ETV Bharat / state

ಬಿಎಸ್​ವೈ ಡಿಸ್ಚಾರ್ಜ್​ ಆಗಿಲ್ಲ... ಸಿಎಂ ಪೇಶೆಂಟ್​ ಐಡಿ ಬಗ್ಗೆ ಸ್ಪಷ್ಟಪಡಿಸಿದ ಆರೋಗ್ಯ ಇಲಾಖೆ - ಯಡಿಯೂರಪ್ಪ ಕೊರೊನಾ ಪಾಸಿಟಿವ್ ಸಂಖ್ಯೆ

ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ಪಾಸಿಟಿವ್ ಸಂಖ್ಯೆ 61718 ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

Yadiyurappa
Yadiyurappa
author img

By

Published : Aug 7, 2020, 3:53 PM IST

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಕೊರೊನಾ‌ ಸೋಂಕಿಗೆ ಒಳಗಾಗಿದ್ದು, ಸದ್ಯ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ನವರ ಕೋವಿಡ್ ಪಾಸಿಟಿವ್ ಸಂಖ್ಯೆಯನ್ನು ತಪ್ಪಾಗಿ ಬಿತ್ತರಿಸುತಿದ್ದು, ಆರೋಗ್ಯ ಇಲಾಖೆಯು ಆಗಸ್ಟ್ 4 ರಂದು ಮುಖ್ಯಮಂತ್ರಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದೆ ಎಂದು ಸುದ್ದಿ ಓಡಾಡುತ್ತಿದೆ.

ಇದನ್ನ ಆರೋಗ್ಯ ಇಲಾಖೆಯ ಗಮನಿಸಿದ್ದು, ಇಲಾಖೆಯು ಸೋಂಕಿತ ರೋಗಿಗೆ 2 ಗುರುತಿನ ಸಂಖ್ಯೆಯನ್ನು ನೀಡುತ್ತದೆ. ರಾಜ್ಯದ ಗುರುತಿನ ಸಂಖ್ಯೆ (State Identification Number) ಆಯಾ ಜಿಲ್ಲೆಗಳ ಗುರುತಿನ ಸಂಖ್ಯೆ (District Identification Number) ನೀಡಲಾಗುತ್ತೆ.

ರೋಗಿಯೊಬ್ಬರ ರಾಜ್ಯ ಗುರುತಿನ ಸಂಖ್ಯೆ 61718ಯನ್ನು (52 ವರ್ಷ, ಪುರುಷ, ಬೆಂಗಳೂರು) ಮುಖ್ಯಮಂತ್ರಿಗಳ ಗುರುತಿನ ಸಂಖ್ಯೆಯೊಂದಿಗೆ ತಪ್ಪಾಗಿ ಹೋಲಿಕೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಜಿಲ್ಲಾ ಗುರುತಿನ ಸಂಖ್ಯೆ (Bangalore Identification Number) 61718 ಆಗಿದ್ದು ರಾಜ್ಯ ಗುರುತಿನ ಸಂಖ್ಯೆಯೂ ಬೇರೆಯಾಗಿರುತ್ತದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.