ಬೆಂಗಳೂರು: ಡಿ.ಜೆ ಹಳ್ಳಿ ಗಲಭೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಮಾಜದ ಸ್ವಾಸ್ಥ್ಯ ಕದಡುವುದರಿಂದ ಯಾರಿಗೂ ಉಪಯೋಗವಿಲ್ಲ, ಎಲ್ಲರಿಗೂ ನಷ್ಟ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಚೋದನೆ ಮಾಡುವುದು ತಪ್ಪು, ಪ್ರಚೋದಿತರಾಗಿ ಸಾರ್ವಜನಿಕರು, ಪೊಲೀಸರು, ಪತ್ರಕರ್ತರು ಹೀಗೆ ಎಲ್ಲರ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡುವುದೂ ತಪ್ಪು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ದೇವೇಗೌಡರು ಮನವಿ ಮಾಡಿದ್ದಾರೆ.
![ಹೆಚ್.ಡಿ.ದೇವೇಗೌಡರ ಟ್ವೀಟ್](https://etvbharatimages.akamaized.net/etvbharat/prod-images/11:48:34:1597213114_kn-bng-04-hdd-tweet-script-7208083_12082020114433_1208f_1597212873_889.jpg)
ಸಿದ್ದರಾಮಯ್ಯನವರಿಗೆ ಶುಭ ಕೋರಿದ ಹೆಚ್ಡಿಡಿ:
ಮಾಜಿ ಮುಖ್ಯಮಂತ್ರಿಗಳು ಹಾಗೂ ನನ್ನ ಆತ್ಮೀಯರು ಆದ ಸಿದ್ದರಾಮಯ್ಯನವರಿಗೆ ಜನುಮದಿನದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ. ಸುಖ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಯಶಸ್ಸು ಸದಾ ನಿಮ್ಮೊಂದಿಗಿರಲಿ ಎಂದು ದೇವೇಗೌಡರು ಹಾರೈಸಿದ್ದಾರೆ.