ETV Bharat / state

ಶ್ರೀಲಂಕಾಗೆ ಹೋಗಿದ್ದು ನಿಜ: ಶಾಸಕ ಜಮೀರ್ ಹೇಳಿಕೆಗೆ ಹೆಚ್​ಡಿಕೆ ಸ್ಪಷ್ಟನೆ - ಶ್ರೀಲಂಕಾ ವಿವಾದ

ಶಾಸಕ ಜಮೀರ್ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಡ್ರಗ್ಸ್​ ಮಾಫಿಯಾ ಕೇಸ್ ತನಿಖೆಯ ಹಂತದಲ್ಲಿದೆ. ಈಗ ದಾರಿ ತಪ್ಪುವ ಪ್ರಯತ್ನ ಮಾಡಬಾರದು. ನಾನು ಶ್ರೀಲಂಕಾಗೆ ಹೋಗಿದ್ದು ನಿಜ. ನಮ್ಮ ಪಕ್ಷದ ಮುಖಂಡರ ಜತೆ ಹೋಗಿದ್ದೆ ಎಂದಿದ್ದಾರೆ.

ಜಮೀರ್ ಆರೋಪಕ್ಕೆ ಹೆಚ್​ಡಿಕೆ ಸ್ಪಷ್ಟನೆ
ಜಮೀರ್ ಆರೋಪಕ್ಕೆ ಹೆಚ್​ಡಿಕೆ ಸ್ಪಷ್ಟನೆ
author img

By

Published : Sep 13, 2020, 1:43 PM IST

ಬೆಂಗಳೂರು: 2014ರಲ್ಲಿ ನಮ್ಮ ಪಕ್ಷದ ಮುಖಂಡರ ಜತೆ ಕೊಲೊಂಬೋಗೆ ತೆರಳಿದ್ದು ನಿಜ. ಆದರೆ ಈಗ ಏಕೆ ಆ ವಿಷಯ ಪ್ರಸ್ತಾಪ ಮಾಡಿದ್ರು ಅನ್ನೋದು ಗೊತ್ತಿಲ್ಲವೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ಪದ್ಮನಾಭನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶಾಸಕ ಜಮೀರ್ ಆರೋಪ ಸಂಬಂಧ ಸ್ಪಷ್ಟನೆ ನೀಡುತ್ತಾ, ಡ್ರಗ್ಸ್​ ಮಾಫಿಯಾ ಕೇಸ್ ತನಿಖೆ ಹಂತದಲ್ಲಿದೆ. ಈಗ ದಾರಿ ತಪ್ಪುವ ಪ್ರಯತ್ನ ಮಾಡಬಾರದು. ನಮ್ಮ ಹಳೆಯ ಸ್ನೇಹಿತರು ಈಗ ಏಕೆ ಅದನ್ನು ಪ್ರಸ್ತಾಪ ಮಾಡಿದ್ರು ಗೊತ್ತಿಲ್ಲ. ನಾನು ಜಮೀರ್ ಆರೋಪಗಳಿಗೆ ಉತ್ತರ ಕೊಡೋಕೆ ಆಗೋದಿಲ್ಲ" ಎಂದರು.

ಜಮೀರ್ ಹೇಳಿಕೆಗೆ ಹೆಚ್​ಡಿಕೆ ಸ್ಪಷ್ಟನೆ

"ನಾನು ಶ್ರೀಲಂಕಾಗೆ ಹೋಗಿದ್ದು ನಿಜ. ನಮ್ಮ ಪಕ್ಷದ ಮುಖಂಡರ ಜತೆ ಹೋಗಿದ್ದೆ. ಗೋವಾ, ಇನ್ನಿತರ ಕಡೆ ಸಭೆ ನಡೆಸಿದರೆ ದುಬಾರಿಯಾಗುತ್ತದೆ ಅಂತ ಕೊಲೊಂಬೋ ಹೋಗಿದ್ದೆವು. ಪಕ್ಷದ ಎಲ್ಲಾ ಮುಖಂಡರು ಹೋಗಿ ಅಲ್ಲಿ ಚರ್ಚೆ ನಡೆಸಿದ್ದೇವೆ. ಅದಕ್ಕೂ ಈಗಿನ ಡ್ರಗ್ಸ್ ಪ್ರಕರಣಕ್ಕೂ ಸಂಬಂಧ ಏನು?. ನಮಗೆ ಶ್ರೀಲಂಕಾಗೆ ಹೋಗಲು ಬರುವುದಿಲ್ಲವೇ?" ಎಂದು ಪ್ರಶ್ನಿಸಿದರು.

"ನಾನು ಸಿಎಂ ಆಗಿದ್ದಾಗ ಬೆಂಗಳೂರಲ್ಲಿನ ಬಾರ್ ವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದೆ. ಮಲ್ಯ ರಸ್ತೆಯಲ್ಲಿ ಮಧ್ಯರಾತ್ರಿ 12ಕ್ಕೆ ಹೋದರೆ ನಾವು ಇಂಡಿಯಾದಲ್ಲಿ ಇದ್ದೇವಾ ಎಂಬ ಪ್ರಶ್ನೆ ಮೂಡುತ್ತದೆ. ಕ್ಯಾಸಿನೋ ಮಾದರಿ ನೈಟ್ ಪಾರ್ಟಿಗಳು ಬೆಂಗಳೂರಲ್ಲೇ ನಡೆಯುತ್ತವೆ. ಈ ಹಿಂದೆ ಇಂಥ ಪಾರ್ಟಿಗಳು ನಡೆಯುತ್ತಿದ್ದವು. ಇವಾಗ ಯಾವ ರೀತಿ ಅಂತಾ ಗೊತ್ತಿಲ್ಲ" ಎಂದು ವಿವರಿಸಿದರು.

ಸ್ಯಾಂಡಲ್​ವುಡ್​ಗೆ ಇದೆ ಎನ್ನಲಾದ ಡ್ರಗ್ಸ್​​ ಮಾಫಿಯಾ ನಂಟು ಆರೋಪ ಪ್ರಕರಣ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಪ್ರಕರಣದ ತನಿಖೆ ದಾರಿ ತಪ್ಪಬಾರದು. ಚಿತ್ರರಂಗದಲ್ಲಿ ಮಾತ್ರ ಡ್ರಗ್ಸ್​ ದಂಧೆ ಇಲ್ಲ. ನಾನು ಸಿನಿಮಾ ಕ್ಷೇತ್ರದಲ್ಲೇ ಇದ್ದವನು.‌ ನನ್ನ ಗಮನಕ್ಕೆ ಡ್ರಗ್ಸ್ ವಿಚಾರ ಬಂದಿಲ್ಲ ಎಂದು ಹೆಚ್​ಡಿಕೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.