ETV Bharat / state

ಮೇಲ್ಮನೆ ಪ್ರವೇಶ ಮೂಲಕ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮಾಜಿ ಪ್ರಧಾನಿ ಹೆಚ್​ಡಿಡಿ..

ಬಹುತೇಕ ರಾಜಕೀಯ ಬದುಕು ಮುಗಿಯಿತು ಎಂದು ಭಾವಿಸಿದ್ದ ದೇವೇಗೌಡರಿಗೆ ಇದು ಬಯಸದೇ ಬಂದ ಭಾಗ್ಯ. ಯಾವುದೇ ಸ್ಪರ್ಧೆ, ಆತಂಕ, ಸೋಲಿನ ಭೀತಿ ಇಲ್ಲದೇ ಸುಗಮವಾಗಿ ಈ ಇಳಿ ವಯಸ್ಸಲ್ಲಿ ರಾಜ್ಯಸಭೆಯಂತಹ ಗೌರವಯುತ ಮನೆ ಪ್ರವೇಶಿಸುತ್ತಿದ್ದಾರೆ. ಸರ್ಕಾರದ ತಪ್ಪು ನಡೆಗಳನ್ನು ಖಂಡಿಸುವ ಹಾಗೂ ಉತ್ತಮ ನಡೆ ಪ್ರಶಂಸಿಸುವ ಹಿರಿಯ ನಾಯಕರೊಬ್ಬರು ಮೇಲ್ಮನೆ ಪ್ರವೇಶಿಸುತ್ತಿರುವುದು ಹೆಮ್ಮೆಯ..

HD Deve Gowda
ಮೇಲ್ಮನೆ ಪ್ರವೇಶ ಮೂಲಕ ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಮುಂದಡಿಯಿಡುತ್ತಿರುವ ಹೆಚ್​ಡಿಡಿ
author img

By

Published : Jun 8, 2020, 8:15 PM IST

ಬೆಂಗಳೂರು : ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವ ಮತ್ತೊಂದು ದೊಡ್ಡ ಅವಕಾಶ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ಪಾಲಿಗೆ ಒದಗಿ ಬಂದಿದೆ. ವಿಶೇಷ ಅಂದರೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ನಾಯಕರು ಪಕ್ಷಬೇಧ ಮರೆತು ಇವರ ಗೆಲುವಿಗೆ ಸಹಕರಿಸುತ್ತಿದ್ದಾರೆ. ಒಂದೆಡೆ ಕಾಂಗ್ರೆಸ್ ಪಕ್ಷ ನೇರವಾಗಿ ಇವರ ಗೆಲುವಿಗೆ ಶಾಸಕರ ಬೆಂಬಲ ನೀಡುವುದಾಗಿ ಘೋಷಿಸಿದ್ರೆ, ಬಿಜೆಪಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಗೌಡರ ಗೆಲುವಿನ ಹಾದಿ ಸುಗಮವಾಗಿಸಿದೆ.

ರಾಜ್ಯಸಭೆಗೆ ತೆರವಾಗಿದ್ದ ನಾಲ್ಕು ಸ್ಥಾನಗಳಲ್ಲಿ ಜೆಡಿಎಸ್​ನ ಕುಪೇಂದ್ರ ರೆಡ್ಡಿ ಕೂಡ ಒಬ್ಬರಾಗಿದ್ದರು. ಇವರ ಬದಲು ಈಗ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರೇ ಕಣಕ್ಕಿಳಿಯುತ್ತಿದ್ದಾರೆ. 34 ಸದಸ್ಯರ ಬಲ ಹೊಂದಿರುವ ಜೆಡಿಎಸ್​ಗೆ 11 ಮತಗಳ ಕೊರತೆ ಎದುರಾಗಿದೆ. 22 ಸದಸ್ಯರನ್ನು ಹೆಚ್ಚುವರಿ ಹೊಂದಿರುವ ಕಾಂಗ್ರೆಸ್ ತಮ್ಮ ಶಾಸಕರ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಅತ್ತ ಬಿಜೆಪಿ ಕೂಡ ಮಾಜಿ ಪ್ರಧಾನಿಯೇ ಕಣಕ್ಕಿಳಿದರೆ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿತ್ತು. ಅದೇ ರೀತಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಇಂದು ಟ್ವೀಟ್ ಮಾಡಿ ದೇವೇಗೌಡರ ಸ್ಪರ್ಧೆಯನ್ನು ಖಚಿತಪಡಿಸುತ್ತಿದ್ದಂತೆ, ಇಬ್ಬರು ಅಭ್ಯರ್ಥಿಗಳನ್ನು ಮಾತ್ರ ಅಂತಿಮಗೊಳಿಸಿ ಪ್ರಕಟಣೆ ಹೊರಡಿಸಿದೆ.

ಈ ಮೂಲಕ ಚುನಾವಣೆ ನಡೆಯುವ ಸಾಧ್ಯತೆ ಇಲ್ಲವಾಗಿದ್ದು, ದೇವೇಗೌಡರು ರಾಷ್ಟ್ರ ರಾಜಕಾರಣದ ಮೇಲ್ಮನೆ ಪ್ರವೇಶ ಖಚಿತಪಡಿಸಿಕೊಂಡು, 2ನೇ ಇನಿಂಗ್ಸ್​ಗೆ ಸಜ್ಜಾಗಿದ್ದಾರೆ. ರಾಷ್ಟ್ರದ ಪ್ರಗತಿಯಾಗಬೇಕಾದ್ರೆ ಸರ್ಕಾರವನ್ನು ಎಚ್ಚರಿಸುವ ಪ್ರಬಲ ಪ್ರತಿಪಕ್ಷ ನಾಯಕರು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಇರಬೇಕೆಂಬ ಮಾತಿದೆ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೆಚ್​ಡಿ ದೇವೇಗೌಡರಂತಹ ನಾಯಕರು ಮೇಲ್ಮನೆ ಪ್ರವೇಶಿಸುತ್ತಿರುವುದು ಉತ್ತಮ. ಸಂಸದೀಯ ನಾಯಕರನ್ನು ಕಳುಹಿಸಿಕೊಟ್ಟ ಹೆಗ್ಗಳಿಕೆಯೂ ರಾಷ್ಟ್ರೀಯ ಪಕ್ಷಗಳದಾಗಲಿದೆ.

ಬಹುತೇಕ ರಾಜಕೀಯ ಬದುಕು ಮುಗಿಯಿತು ಎಂದು ಭಾವಿಸಿದ್ದ ದೇವೇಗೌಡರಿಗೆ ಇದು ಬಯಸದೇ ಬಂದ ಭಾಗ್ಯ. ಯಾವುದೇ ಸ್ಪರ್ಧೆ, ಆತಂಕ, ಸೋಲಿನ ಭೀತಿ ಇಲ್ಲದೇ ಸುಗಮವಾಗಿ ಈ ಇಳಿ ವಯಸ್ಸಲ್ಲಿ ರಾಜ್ಯಸಭೆಯಂತಹ ಗೌರವಯುತ ಮನೆ ಪ್ರವೇಶಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಸರ್ಕಾರದ ತಪ್ಪು ನಡೆಗಳನ್ನು ಖಂಡಿಸುವ ಹಾಗೂ ಉತ್ತಮ ನಡೆಯನ್ನು ಪ್ರಶಂಸಿಸುವ ಹಿರಿಯ ನಾಯಕರೊಬ್ಬರು ಮೇಲ್ಮನೆ ಪ್ರವೇಶಿಸುತ್ತಿರುವುದು ಹೆಮ್ಮೆಯ ಸಂಗತಿ.

ಸೋಲಿನ ಕಹಿ: ಲೋಕಸಭೆಗೆ ಕನಕಪುರದಿಂದ ಹಾಗೂ ಹಾಸನದಿಂದ ಒಟ್ಟು 6 ಭಾರಿ ಪ್ರವೇಶಿಸಿದ್ದ ಹೆಚ್ ಡಿ ದೇವೇಗೌಡರು ದೇಶದ 14ನೇ ಪ್ರಧಾನಮಂತ್ರಿಯಾಗಿ 11 ತಿಂಗಳು ಅಧಿಕಾರ ನಡೆಸಿದ್ದರು. ರಾಷ್ಟ್ರವನ್ನು ಪ್ರತಿನಿಧಿಸಿದ ರಾಜ್ಯದ ಏಕೈಕ ನಾಯಕ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ. 1991ರಲ್ಲಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದ ದೇವೇಗೌಡರಿಗೆ ರಾಜ್ಯಸಭೆ ಪ್ರವೇಶ ಇದೇ ಮೊದಲಲ್ಲ. 1996-98ರ ಅವಧಿಯಲ್ಲಿ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ವಿಶೇಷ ಅಂದರೆ ಇವರು ಪ್ರಧಾನಿಯಾಗಿದ್ದು, ರಾಜ್ಯಸಭೆ ಸದಸ್ಯರಾಗಿ ಎನ್ನುವುದು ವಿಶೇಷ.

ಅಲ್ಲದೇ 1996 ಏಪ್ರಿಲ್​ನಿಂದ 1997ರ ಅವಧಿಯಲ್ಲಿ ರಾಜ್ಯಸಭೆ ಸಭಾ ನಾಯಕರಾಗಿದ್ದರು. 1998ರಲ್ಲಿ ನಡೆದ ಲೋಕಸಭೆ ಮರು ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, 1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಪುಟ್ಟಸ್ವಾಮಿಗೌಡ ವಿರುದ್ಧ ಸೋತರು. 2002ರಲ್ಲಿ ನಡೆದ ಮರು ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಹಾಸನ, ಕನಕಪುರ ಎರಡು ಕಡೆಯಿಂದ ಸ್ಪರ್ಧಿಸಿ ಹಾಸನದಿಂದ ಗೆದ್ದರು. 2009 ಮತ್ತು 2014ರಲ್ಲಿ ಹಾಸನದಿಂದ ಗೆದ್ದು ಒಟ್ಟು 6 ಬಾರಿ ಲೋಕಸಭೆ ಪ್ರವೇಶಿಸಿದ ಹೆಗ್ಗಳಿಕೆ ಸಾಧಿಸಿದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತಾವು ತುಮಕೂರಿನಿಂದ ಸ್ಪರ್ಧಿಸಿ ಸೋತಿದ್ದರು. ಕಳೆದ 1 ವರ್ಷದಿಂದ ವನವಾಸ ಅನುಭವಿಸಿದ್ದ ಗೌಡರು ಮತ್ತೆ ಹೊಸ ಉತ್ಸಾಹದೊಂದಿಗೆ ಸಂಸತ್‌ನ ಮೇಲ್ಮನೆ ಪ್ರವೇಶಿಸುತ್ತಿದ್ದಾರೆ.

ರಾಜಕೀಯದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡ ಹೆಚ್ ಡಿ ದೇವೇಗೌಡರಿಗೆ ಎರಡು ರಾಷ್ಟ್ರೀಯ ಪಕ್ಷಗಳು ಸಹಕರಿಸುತ್ತಿರುವುದು ವಿಶೇಷ. ಇಡೀ ರಾಷ್ಟ್ರವೇ ಇಂತ ಒಬ್ಬ ಸಂಸದೀಯ ಪಟು ರಾಷ್ಟ್ರ ರಾಜ್ಯಕಾರಣಕ್ಕೆ ಮರಳುತ್ತಿರುವುದನ್ನ ಕುತೂಹಲದಿಂದಲೇ ನೋಡ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.