ETV Bharat / state

ಮುನಿಸಿಕೊಂಡ ಪರಿಷತ್ ಸದಸ್ಯರ ಜೊತೆ ಚರ್ಚೆ: ಭಿನ್ನಮತ ಶಮನಕ್ಕೆ ದೇವೇಗೌಡರ ಯತ್ನ - ಹೆಚ್​.ಡಿ.ದೇವೇಗೌಡ

ಮೈತ್ರಿ ಸರ್ಕಾರದ ಅವಧಿಯಲ್ಲಿ ಬೇಸರಗೊಂಡಿದ್ದ ವಿಧಾನಪರಿಷತ್ ಸದಸ್ಯರನ್ನ ಭೇಟಿ ಮಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.

ಅಸಮಾಧಾನಿತ ಪರಿಷತ್ ಸದಸ್ಯರ ಜೊತೆ ಚರ್ಚೆ
author img

By

Published : Oct 31, 2019, 11:52 PM IST

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದ ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದ ಕೆಲ ಸದಸ್ಯರು ಗುರುವಾರ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

hd devegowda meets jds legislative council members
ದೇವೇಗೌಡರನ್ನ ಭೇಟಿ ಮಾಡಿದ ಅಸಮಾಧಾನಿತ ಪರಿಷತ್ ಸದಸ್ಯರು

ಅಸಮಾಧಾನಗೊಂಡ ಪರಿಷತ್ ಸದಸ್ಯರನ್ನು ಪದ್ಮನಾಭನಗರದಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡು ಗೌಡರು ಚರ್ಚಿಸಿದರು. ಈ ವೇಳೆ ನಮ್ಮಿಂದ ತಪ್ಪಾಗಿದೆ ಎಂದು ಪರಿಷತ್ ಸದಸ್ಯರ ಮುಂದೆ ಒಪ್ಪಿಕೊಂಡ ದೇವೇಗೌಡರು, ಸದಸ್ಯರ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ನಿಮಗೆ ಸಾಕಷ್ಟು ನೋವಾಗಿರುವುದು ನಿಜ. ಇದೆಲ್ಲಾ ನನ್ನ ಗಮನಕ್ಕೆ ಬಂದಿದೆ. ನಮ್ಮಿಂದಾಗಿರುವ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧರಾಗಿದ್ದೇವೆ. ನವೆಂಬರ್ 5 ಅಥವಾ 6 ರಂದು ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಇಬ್ಬರನ್ನೂ ನಿಮ್ಮ ಮುಂದೆ ಕರೆಸುತ್ತೇನೆ. ನನ್ನ ಉಸ್ತುವಾರಿಯಲ್ಲೇ ಸಭೆ ನಡೆಸಿ ಭಿನ್ನಮತ ಶಮನ ಮಾಡುತ್ತೇನೆ. ಈ ಸಂದರ್ಭದಲ್ಲಿ ಯಾರೂ ದುಡುಕಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.

ಪರಿಷತ್ ಸದಸ್ಯರಾದ ಟಿ.ಎ. ಶರವಣ, ಅಪ್ಪಾಜಿಗೌಡ, ಮರಿತಿಬ್ಬೇಗೌಡ, ಚೌಡರೆಡ್ಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Intro:ಬೆಂಗಳೂರು : ಮೈತ್ರಿ ಸರ್ಕಾರದ ಅವಧಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲವೆಂದು ಅಸಮಾಧಾನ ಗೊಂಡಿರುವ ವಿಧಾನಪರಿಷತ್ ನ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ನೇತೃತ್ವದ ಕೆಲ ಸದಸ್ಯರು ಇಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.Body:ಅಸಮಾಧಾನಗೊಂಡ ಪರಿಷತ್ ಸದಸ್ಯರನ್ನು ಇಂದು ಸಂಜೆ ಪದ್ಮನಾಭನಗರದಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡು ಗೌಡರು ಚರ್ಚಿಸಿದರು.
ಈ ವೇಳೆ ನಮ್ಮಿಂದ ತಪ್ಪಾಗಿದೆ ಎಂದು ಪರಿಷತ್ ಸದಸ್ಯರ ಮುಂದೆ ಒಪ್ಪಿಕೊಂಡ ದೇವೇಗೌಡರು, ಸದಸ್ಯರ ಭಿನ್ನಮತ ಶಮನಕ್ಕೆ ಮುಂದಾದರು.
ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ನಿಮಗೆ ಸಾಕಷ್ಟು ನೋವಾಗಿರುವುದು ನಿಜ. ಇದೆಲ್ಲಾ ನನ್ನ ಗಮನಕ್ಕೆ ಬಂದಿದೆ.
ನಮ್ಮಿಂದಾಗಿರುವ ತಪ್ಪನ್ನು ತಿದ್ದಿಕೊಳ್ಳಲು ಸಿದ್ದರಾಗಿದ್ದೇವೆ.
ನವೆಂಬರ್ 5 ಅಥವಾ 6 ರಂದು ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಇಬ್ಬರನ್ನೂ ನಿಮ್ಮ ಮುಂದೆ ಕರೆಸುತ್ತೇನೆ. ನನ್ನ ಉಸ್ತುವಾರಿಯಲ್ಲೇ ಸಭೆ ನಡೆಸಿ ಭಿನ್ನಮತ ಶಮನ ಮಾಡುತ್ತೇನೆ. ಈ ಸಂಧರ್ಭದಲ್ಲಿ ಯಾರೂ ದುಡುಕಬೇಡಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪರಿಷತ್ ಸದಸ್ಯರಾದ ಟಿ.ಎ.ಶರವಣ, ಅಪ್ಪಾಜಿಗೌಡ, ಮರಿತಿಬ್ಬೇಗೌಡ, ಚೌಡರೆಡ್ಡಿ ತೂಪಲ್ಲಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿನ್ನೆಯಷ್ಟೇ ವಿಧಾನಸೌಧದಲ್ಲಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಪರಿಷತ್ ಸದಸ್ಯರು ಸಭೆ ನಡೆಸಿದ್ದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.