ETV Bharat / state

ಹೈಟೆಕ್‌ ಸಿಟಿಯಲ್ಲಿ ಲಾಕ್‌ಡೌನ್‌ನಲ್ಲೇ ಹೆಚ್ಚಾಗಿ ಬಾಲ ಬಿಚ್ಕಿದ ಸೈಬರ್‌ ಕ್ರಿಮಿನಲ್ಸ್‌..

ಲಾಕ್​ಡೌನ್​​ ಸಡಿಲಿಕೆ ನಂತರ ನಗರದಲ್ಲಿ ಬಹಳಷ್ಟು ಮಂದಿ ಕೆಲಸ ಇಲ್ಲದ ಕಾರಣ, ಈ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಸಾಧ್ಯತೆ ಇದೆ ಅಂತಾ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.

ಸೈಬರ್ ಕ್ರೈಂ
ಸೈಬರ್ ಕ್ರೈಂ
author img

By

Published : Jun 17, 2020, 5:36 PM IST

Updated : Jun 17, 2020, 5:48 PM IST

ಬೆಂಗಳೂರು : ಲಾಕ್​ಡೌನ್‌ ಸಡಿಲಿಕೆ ನಂತರ ಸಿಲಿಕಾನ್‌ ಸಿಟಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಪೂರ್ಣ ಮಾಹಿತಿ ಈಟಿವಿ ಭಾರತ್​ಗೆ ಲಭ್ಯವಾಗಿದೆ. ಒಂದೇ ತಿಂಗಳಲ್ಲಿ 3 ಸಾವಿರ ಅಪರಾಧ ಪ್ರಕರಣ ನಗರದಲ್ಲಿ ದಾಖಲಾಗಿವೆ. ಪೊಲೀಸರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಸೈಬರ್ ಅಪರಾಧ ಪ್ರಕರಣ ಸಂಖ್ಯೆಯೇ ಹೆಚ್ಚಿದೆ. ಲಾಕ್​ಡೌನ್ ಇದ್ದ ಏಪ್ರಿಲ್​ನಲ್ಲಿ ಹಾಗೂ ಕೊಂಚ ಸಡಿಲಿಕೆಯಾದ ಮೇನಲ್ಲಿ ದಾಖಲಾಗಿರುವ ಪ್ರಕರಣಗಳನ್ನ ನೋಡುವುದಾದ್ರೆ..

ಪ್ರಕರಣಗಳು ಏಪ್ರಿಲ್ ಮೇ
ಕೊಲೆ 6 28
ದರೋಡೆ 6 25
ಚೀಟಿಂಗ್ ಕೇಸ್ 15 69
ರ‍್ಯಾಷ್ ಡ್ರೈವಿಂಗ್ 57 179
ಹಲ್ಲೆ ಕೇಸ್ 55 270
ವಾಹನ ಕಳ್ಳತನ 70 232
ಕಿಡ್ನ್ಯಾಪ್​ 2 31
ಸೈಬರ್ ಕ್ರೈಂ 400 855

ಈವರೆಗೆ 56 ಮನೆಗಳ್ಳತನವೂ ಸೇರಿ ಇನ್ನಿತರೆ ಕೇಸ್​ಗಳನ್ನು ಒಟ್ಟಾಗಿಸಿದ್ರೆ 2 ಸಾವಿರದ 580 ಪ್ರಕರಣ ದಾಖಲಾಗಿವೆ. ಸದ್ಯ ನಗರ ಅಷ್ಟೇ ಅಲ್ಲ, ರಾಜ್ಯದಲ್ಲೂ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರೋದು ದುರದೃಷ್ಟಕರ.‌ ಲಾಕ್​ಡೌನ್​​ ಸಡಿಲಿಕೆ ನಂತರ ನಗರದಲ್ಲಿ ಬಹಳಷ್ಟು ಮಂದಿ ಕೆಲಸ ಇಲ್ಲದ ಕಾರಣ, ಈ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಸಾಧ್ಯತೆ ಇದೆ ಅಂತಾ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.

Last Updated : Jun 17, 2020, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.