ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸಲಾಗಿದ್ದು, ಇಂದು ಪಾದಯಾತ್ರೆ ಸಮಾರೋಪ ಸಮಾರಂಭ ನಡೆಯಿತು. ಇದೀಗ ಸಮಾವೇಶದಿಂದ ಜನರು ತಾವು ಬಂದ ಬಸ್ ಹಾಗೂ ವಾಹನಗಳಲ್ಲಿ ವಾಪಸ್ ತೆರಳುತ್ತಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿ ಜನ ತುಂಬಿತುಳುಕುತ್ತಿದ್ದು, ಜನರನ್ನು ಪೊಲೀಸರು ಕಳುಹಿಸಿಕೊಡುತ್ತಿದ್ದಾರೆ. ಟ್ರಾಫಿಕ್ ಉಂಟಾಗದಂತೆ ಪೊಲೀಸರು ಪೂರ್ತಿ ನಿಗಾ ವಹಿಸಿದ್ದಾರೆ. ಸ್ಪೀಕರ್ ಬಳಸಿ ಜನರಿಗೆ ತೆರಳುವಂತೆ ಸೂಚನೆ ನೀಡಲಾಗುತ್ತಿದ್ದು, ತ್ರಿಪುರ ವಾಸಿನಿ ಗೇಟ್ ಬಳಿ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ಸಿಎಂ ಮನೆ ಹಾಗೂ ವಿಧಾನಸೌಧದ ಕಡೆ ತೆರಳುವ ಸಾಧ್ಯತೆ ಹಿನ್ನೆಲೆ ನಿಗಾ ವಹಿಸಲಾಗಿದ್ದು, ಅರಮನೆ ಮೈದಾನದ ಹಿಂಭಾಗದಿಂದ ವಾಹನಗಳಿಗೆ ಹೋಗಲು ಸೂಚನೆ ನೀಡಲಾಗಿದೆ. ತ್ರಿಪುರ ವಾಸಿನಿ ಗೇಟ್ ಬಳಿ ಓಡಾಡಲು ಅವಕಾಶ ನೀಡಲಾಗುತ್ತಿದ್ದು, ಜನರಿಗೆ ಬಸ್ ಹಾಗೂ ವಾಹನಗಳಿರುವ ಜಾಗಕ್ಕೆ ತೆರಳಲು ಪೊಲೀಸರಿಂದ ಸೂಚನೆ ನೀಡಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: ಪಂಚಮಸಾಲಿ ಸಮುದಾಯ 2ಎ ಗೆ ಸೇರಿಸುವ ಬೇಡಿಕೆ ಈಡೇರದೆ ಮಠಕ್ಕೆ ಮರಳಲ್ಲ: ಕೂಡಲಸಂಗಮ ಶ್ರೀ
ಮೇಕ್ರಿ ಸರ್ಕಲ್ ಬಳಿ ಜನರಿಗೆ ತೆರಳಲು ಸೂಚನೆ ನೀಡಿದ ಹಿನ್ನೆಲೆ ಅರಮನೆ ರಸ್ತೆಯಲ್ಲಿ ಟ್ರಾಫಿಕ್ ಶುರುವಾಗಿದೆ. ಮೇಕ್ರಿ ಸರ್ಕಲ್ನಿಂದ ಕಾವೇರಿ ಜಂಕ್ಷನ್ ಕಡೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿವೆ.