ಬೆಂಗಳೂರು : ನಮ್ಮ ಕೆಲಸಗಳು ಮಾತನಾಡಬೇಕು,ಮಾತನಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಲುಸಂಕ ದಾಟುತ್ತಿದ್ದ ವೇಳೆ ಶಾಲಾ ಬಾಲಕಿಯೊಬ್ಬಳು ತೊರೆಗೆ ಬಿದ್ದು ಮೃತಪಟ್ಟ ಸುದ್ದಿ ಅಂದು ನನ್ನ ಮನ ಕಲಕಿತ್ತು. ಮಲೆನಾಡು, ಕರಾವಳಿಯಲ್ಲಿ ಈ ಸಮಸ್ಯೆ ನಿವಾರಿಸಲು ಅಂದು ಮನಸ್ಸು ಮಾಡಿ ಬಜೆಟ್ ನಲ್ಲಿ 'ಶಾಲಾ ಸಂಪರ್ಕ ಸೇತು' ಯೋಜನೆ ಘೋಷಿಸಿದೆ. ಅದು ಯಶಸ್ವಿಯಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.