ETV Bharat / state

ರಾಜಧಾನಿಯಲ್ಲಿ ಅಬ್ಬರಿಸಿದ ವರುಣ... ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ! - Heavy rain in Bengaluru

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಏಕಾಏಕಿ ಮಳೆ ಸುರಿದ ಕಾರಣ ಕೆಲವೊಂದು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿವೆ.

Heavy rain in Bangalore
Heavy rain in Bangalore
author img

By

Published : Sep 3, 2021, 2:57 AM IST

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಗುರುವಾರ ರಾತ್ರಿ ಸುಮಾರು 9 ಗಂಟೆಯಿಂದ ಕೆಲ ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿದಿದ್ದು, ಪರಿಣಾಮ ಕೆಲವು ರಸ್ತೆ, ಅಂಡರ್​​ ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸಿದರು.

ಏಕಾಏಕಿಯಾಗಿ ಮಳೆ ಆರಂಭಗೊಂಡಿದ್ದರಿಂದ ಮಲ್ಲೇಶ್ವರ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಾಲೆಸ್ ರೋಡ್​, ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ.ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದ ದೃಶ್ಯ ಕಂಡು ಬಂದಿತು. ನಗರದ ಆರ್.ಆರ್. ನಗರ, ನಂದಿನಿ ಲೇಔಟ್, ಅಂಜನಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ವಿಧಾನಸೌಧ, ನಾಗರಬಾವಿ, ಕೋರಮಂಗಲ, ಲಕ್ಕಸಂದ್ರ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಮಳೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.

ಸದಾಶಿವನಗರ, ಯಶವಂತಪುರ, ಹೂಡಿ, ವಿಶ್ವನಾಥನಾಗೇನಹಳ್ಳಿ, ರಾಮಮೂರ್ತಿನಗರ, ಮನೋರಾಯಯನಪಾಳ್ಯ, ಹೊರಮಾವು, ದೊಡ್ಡನೆಕುಂದಿ, ಬಾಣಸವಾಡಿ, ಚೊಕ್ಕಸಂದ್ರ, ಪೀಣ್ಯ, ಅತ್ತೂರು, ಬಾಗಲಗುಂಟೆ, ದೊಡ್ಡಬೊಮ್ಮಸಂದ್ರ, ಬ್ಯಾಾಟರಾಯನಪುರ, ಬೆಳ್ಳಂದೂರು ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ವರದಿಗಳಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.