ETV Bharat / state

ಸರ್ಕಾರವನ್ನು ಹೇಗೆ ರಿಪೇರಿ ಮಾಡ್ಬೇಕೆಂದು ನಮಗೆ ಗೊತ್ತಿದೆ: ಹೆಚ್​.ಡಿ.ರೇವಣ್ಣ

ರಾಜ್ಯ ಸರ್ಕಾರವನ್ನು ಹೇಗೆ ರಿಪೇರಿ ಮಾಡಬೇಕು ಎಂದು ನಮಗೆ ಗೊತ್ತಿದೆ, ನಾವು ಮಾಡುತ್ತೇವೆ. ನಮಗೂ ಕಾಲ ಬರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.

hd-revanna-ststement
ಮಾಜಿ ಸಚಿವ ಹೆಚ್​.ಡಿ ರೇವಣ್ಣ
author img

By

Published : Dec 18, 2019, 4:56 PM IST

ಬೆಂಗಳೂರು : ಬಿಜೆಪಿ ಸರ್ಕಾರವನ್ನು ಹೇಗೆ ರಿಪೇರಿ ಮಾಡಬೇಕು ಎಂದು ನಮಗೆ ಗೊತ್ತಿದೆ, ನಾವು ಮಾಡುತ್ತೇವೆ. ನಮಗೂ ಕಾಲ ಬರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಉಪಚುನಾವಣೆ ಹೇಗೆ ನಡೆದಿದೆ? ಎಂಬುದು ಗೊತ್ತು. ಒಂದೊಂದು ಕ್ಷೇತ್ರದಲ್ಲಿ 50 ರಿಂದ 60 ಕೋಟಿ ರೂ ಖರ್ಚು ಮಾಡಿದ್ದಾರೆ. ಅದನ್ನೆಲ್ಲಾ ಪ್ರತ್ಯೇಕವಾಗಿ ಬಹಿರಂಗ ಪಡಿಸುತ್ತೇನೆ ಎಂದರು.

ಇನ್ನು ಲೋಕೋಪಯೋಗಿ ಇಲಾಖೆಯ 570 ಸಹಾಯಕ ಇಂಜಿನಿಯರ್ ಹಾಗೂ 300 ಕಿರಿಯ ಇಂಜಿನಿಯರ್​ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿರುವ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಮೂಲಕ ಆಯ್ಕೆ ಪರೀಕ್ಷೆ ನಡೆಸಲಾಗಿದೆ. 64,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸುಮಾರು 2 ಕೋಟಿ ರೂ. ಪರೀಕ್ಷಾ ಶುಲ್ಕ ಪಡೆದಿದ್ದಾರೆ. ಕೊನೇಯ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ರದ್ದು ಮಾಡಿದ್ದಾರೆ. ಇದರಿಂದಾಗಿ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಮಾಜಿ ಸಚಿವ ಹೆಚ್​.ಡಿ. ರೇವಣ್ಣ

ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ಈ ಬಗ್ಗೆ ಬೇಕಾದರೆ ಸಿಬಿಐನಿಂದ ತನಿಖೆ ಮಾಡಿಸಲಿ ಎಂದರು. ಪಾರದರ್ಶಕ ರೀತಿಯಲ್ಲಿ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ ಈಗ ಪರೀಕ್ಷಾ ಪ್ರಾಧಿಕಾರವೇ ಸರಿಯಲ್ಲ ಎಂದರೆ ಹೇಗೆ ರೇವಣ್ಣ ಪ್ರಶ್ನಿಸಿದರು.

ಕೆಪಿಎಸ್​ಸಿಯಲ್ಲಿ ಸದಸ್ಯರ ಮೂಲಕ ತಮಗೆ ಬೇಕಾದವರಿಗೆ ಉದ್ಯೋಗ ಕೊಡಿಸಬಹುದು ಎಂದು ಬಿಜೆಪಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಆಯೋಗದ ಮೇಲೆ ಯಡಿಯೂರಪ್ಪನವರಿಗೆ ಬಹಳ ನಂಬಿಕೆ ಎಂದು ವ್ಯಂಗ್ಯವಾಡಿದರು. ಸರ್ಕಾರ ರಾಜಕೀಯ ದ್ವೇಷ ಮತ್ತು ಹಗೆತನದಿಂದ ಪರೀಕ್ಷಾ ಪ್ರಕ್ರಿಯೆಯನ್ನು ರದ್ದುಗೊಳಿಸಲು ಮುಂದಾಗಿದೆ ಎಂದು ಅವರು ಹೇಳಿದರು.

Intro:ಬೆಂಗಳೂರು : ಈ ಸರ್ಕಾರವನ್ನು ಹೇಗೆ ರಿಪೇರಿ ಮಾಡಬೇಕು ಎಂದು ನಮಗೆ ಗೊತ್ತಿದೆ ಮಾಡುತ್ತೇವೆ.
ನಮಗೂ ಕಾಲ ಬರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
Body:ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಹೇಗೆ ನಡೆದಿದೆ ಎಂಬುದು ಗೊತ್ತು. ಒಂದೊಂದು ಕ್ಷೇತ್ರದಲ್ಲಿ 50-60 ಕೋಟಿ ಖರ್ಚು ಮಾಡಿದ್ರಲ್ಲಾ ಎಲ್ಲಿಂದ ದುಡ್ಡು ಬಂತು. ಇವನ್ನೆಲ್ಲಾ ಪ್ರತ್ಯೇಕವಾಗಿ ಬಹಿರಂಗ ಪಡಿಸುತ್ತೇನೆ ಎಂದರು.
ಕುಮಾರಸ್ವಾಮಿ ಶಾಸಕಾಂಗ ನಾಯಕನ ಸ್ಥಾನ ಬಿಡುತ್ತಾರಾ ಎಂಬ ಪ್ರಶ್ನೆಗೆ ಈಗ ಉಪಚುನಾವಣೆ ಸೋಲಿನ ಕಾರಣಕ್ಕೆ ಕುಮಾರಸ್ವಾಮಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಬಿಡಬೇಕಿಲ್ಲ.
ಅಂತಹ ತಪ್ಪು ಅವರೇನು ಮಾಡಿಲ್ಲ ಎಂದು ಹೇಳಿದರು.
ಪಕ್ಷವನ್ನು ಹೇಗೆ ಉಳಿಸಬೇಕು ಎಂಬುದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಗೊತ್ತು. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.