ETV Bharat / state

ಕಲಬುರಗಿ ವಕೀಲನ ಕೊಲೆ ಪ್ರಕರಣ ಇಡೀ ನ್ಯಾಯಾಂಗ ವ್ಯವಸ್ಥೆಗೆ ಬೆದರಿಕೆ; ಹೈಕೋರ್ಟ್ ಕಳವಳ

author img

By ETV Bharat Karnataka Team

Published : Dec 12, 2023, 10:04 AM IST

Lawyer murder case: ಜಮೀನಿಗಾಗಿ ವಕೀಲ ಈರಣ್ಣಗೌಡರ ಹತ್ಯೆ ನಡೆದಿರುವುದಕ್ಕೆ ಹೈಕೋರ್ಟ್​ ತೀವ್ರ ಬೇಸರ ವ್ಯಕ್ತಪಡಿಸಿದೆ.

ವಕೀಲನ ಹತ್ಯೆಗೆ ಹೈಕೋರ್ಟ ತೀವ್ರ ಬೇಸರ
ವಕೀಲನ ಹತ್ಯೆಗೆ ಹೈಕೋರ್ಟ ತೀವ್ರ ಬೇಸರ

ಬೆಂಗಳೂರು: ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ವಕೀಲ ಈರಣ್ಣಗೌಡ ಪೊಲೀಸ್‌ ಪಾಟೀಲ್​ ಅವರ ಹತ್ಯೆಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಈ ಘಟನೆ ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯೊಡ್ಡುವ ತಂತ್ರವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಸಿವಿಲ್‌ ವ್ಯಾಜ್ಯವೊಂದರ ಸಂಬಂಧ ವಿಚಾರಣೆ ವೇಳೆ ಈರಣ್ಣ ಗೌಡರ ಹತ್ಯೆ ಘಟನೆಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರು, 20 ಎಕರೆ ಜಾಗದ ಮೇಲಿನ ಹಕ್ಕಿನ ವಿಚಾರ ಸಂಬಂಧ ಈ ಕೊಲೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಇಂತಹ ಘಟನೆಗಳನ್ನು ಮಟ್ಟ ಹಾಕದೆ ಹೋದರೆ ಮುಂದಿನ 20 ವರ್ಷಗಳಲ್ಲಿ ನಂತರ ಸಿವಿಲ್ ವ್ಯಾಜ್ಯಗಳು ಕೋರ್ಟ್‌ಗೆ ದಾಖಲಾಗುವುದು ಅನುಮಾನ, ಕೊಲೆಗಡುಕರು ಮುಂದೊಂದು ದಿನ ಶ್ರೀಸಾಮಾನ್ಯರನ್ನು ಬೆದರಿಸಿ ಸಿವಿಲ್‌ ವ್ಯಾಜ್ಯಗಳನ್ನು ತಾವೇ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಈ ಹೇಯ ಕೃತ್ಯಗಳು ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ನ್ಯಾಯಮೂರ್ತಿಗಳ ಮೌಖಿಕವಾಗಿ ನುಡಿದರು.

ಪ್ರತ್ಯೇಕ ಪ್ರಕರಣ - ಹೆಗಡೆ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೋರಿದ್ದ ಅರ್ಜಿ ವಜಾ

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಕೊಂಕಣ್ ರೈಲ್ವೇ ವಲಯ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಶಶಿಧರ ನಾರಾಯಣ ಹೆಗಡೆ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ರೈಲ್ವೇ ಮೇಲ್ಸೇತುವೆ ನಿರ್ಮಾಣ ಅಗತ್ಯತೆ ಬಗ್ಗೆ ನಿರ್ಧರಿಸಲು ಅರ್ಜಿದಾರರು ತಜ್ಞರಾಗಿಲ್ಲ. ಯಾವುದೇ ತಜ್ಞರ ಅಭಿಪ್ರಾಯವನ್ನು ನ್ಯಾಯಾಲಯದ ಮುಂದಿಟ್ಟಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ 1993ರಂದು ರೈಲ್ವೇ ಸೇವೆ ಪ್ರಾರಂಭವಾಯಿತು. ಆರಂಭದ ದಿನಗಳಲ್ಲಿ ಬೆರಳೆಣಿಕೆಯಷ್ಟು ರೈಲುಗಳು ಮಾತ್ರ ಈ ಮಾರ್ಗವಾಗಿ ಸಂಚರಿಸುತ್ತಿದ್ದವು. ಆದರೆ ಕಳೆದ ಕೆಲವು ವರ್ಷಗಳಿಂದ 25ಕ್ಕೂ ಹೆಚ್ಚು ರೈಲುಗಳು ಸಂಚಾರಿಸುತ್ತಿವೆ. ಸುಮಾರು 4-5 ಹಳ್ಳಿಯ ಜನರು ರೈಲ್ವೇ ಗೇಟುಗಳನ್ನು ದಾಟಿ ಸಾಗಬೇಕಾಗಿದೆ.

ಪ್ರತಿ ದಿನ 25ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಬಸ್ ಈ ಮಾರ್ಗವಾಗಿ ಸಂಚರಿಸುತ್ತಿವೆ. ಆದರೆ ಒಮ್ಮೆ ರೈಲ್ವೇ ಕ್ರಾಸ್ ಗೇಟ್ ಮುಚ್ಚಿದರೆ 20 ರಿಂದ 25 ನಿಮಿಷ ಕಾಯಬೇಕು. ಇದರಿಂದ ಶಾಲಾ-ಕಾಲೇಜು ಮಕ್ಕಳು, ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ, ರೈಲ್ವೇ ಮೇಲ್ಸೇತುವೆ ನಿರ್ಮಾಣ ಮಾಡುವುದರಿಂದಾಗಿ ಈ ಸಮಸ್ಯೆ ತಪ್ಪಿಸಬಹುದು. ಅಲ್ಲದೆ, ರೈಲು ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ಕೋರಿದರು.

ಇದನ್ನೂ ಓದಿ: ರಾಜ್ಯದ ಶಾಲೆಗಳಲ್ಲಿ ಮೂಲಸೌಕರ್ಯ ಸರಿಪಡಿಸದ ಕುರಿತು ಹೈಕೋರ್ಟ್ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.