ETV Bharat / state

ಸ್ಯಾಂಟ್ರೋ ರವಿ ಮೇಲಿನ ಆರೋಪಕ್ಕೆ ಹೆಚ್​ಡಿಕೆ ಪೂರಕ ಸಾಕ್ಷ್ಯ ನೀಡಲಿ: ಬ್ರಿಜೇಶ್‌ ಕಾಳಪ್ಪ - evidence for allegations against Santro Ravi

ಗಂಭೀರ ಸ್ವರೂಪದ ಆರೋಪ ಮಾಡಿರುವುದು ಮಾತ್ರವಲ್ಲದೆ ಪ್ರತಿ ಹಂತದಲ್ಲೂ ತಮಗೆ ಎಲ್ಲಾ ಮಾಹಿತಿ ಗೊತ್ತಿದೆ ಎನ್ನುವ ರೀತಿಯಲ್ಲಿ ಹೆಚ್‌ಡಿಕೆ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯ ಬಿಡುಗಡೆಗೊಳಿಸಿದರೆ ಜನರಿಗೆ ಮಾಹಿತಿ ದೊರೆತಂತಾಗುತ್ತದೆ ಎಂದು ಎಎಪಿಯ ಬ್ರಿಜೇಶ್​ ಕಾಳಪ್ಪ ಮನವಿ ಮಾಡಿದರು.

AAP leader Brijesh Kalappa press conference
ಎಎಪಿ ಮುಖಂಡ ಬ್ರಿಜೇಶ್‌ ಕಾಳಪ್ಪ ಸುದ್ದಿಗೋಷ್ಠಿ
author img

By

Published : Jan 8, 2023, 1:12 PM IST

ಮಾಧ್ಯಮದವರ ಜೊತೆ ಮಾತನಾಡಿದ ಬ್ರಿಜೇಶ್​ ಕಾಳಪ್ಪ

ಬೆಂಗಳೂರು: ಆಪರೇಷನ್‌ ಕಮಲದ ಸಂದರ್ಭದಲ್ಲಿ ಮುಂಬೈ ರೆಸಾರ್ಟ್‌ನಲ್ಲಿದ್ದ ಬಿಜೆಪಿ ಪರ ಶಾಸಕರಿಗೆ ಸ್ಯಾಂಟ್ರೋ ರವಿಯು 12 ಹುಡುಗಿಯರನ್ನು ಪೂರೈಸಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹೆಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್‌ ಕಾಳಪ್ಪ ಆಗ್ರಹಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಂಬೈ ರೆಸಾರ್ಟ್‌ಗೆ ಹುಡುಗಿಯರನ್ನು ಪೂರೈಸಲಾಗಿತ್ತು ಎಂಬ ಕುಮಾರಸ್ವಾಮಿ ಅವರ ಆರೋಪವು ಗಂಭೀರ ಸ್ವರೂಪದ್ದು. ಆದರೆ ಕೇವಲ ಹೇಳಿಕೆ ನೀಡಿ ಸುಮ್ಮನಾಗುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಬಿಜೆಪಿಯ ಅನೈತಿಕ ರಾಜಕಾರಣಕ್ಕೆ ಸಂಬಂಧಿಸಿದ ಪುರಾವೆಗಳನ್ನು ಕುಮಾರಸ್ವಾಮಿ ಶೀಘ್ರವೇ ಬಹಿರಂಗ ಪಡಿಸಲಿ. ಹಿಟ್‌ ಆ್ಯಂಡ್‌ ರನ್‌ ಮಾಡುವ ಬದಲು ಜವಾಬ್ದಾರಿಯುತ ನಾಯಕರಂತೆ ರಾಜ್ಯದ ಜನತೆಯ ಮುಂದೆ ಸಾಕ್ಷಿಗಳನ್ನು ತೆರೆದಿಡಲಿ ಎಂದು ಹೇಳಿದರು.

ರಾಜ್ಯ ಬಿಜೆಪಿಯು ಕೇಂದ್ರ ಬಿಜೆಪಿಯ ಸಹಕಾರದೊಂದಿಗೆ ದೊಡ್ಡ ಪ್ರಮಾಣದ ಅಕ್ರಮಗಳನ್ನು ಮಾಡಿ ಅಧಿಕಾರಕ್ಕೆ ಬಂದಿದೆ. ಚುನಾವಣೆಯಲ್ಲಿ ಜನಾದೇಶ ಬಾರದಿದ್ದರೂ ಶಾಸಕರನ್ನು ಖರೀದಿಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರ ಪಡೆದುಕೊಂಡಿದೆ. ಮಹಿಳೆಯರನ್ನು ಬಳಸಿಕೊಂಡು ಅನೈತಿಕ ಚಟುವಟಿಕೆಗಳ ಮೂಲಕ ಶಾಸಕರನ್ನು ರೆಸಾರ್ಟ್‌ನಲ್ಲಿ ಹಿಡಿದಿಟ್ಟುಕೊಳ್ಳುವ ಹಂತಕ್ಕೆ ರಾಜಕಾರಣ ತಲುಪಿರುವುದು ಬಹುದೊಡ್ಡ ದುರಂತ. ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದರು.

