ್ಬದ ಪ್ರಯುಕ್ತ ಅಭಿನಂದನಾ ಸಮಾರಂಭ:

ಸಿಎಂ ಬಿಎಸ್​ವೈ ಹುಟ್ಟುಹಬ್ಬವನ್ನ ಅರಮನೆ ಮೈದಾನದ ವೈಟ್ ಪೆಟಲ್ ನಲ್ಲಿ ಸಂಜೆ‌ 5ಕ್ಕೆ ಆಚರಿಸಲಾಗುತ್ತಿದ್ದು, ಅಭಿನಂದನಾ ಕಾರ್ಯಕ್ರಮಕ್ಕೆ ವೈಟ್ ಪೆಟಲ್ ಹಾಲ್ ಸಜ್ಜಾಗಿದೆ. ಹಾಲ್ ನಲ್ಲಿ 1800 ಜನರಿಗೆ ಆಸನದ ವ್ಯವಸ್ಥೆ‌ ಇದ್ದು, ಹೊರಗೆ ಕುಳಿತುಕೊಳ್ಳುವವರಿಗೆ ಎಲ್ಇಡಿ ಅಳವಡಿಕೆ ಮಾಡಲಾಗಿದೆ ಆ ಮೂಲಕ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಕಾರ್ಯಕ್ರಮಕ್ಕೆ ಬರುವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ವಿಶೇಷ ಅಂದ್ರೆ ಅಭಿನಂದನಾ ಸಮಾರಂಭದಲ್ಲಿ ಹಾಲಿ, ಮಾಜಿ ಸಿಎಂಗಳ ಸಮಾಗಮ ಅಗಲಿದೆ. ಇಂದು ವೇದಿಕೆಯಲ್ಲಿ ಸಿಎಂ ಬಿಎಸ್​ವೈ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಪ್ರಮುಖವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರು, ಸಹಾಯಕ ಸಚಿವರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಭಾಗಿಯಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.