ಬೆಂಗಳೂರು: 2004ರಲ್ಲೇ ವಿದ್ಯುತ್ ಚಾಲಿತ ವಾಹನ ತಯಾರಿಸಿ ಸುಮಾರು 1 ಲಕ್ಷ ಕಿಲೋಮೀಟರ್ ಇದೆ ಗಾಡಿಯಲ್ಲಿ ಭಾರತದಾದ್ಯಂತ ಸಂಚರಿಸಿದ್ದ ಸಯ್ಯದ್ ಸಜ್ಜದ್ ಅಹಮದ್ ರವರು ಇದೀಗ ತಮ್ಮ ವಾಹನಕ್ಕೆ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
2004ರಲ್ಲೇ ವಿದ್ಯುತ್ ಚಾಲಿತ ವಾಹನ ತಯಾರಿಸಿ ಸುಮಾರು 1 ಲಕ್ಷ ಕಿಲೋಮೀಟರ್ ಇದೆ ಗಾಡಿಯಲ್ಲಿ ಭಾರತದಾದ್ಯಂತ ಸಂಚರಿಸಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರ ವಿಷನ್ 2020ಯ ಮಹತ್ವವನ್ನು ದೇಶದಲ್ಲಿ ಪ್ರಚಾರ ಮಾಡಿದವರು ಸಯ್ಯದ್ ಸಜ್ಜದ್ ಅಹಮದ್.
ಪ್ರಸ್ತುತವಾಗಿ ಇವರು ನಿರ್ಮಿಸಿದ ವಿದ್ಯುತ್ ಚಾಲಿತ ವಾಹನಕ್ಕೆ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ಸಹಾಯ ಮಾಡಬೇಕು. 2 ಲಕ್ಷ ರೂಪಾಯಿಗೆ ಈ ಕಾರನ್ನು ಖರೀದಿಸಬಹುದು. ಇದು ಸಾರ್ವಜನಿಕರಿಗೆ ಬಳಕೆಗೆ ಬರುವಂತಾಗಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಸಯ್ಯದ್ ಅಹಮದ್ ಮನವಿಗೆ ಸರ್ಕಾರ ಸ್ಪಂದಿಸುತ್ತಾ ಎಂಬುದು ಮುಂದಿನ ದಿನಗಳಲ್ಲಿ ಕಾದು ನೋಡ್ಬೇಕಾಗಿದೆ.