ಬೆಂಗಳೂರು: ಬೀದಿಗೆ ಬಿದ್ದಿರುವ ರಾಜ್ಯದ ನೆರೆ ಸಂತ್ರಸ್ತರು ಸರ್ಕಾರದ ಪರಿಹಾರ ನಿರೀಕ್ಷೆಯಲ್ಲಿ 'ಜಾಗರಣೆ' ಮಾಡುತ್ತಿದ್ದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜನ ಜಾಗರಣ ಅಭಿಯಾನಕ್ಕೆ ಆಗಮಿಸುತ್ತಿರುವುದು ಚೋದ್ಯವೇ ಸರಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಿರುವ ಹಣಕಾಸು ನೆರವಿನ ಬಗ್ಗೆ ತುಟಿಬಿಚ್ಚದೆ, ನೆರೆ ಸಂತ್ರಸ್ತರ ಗೋಳು ಕೇಳದ ಕೇಂದ್ರ-ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಅಭಿಯಾನ ನಡೆಸುವ ಮೂಲಕ ಸ್ವಯಂಕೃತ ಅಪರಾಧ ಮುಚ್ಚಿಕೊಳ್ಳಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.
-
ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ನಾಳಿನ ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ.
— H D Kumaraswamy (@hd_kumaraswamy) January 17, 2020 " class="align-text-top noRightClick twitterSection" data="
CAA ಬಗ್ಗೆ ಅರಿವು ಮೂಡಿಸುವ ಆತುರ ತೋರುವುದಕ್ಕಿಂತ ರಾಜ್ಯಕ್ಕೆ ನೀಡಬೇಕಿರುವ ಅನುದಾನ ನೀಡಿಕೆ ಮತ್ತು ನೆರೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಲು ಮುಂದಾಗಲಿ.
3/3
">ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ನಾಳಿನ ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ.
— H D Kumaraswamy (@hd_kumaraswamy) January 17, 2020
CAA ಬಗ್ಗೆ ಅರಿವು ಮೂಡಿಸುವ ಆತುರ ತೋರುವುದಕ್ಕಿಂತ ರಾಜ್ಯಕ್ಕೆ ನೀಡಬೇಕಿರುವ ಅನುದಾನ ನೀಡಿಕೆ ಮತ್ತು ನೆರೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಲು ಮುಂದಾಗಲಿ.
3/3ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ನಾಳಿನ ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ.
— H D Kumaraswamy (@hd_kumaraswamy) January 17, 2020
CAA ಬಗ್ಗೆ ಅರಿವು ಮೂಡಿಸುವ ಆತುರ ತೋರುವುದಕ್ಕಿಂತ ರಾಜ್ಯಕ್ಕೆ ನೀಡಬೇಕಿರುವ ಅನುದಾನ ನೀಡಿಕೆ ಮತ್ತು ನೆರೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಲು ಮುಂದಾಗಲಿ.
3/3
ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಗೃಹ ಸಚಿವರು ನಾಳಿನ ಹುಬ್ಬಳ್ಳಿ ಸಭೆಯಲ್ಲಿ ನೆರೆ ಪರಿಹಾರ, ರಾಜ್ಯದ ಪಾಲಿನ ಹಣಕಾಸಿನ ಬಗ್ಗೆ ಬಾಯಿ ತೆರೆಯಲಿ ಎಂದು ಆಗ್ರಹಿಸಿದ್ದಾರೆ. ಸಿಎಎ ಬಗ್ಗೆ ಅರಿವು ಮೂಡಿಸುವ ಆತುರ ತೋರುವುದಕ್ಕಿಂತ ರಾಜ್ಯಕ್ಕೆ ನೀಡಬೇಕಿರುವ ಅನುದಾನ ನೀಡಬೇಕು ಮತ್ತು ನೆರೆ ಪರಿಹಾರಕ್ಕೆ ತಕ್ಷಣ ಸ್ಪಂದಿಸಲು ಮುಂದಾಗಲಿ ಎಂದು ಒತ್ತಾಯಿಸಿದ್ದಾರೆ.