ಮಹಿಳೆಯರನ್ನು ಬಳಸಿಕೊಳ್ಳುತ್ತಿರುವ ರೀತಿ ಖಂಡನೀಯ: ಭಾರತೀಯ ಸಂಸ್ಕೃತಿಯ ಬಗ್ಗೆ ಪುಖಾಂನುಪುಂಖವಾಗಿ ಮಾತನಾಡುವ ಬಿಜೆಪಿಯವರು ಮಹಿಳೆಯರನ್ನು ಹೀಗೆ ಬಳಸಿಕೊಂಡಿರುವುದು ಖಂಡನೀಯ. ಆಮ್‌ ಆದ್ಮಿ ಪಾರ್ಟಿಯು ಹಲವು ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. 50ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಿಜೆಪಿಯು ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮಹಿಳೆಯರನ್ನು ಬಳಸಿಕೊಂಡಿದೆ. ಮಹಿಳೆಯರ ವಿಚಾರದಲ್ಲಿ ಎರಡೂ ಪಕ್ಷಗಳಿಗಿರುವ ವ್ಯತ್ಯಾಸವನ್ನು ಇದರಿಂದ ತಿಳಿಯಬಹುದು ಎಂದು ಬ್ರಿಜೇಶ್‌ ಕಾಳಪ್ಪ ಟೀಕಿಸಿದರು.

ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದ ಹೆಚ್.ಡಿ.ಕುಮಾರಸ್ವಾಮಿ: ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನಲ್ಲಿ ಯುವತಿಯೋರ್ವಳು ಲೈಂಗಿಕ ಕಿರುಕುಳ ಎಸಗಿರುವ ಆರೋಪ ಮಾಡಿ, ದೂರು ನೀಡಿದ್ದಾಳೆ. ಈ ಕುರಿತು ಪತಿಕ್ರಿಯೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಸುದ್ದಿಗೋಷ್ಠಿಯಲ್ಲಿ ಸ್ಯಾಂಟ್ರೋ ರವಿ ಬಿಜೆಪಿ ಜೊತೆಗೆ ಹೊಂದಿರುವ ಸಂಬಂಧದ ಕುರಿತು ಬಿಜೆಪಿ ನಾಯಕರುಗಳ ಮೇಲೆ ವಾಗ್ದಾಳಿ ನಡೆಸಿದ್ದರು.

ಸಮ್ಮಿಶ್ರ ಸರ್ಕಾರ ಕೆಡವಿದ ಶಾಸಕರು ಮುಂಬೈನಲ್ಲಿದ್ದ ಸಮಯದಲ್ಲಿ ಅವರ ಮೋಜು ಮಸ್ತಿಗಾಗಿ ಸ್ಯಾಂಟ್ರೋ ರವಿ ಹುಡುಗಿಯರನ್ನು ಸಪ್ಲೈ ಮಾಡಿದ್ದ ಎಂದು ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಅದಷ್ಟೇ ಅಲ್ಲದೇ, ಈ ಅಕ್ರಮಗಳನ್ನು ಮುಚ್ಚಿಡಲು ಬಿಜೆಪಿ ನಾಯಕರುಗಳು ಅವನಿಗೆ ಸೂಚನೆಯನ್ನು ನೀಡಿದ್ದರು. ಸ್ಯಾಂಟ್ರೋ ರವಿ ಬಿಜೆಪಿ ಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದಾನೆ. ಆತನ ಮೇಲೆ ಅದೆಷ್ಟೋ ಕೇಸ್​ಗಳು ಬೆಂಗಳೂರಿನಲ್ಲಿ ದಾಖಲಾಗಿವೆ ಎಂದು ಆರೋಪಿಸಿದ್ದರು.

ಸ್ಯಾಂಟ್ರೋ ರವಿ ಕುಮಾರಕೃಪಾ ಗೆಸ್ಟ್​ ಹೌಸ್​ನಲ್ಲಿ ಆಶ್ರಯ ಕೊಟ್ಟಿದ್ದ ಅಥಿತಿಗೃಹದ ಸಹಾಯಕ ಪ್ರಧಾನ ವ್ಯವಸ್ಥಾಪಕ ದೇವರಾಜ್​ ಹೆಚ್​ ಎಸ್​ ಅವರನ್ನು ವರ್ಗಾವಣೆ ಮಾಡಿದಾಗಲೂ ಹೆಚ್​ ಡಿಕೆ ಈ ಬಗ್ಗೆ ಸಂಪೂರ್ಣವಾದ ತನಿಖೆ ನಡೆಯಬೇಕು ಎಂದು ಪ್ರತಿಕ್ರಿಯೆ ನೀಡಿದ್ದರು. ಈ ರೀತಿ ಹೇಳಿಕೆಗಳಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿಗಳು ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನೂ ಪೂರೈಸಬೇಕು ಎಂದು ಆಮ್​ ಆದ್ಮಿ ಪಾರ್ಟಿ ನಾಯಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೆಲಸದ ಆಮಿಷಯೊಡ್ಡಿ ಯುವತಿ ಮೇಲೆ ಅತ್ಯಾಚಾರ.. ಆರೋಪಿಗೆ ಬಿಜೆಪಿ ಸಚಿವರ ಸಂಪರ್ಕ ಇದೆ ಎಂದ ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.