ETV Bharat / state

ಇನ್ಮುಂದೆ ಬಿಎಂಟಿಸಿ ಆಗಲಿದೆ ಕಂಡಕ್ಟರ್ ಲೆಸ್; ಸಂಕಷ್ಟದಿಂದ ಪಾರಾಗಲು ಹೊಸ ಪ್ಲಾನ್! - ಸಂಕಷ್ಟದಿಂದ ಪಾರಾಗಲು ಬಿಎಂಟಿಸಿ ಹೊಸ ಪ್ಲಾನ್

ಹೊಸ ಯೋಜನೆ ಪ್ರಕಾರ ಬಸ್​​ಗಳಲ್ಲಿ ಚಾಲಕ ಮಾತ್ರ ಇರಲಿದ್ದು, ಇನ್ಮುಂದೆ ನಿರ್ವಾಹಕ ಇರುವುದಿಲ್ಲ. ಪರಿಣಾಮ ಟಿಕೆಟ್​ ಪಡೆಯಲು ಡಿಜಿಟಲ್ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಮುಂದಾಗಿದೆ.

ಇನ್ಮುಂದೆ ಬಿಎಂಟಿಸಿಯಾಗಲಿದೆ ಕಂಡಕ್ಟರ್ ಲೆಸ್
ಇನ್ಮುಂದೆ ಬಿಎಂಟಿಸಿಯಾಗಲಿದೆ ಕಂಡಕ್ಟರ್ ಲೆಸ್
author img

By

Published : Jul 5, 2022, 3:07 PM IST

ಬೆಂಗಳೂರು: ಸದ್ಯ ಮಹಾನಗರ ಸಾರಿಗೆ ಸಂಸ್ಥೆ ತೀವ್ರ ಸಂಕಷ್ಟ ಎದುರಿಸುತ್ತಿದೆ. ಇರುವ ಉದ್ಯೋಗಿಗಳಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡುತ್ತಿದೆ. ಈ ಹಿನ್ನಲೆಯಲ್ಲಿ ನಷ್ಟದ ಸುಳಿಯಿಂದ ಬಿಎಂಟಿಸಿ ಮೇಲೆತ್ತಲು ಆಡಳಿತ ಮಂಡಳಿ ಹೊಸ ಪ್ಲಾನ್ ರೆಡಿ ಮಾಡಿದೆ.

ಹೊಸ ಪ್ಲಾನ್ ಪ್ರಕಾರ ಬಸ್​​ಗಳಲ್ಲಿ ಚಾಲಕ ಮಾತ್ರ ಇರಲಿದ್ದು, ನಿರ್ವಾಹಕ ಇರುವುದಿಲ್ಲ. ಮುಂದಿನ ದಿನಗಳಲ್ಲಿ ನಿರ್ವಾಹಕ ರಹಿತ ಸೇವೆ ನೀಡಲು ಬಿಎಂಟಿಸಿ ನಿರ್ಧರಿಸಿದೆ. ನಿಗಮ ಆರ್ಥಿಕ ಹೊರೆ ಎದುರಿಸುತ್ತಿದೆ ಜೊತೆ ಜೊತೆಗೆ ಡ್ರೈವರ್​​ಗಳ ಕೊರತೆಯೂ ಕಾಡುತ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಹೀಗಾಗಿ ಕಂಡಕ್ಟರ್ ಪೋಸ್ಟ್​ಗಳನ್ನೇ ತೆಗೆದು ಹಾಕಲು ನಿಗಮ ಪ್ಲಾನ್ ಮಾಡಿದೆ.

ಟಿಕೆಟ್ ಹಣ ಪಾವತಿ ಡಿಜಟಲೈಸ್: ಸದ್ಯ ಬಿಎಂಟಿಸಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಆರಂಭವಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಫೆಸಿಲಿಟಿ ಜಾರಿಗೆ ತಂದು ಟಿಕೆಟ್ ಕಲೆಕ್ಷನ್​​ ಸಂಪೂರ್ಣ ಡಿಜಿಟಲೈಸ್ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ನಿಗಮದಲ್ಲಿರುವ ಎಲ್ಲ ಕಂಡಕ್ಟರ್​ಗಳು ಕೆಲಸದಿಂದ ಮುಕ್ತರಾಗಲಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ಮುಂದೆ ಬಿಎಂಟಿಸಿಯಾಗಲಿದೆ ಕಂಡಕ್ಟರ್ ಲೆಸ್
ಇನ್ಮುಂದೆ ಬಿಎಂಟಿಸಿಯಾಗಲಿದೆ ಕಂಡಕ್ಟರ್ ಲೆಸ್

ಎಲ್ಲರೂ ಡ್ರೈವರ್ಸ್: ಈಗ ಇರುವ ಪ್ರತಿಯೊಬ್ಬ ಕಂಡಕ್ಟರ್​ಗಳೂ ಕಂಡಕ್ಟರ್ ಕಂ ಡ್ರೈವರ್ ಆಗಿ ನೇಮಕವಾದವರು. ಈ ಎಲ್ಲ ಕಂಡಕ್ಟರ್​​ಗಳನ್ನು​ ಡ್ರೈವಿಂಗ್‌ಗೆ ನಿಯೋಜಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್​​ಗಳನ್ನು ರಸ್ತೆಗಿಳಿಸಲಿದ್ದೇವೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2 ವರ್ಷದಲ್ಲಿ ಎಲ್ಲ ಬಸ್ ಗಳೂ ಕಂಡೆಕ್ಟರ್ ಲೆಸ್: ಸದ್ಯದ ಪರಿಸ್ಥಿತಿಯಲ್ಲಿ ನಿರ್ವಾಹಕರಿಲ್ಲದೇ ಬಸ್ ಊಹಿಸುವುದು ಅಸಾಧ್ಯ, ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳಲು ಸಮಯ ಬೇಕಾಗಲಿದೆ. ಹೊರೆ ತಪ್ಪಿಸೋ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ ಬಿಎಂಟಿಸಿ. ಮುಂದಿನ ಒಂದೆರಡು ವರ್ಷದಲ್ಲಿ ಶೇಕಡಾ 100 ರಷ್ಟು ಕಂಡಕ್ಟರ್ ಲೆಸ್ ಬಸ್ ರಸ್ತೆಗಿಳಿಯಬೇಕು ಎನ್ನುವುದು ಸದ್ಯದ ಲೆಕ್ಕಾಚಾರ.

ಬೇಲಿಯೇ ಎದ್ದು ಹೊಲ ಮೇಯ್ದಂತೆ: ಈ ಯೋಜನೆ ಮತ್ತೊಂದಿಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ ಎನ್ನುವುದು ಸಹ ಚರ್ಚಾರ್ಹ. ಅಲ್ಲದೇ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ ಎಂದು ಸಾರಿಗೆ ಮುಖಂಡ ಅನಂತುಸುಬ್ಬರಾವ್ ದೂರಿದ್ದಾರೆ.

ಇದನ್ನೂ ಓದಿ: ಭಕ್ತರ ಸೋಗಿನಲ್ಲಿ ಬಂದ್ರು, ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಇರಿದ್ರು.. ಚಂದ್ರಶೇಖರ್​ ಗುರೂಜಿ ಕೊಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.