ETV Bharat / state

ನಾಡಗೀತೆ, ಕುವೆಂಪು ಅವಮಾನಿಸಿದವರನ್ನು ಒದ್ದು ಒಳಕ್ಕೆ ಹಾಕಬೇಕು : ಚಕ್ರತೀರ್ಥ ವಿರುದ್ಧ ಹೆಚ್​ಡಿಕೆ ಕಿಡಿ - extbook refutation

ಯಾವುದೇ ಕವಿಗಳ ಬಗ್ಗೆ ಈ ರೀತಿ ಬರೆದಿದ್ದರೆ ಅದನ್ನು ವಾಪಸ್ ಪಡೆಯಬೇಕು. ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದರೂ ಸರಿಪಡಿಸಬೇಕು. ಇಲ್ಲದೇ ಇದ್ದರೇ ಕರ್ನಾಟಕದಲ್ಲಿ ಬಿಜೆಪಿ ನೆಲೆ ಕಳೆದುಕೊಳ್ಳಲಿದೆ. ದಕ್ಷಿಣದ ಹೆಬ್ಬಾಗಿಲು ಕರ್ನಾಟಕದ ಬಾಗಿಲು ಬಿಜೆಪಿಗೆ ಬಂದ್ ಆಗಲಿದೆ ಎಂದು ಎಚ್ಚರಿಕೆ ನೀಡಿದರು..

HD Kumaraswamy slams Rohith Chakrathirtha
ಮಾಜಿ ಸಿಎಂ ಕುಮಾರಸ್ವಾಮಿ
author img

By

Published : May 24, 2022, 2:33 PM IST

Updated : May 24, 2022, 2:43 PM IST

ಬೆಂಗಳೂರು : ನಾಡಗೀತೆಯನ್ನು ವಿರೂಪಗೊಳಿಸಿರುವುದನ್ನು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವವರನ್ನು ಮೊದಲು ಒದ್ದು ಒಳಕ್ಕೆ ಹಾಕಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾಡಗೀತೆಯನ್ನ ಅಪಮಾನಗೊಳಿಸಲಾಗಿದೆ. ಈ ರೀತಿ ಅವಮಾನ ಮಾಡಿರುವನನ್ನ ಒದ್ದು ಒಳಗೆ ಹಾಕಬೇಕಿತ್ತು. ಯಾವಾಗ ಪುಸ್ತಕ ಬಿಡುಗಡೆಯಾಗುತ್ತೋ ಅಂತಾ ಕಾಯುತ್ತಿದ್ದೇನೆ. ಪಠ್ಯದಲ್ಲಿ ಕುವೆಂಪು ಹಲವರ ಪ್ರೋತ್ಸಾಹದಿಂದ ಕವಿಗಳಾಗಿದ್ದಾರೆಂಬ ಅಂಶ ಜಾಲತಾಣಗಳಲ್ಲಿ ಓಡಾಡುತ್ತಿದೆ.

ಚಕ್ರತೀರ್ಥ ವಿರುದ್ಧ ಹೆಚ್​ಡಿಕೆ ಕಿಡಿ

ಯಾವನ್​​ ರೀ ಅವನು, ಆ ಕಮಿಟಿಯಲ್ಲಿ ಇರುವವನು?. ಅವನ ಹಿನ್ನೆಲೆ ಏನು? ಎಂದು ರೋಹಿತ್ ಚಕ್ರತೀರ್ಥ ವಿರುದ್ಧ ವಾಗ್ದಾಳಿ ನಡೆಸಿದರು. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಈ ಕುರಿತು ಎಚ್ಚರಿಕೆ ಕೊಡುತ್ತೇನೆ. ರಾಷ್ಟ್ರಕವಿ ಕುವೆಂಪು ಬಗ್ಗೆ ಅವಹೇಳನ ಮಾಡಲಾಗಿದೆ. ಕುವೆಂಪು ಇದ್ದಾಗ ಇವನು (ರೋಹಿತ್ ಚಕ್ರತೀರ್ಥ) ಹುಟ್ಟಿದ್ದನೋ ಇಲ್ಲವೋ? ಎಂದು ವಾಗ್ದಾಳಿ ನಡೆಸಿದರು.

ಕುವೆಂಪು ಬಗ್ಗೆ ಬರಗೂರು ರಾಮಚಂದ್ರಪ್ಪ ಸಮಿತಿ ಆ ಅಂಶವನ್ನು ಸೇರ್ಪಡೆಗೊಳಿಸಿತ್ತು ಎಂಬ ಪ್ರಶ್ನೆಗೆ ಯಾರೇ ಆಗಿರಲಿ. ತಪ್ಪು ಮಾಡಿದ್ರೆ ಅದನ್ನು ಸರಿಪಡಿಸಬೇಕು. ಯಾರೇ ತಪ್ಪು ಮಾಡಿದ್ದರೂ ಮೊದಲು ಅದನ್ನ ಸರಿಪಡಿಸಬೇಕು. ಯಾವುದೇ ಕವಿಗಳ ಬಗ್ಗೆ ಈ ರೀತಿ ಬರೆದಿದ್ದರೆ ಅದನ್ನು ವಾಪಸ್ ಪಡೆಯಬೇಕು.

ನಾರಾಯಣ ಗುರುಗಳಿಗೆ ಅಪಮಾನ ಮಾಡಿದ್ದರೂ ಸರಿಪಡಿಸಬೇಕು. ಇಲ್ಲದೇ ಇದ್ದರೇ ಕರ್ನಾಟಕದಲ್ಲಿ ಬಿಜೆಪಿ ನೆಲೆ ಕಳೆದುಕೊಳ್ಳಲಿದೆ. ದಕ್ಷಿಣದ ಹೆಬ್ಬಾಗಿಲು ಕರ್ನಾಟಕದ ಬಾಗಿಲು ಬಿಜೆಪಿಗೆ ಬಂದ್ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

Last Updated : May 24, 2022, 2:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.