ಕೆ.ಆರ್. ಪುರಂ/ಬೆಂಗಳೂರು: ನಗರದ ಅತಿ ದೊಡ್ಡ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ 5ನೇ ಚಿನ್ನದ ಮಳಿಗೆಯನ್ನು ಕೆ.ಆರ್. ಪುರಂನಲ್ಲಿ ಇಂದು ಆರಂಭ ಮಾಡಲಾಗಿದೆ.
ಬೆಂಗಳೂರು ಹೊರವಲಯ ಮತ್ತು ಕೋಲಾರ ಜಿಲ್ಲೆಯ ಗ್ರಾಹಕರಿಗೆ ಅನುಕೂಲವಾಗುವಂತೆ ಕೆ.ಆರ್. ಪುರಂನಲ್ಲಿ 5ನೇ ಚಿನ್ನದ ಮಳಿಗೆ ನಿರ್ಮಿಸಲಾಗಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ನಟ ಧ್ರುವ ಸರ್ಜಾ ಉದ್ಘಾಟನೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಚಿನ್ನ ಮಿನಿ ಬ್ಯಾಂಕ್ ಇದ್ದಂತೆ. ಸಣ್ಣ ಪ್ರಮಾಣದ ಚಿನ್ನವಿದ್ದರೂ ಸಹ ಅದು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಮಹಿಳೆಯರಿಗೆ ಇದು ಆರ್ಥಿಕ ಭದ್ರತೆ ಒದಗಿಸುತ್ತದೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದು, ಉಳಿತಾಯ ಮಾಡಿದ ಹಣದಲ್ಲಿ ಸಣ್ಣ ಪ್ರಮಾಣದಲ್ಲಿ ಚಿನ್ನ ಸಂಗ್ರಹ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಡಾ. ಟಿ.ಎ.ಶರವಣ ಮಾತನಾಡಿ, ಬಯಲುಸೀಮೆ ಪ್ರದೇಶ ಅದರಲ್ಲೂ ಪ್ರಮುಖವಾಗಿ ಕೋಲಾರ ಮತ್ತಿತರೆ ಭಾಗದ ಜನತೆ ಬೆಂಗಳೂರಿನ ಸಂಚಾರ ಒತ್ತಡದಲ್ಲಿ ನಗರಕ್ಕೆ ಬಂದು ಚಿನ್ನ ಖರೀದಿ ಮಾಡಲು ಕಷ್ಟವಾಗುತ್ತಿದೆ. ಇದನ್ನು ಮನಗಂಡು ಕೆ.ಆರ್. ಪುರಂನಲ್ಲಿ 5ನೇ ಚಿನ್ನದ ಮಳಿಗೆಯನ್ನು ನಿರ್ಮಿಸಿದ್ದು, ಮದುವೆ ಮತ್ತಿತರೆ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಲು ಸಹಕಾರಿಯಾಗಿದೆ ಎಂದರು.
ಇದನ್ನೂ ಓದಿ: ಕುಂದಾನಗರಿಯಲ್ಲಿ 'ಯುವರತ್ನ'... ಪುನೀತ್ ಕಂಡು ಅಭಿಮಾನಿಗಳ ಹರ್ಷೋದ್ಘಾರ
ಮಳಿಗೆ ಶುಭಾರಂಭ ಮಾಡಿದ ಸುಸಂದರ್ಭದಲ್ಲಿ ಗ್ರಾಹಕರಿಗಾಗಿ ದುಬೈ ಬೆಲೆಯಲ್ಲಿ ಚಿನ್ನಾಭರಣ ಖರೀದಿಸುವ ಸುವರ್ಣ ಅವಕಾಶ ಕಲ್ಪಿಸಲಾಯಿತು. ಪ್ರತಿ ಒಂದು ಕೆಜಿ ಬೆಳ್ಳಿ ಆಭರಣ ಖರೀದಿಸಿದರೆ 2000 ರೂ. ರಿಯಾಯಿತಿ ಮತ್ತು 50 ಸಾವಿರಕ್ಕಿಂತ ಹೆಚ್ಚಿನ ವಜ್ರಾಭರಣಗಳ ಖರೀದಿಗೆ ಉಚಿತ ಚಿನ್ನದ ನಾಣ್ಯ ನೀಡಲಾಗುತ್ತಿದೆ. ಯಾವುದೇ ಬೆಳ್ಳಿ ಆಭರಣಗಳ ಖರೀದಿ ಮೇಲೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಎಲ್ಲಾ ಕೊಡುಗೆಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ. ಟಿ.ಎ.ಶರವಣ, ಮಳಿಗೆಗೆ ಬರುವ ಗ್ರಾಹಕರಿಗೆ ಹೇಳಿದರು.