ETV Bharat / state

ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್​ ಸದಸ್ಯರ ಮಧ್ಯೆ ಕಿತ್ತಾಟ - Council chairperson prathap chadra shetty

ಸದನದಲ್ಲಿ ಭಾರಿ ಗಲಾಟೆ
ಸದನದಲ್ಲಿ ಭಾರಿ ಗಲಾಟೆ
author img

By

Published : Dec 15, 2020, 11:28 AM IST

Updated : Dec 15, 2020, 2:59 PM IST

11:25 December 15

ವಿಧಾನ ಪರಿಷತ್ ಕಲಾಪದಲ್ಲಿಂದು ಹೈಡ್ರಾಮಾ ನಡೆಯಿತು. ಉಪಸಭಾಪತಿ ಧರ್ಮೇಗೌಡರನ್ನು ಪೀಠದಿಂದ ಕೆಳಗಿಳಿಸಿ ಕಾಂಗ್ರೆಸ್​ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.

ಸದನದಲ್ಲಿ ಭಾರಿ ಗಲಾಟೆ

ಬೆಂಗಳೂರು: ಬೆಲ್ ನಿಲ್ಲುವ ಮೊದಲೇ ಸಭಾಪತಿ ಪೀಠದಲ್ಲಿ ಆಸೀನರಾದ ಉಪಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದ ಕೆಳೆಗೆಳೆದು ಸದನದಿಂದ ಹೊರಹಾಕಿದ ಘಟನೆ ವಿಧಾನ ಪರಿಷತ್​ನಲ್ಲಿ ನಡೆದಿದೆ. ಚಿಂತಕರ ಚಾವಡಿಯಾಗಿದ್ದ ಮೇಲ್ಮನೆಯಲ್ಲಿ ಮೊದಲ ಬಾರಿ ಸಭಾಪತಿ ಪೀಠದ ಮೇಲೆ ಏರಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 

ವಿಧಾನ ಪರಿಷತ್ ಕಲಾಪ ಆರಂಭಕ್ಕಾಗಿ ಬೆಲ್ ಶುರುವಾಗಿ ನಿಲ್ಲುವ ಮೊದಲೇ ಜೆಡಿಎಸ್​ನ ಧರ್ಮೇಗೌಡರನ್ನು ಬಿಜೆಪಿ ಸದಸ್ಯರು ಸಭಾಪತಿ ಪೀಠದಲ್ಲಿ ಕೂರಿಸಿದರು. ಪರಿಷತ್ ನಿಯಮದ ಪ್ರಕಾರ ಬೆಲ್ ನಿಂತ ನಂತರ ಮಾರ್ಷಲ್ ಬಂದು ಸಭಾಪತಿಗಳ ಆಗಮನದ ಸೂಚನೆ ನೀಡಲಾಗುತ್ತದೆ. ನಂತರ ಸಭಾಪತಿಗಳನ್ನು ಎದ್ದುನಿಂತು ಎಲ್ಲರೂ ಸ್ವಾಗತಿಸುತ್ತಾರೆ. ಆದರೆ ಇಂದು ಬೆಲ್ ನಿಲ್ಲುವ ಮೊದಲೇ, ಮಾರ್ಷಲ್ ಸೂಚನೆ ನೀಡುವ ಮುನ್ನವೇ ಧರ್ಮೇಗೌಡರನ್ನು ಕೂರಿಸಿ ಕಲಾಪ ಆರಂಭಕ್ಕೆ ಯತ್ನಿಸಲಾಯಿತು. 

ಬಿಜೆಪಿ ಸದಸ್ಯರ ಪ್ರಯತ್ನಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಪ್ರತಿಪಕ್ಷ ಮುಖ್ಯ ಸಚೇತಕ ನಾರಾಯಣಸ್ವಾಮಿ, ಹರಿಪ್ರಸಾದ್ ನೇತೃತ್ವದಲ್ಲಿ ಸಭಾಪತಿ ಪೀಠದ ಮೇಲೆ ಹತ್ತಿ ಪ್ರತಿಭಟನೆ ನಡೆಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಪೀಠದಿಂದ ಹೊರಬರುವಂತೆ ಧರ್ಮೇಗೌಡರನ್ನು ಆಗ್ರಹಿಸಿದರು. ಆದರೆ ಪೀಠದಿಂದ ಹೊರಬಾರದ ಉಪಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್​ನ ನಾರಾಯಣಸ್ವಾಮಿ ತಂಡ ಕೆಳಗೆಳೆದು, ಸದನದಿಂದ ಹೊರಗಡೆ ಹೊತ್ತೊಯ್ದಿತು. ಆ ವೇಳೆ ಉಪಸಭಾಪತಿಗಳ ರಕ್ಷಣೆಗೆ ಧಾವಿಸಿದ ಬಿಜೆಪಿಯ ಆಯನೂರು ಮುಂಜುನಾಥ್, ಜೆಡಿಎಸ್​ನ ಬಸವರಾಜ ಹೊರಟ್ಟಿ ನೇತೃತ್ವದ ಸದಸ್ಯರು ಉಪಸಭಾಪತಿಗಳನ್ನು ರಕ್ಷಣೆ ಮಾಡಿದರು. 

ಇದನ್ನು ಓದಿ: ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ.. ನಿನ್ನೆ 22 ಸಾವಿರ ಕೇಸ್​ಗಳು ಪತ್ತೆ

ಈ ವೇಳೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸದನದ ಒಳಗೆ ಬಾರದಂತೆ ಬಾಗಿಲು ಮುಚ್ಚಿ ಬಾಗಲ ಬಳಿಯೇ ಕಾದು ಕುಳಿತ ಬಿಜೆಪಿ ಸದಸ್ಯರ ವರ್ತನೆಗೆ ಕಿಡಿಕಾರಿದ ಕಾಂಗ್ರೆಸ್​ನ ನಜೀರ್ ಅಹಮದ್ ಬಾಗಿಲಿಗೆ ಗುದ್ದಿ ಆಕ್ರೋಶ ಹೊರಹಾಕಿದರು. ಈ ವೇಳೆ ದೊಡ್ಡ ಮಟ್ಟದ ಗದ್ದಲ ಸದನದಲ್ಲಿ ಸೃಷ್ಟಿಯಾಯಿತು. ಸಭಾಪತಿ ಪ್ರವೇಶಕ್ಕೆ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಸದನದ ಒಳಗೆ ಬರಲು ಸಭಾಪತಿಗಳಿಗೆ ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಯಿತು. 

ಸಭಾಪತಿ ಪೀಠದ ಮುಂದೆ ಗದ್ದಲ ಮುಂದುವರೆಸಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂದೆ ಹಾಕಲಾಗಿದ್ದ ಗಾಜಿನ ಫಲಕ ಕಿತ್ತಾಕಿ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಕಲಾಪದ ಕಾರ್ಯಕಲಾಪ ಪಟ್ಟಿ ಹರಿದು ಹಾಕಿದ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿ ಧಿಕ್ಕಾರ ಕೂಗಿದರು. 

ಉಪಸಭಾಪತಿ ಧರ್ಮೇಗೌಡರನ್ನು ಕೆಳಗೆಳೆದಿದ್ದ ಕಾಂಗ್ರೆಸ್ ಸದಸ್ಯರು, ಬಳಿಕ ಕಾಂಗ್ರೆಸ್ ಸದಸ್ಯ ಚಂದ್ರಶೇಖರ್ ಪಾಟೀಲ್​ರನ್ನು ಸಭಾಪತಿ ಪೀಠದಲ್ಲಿ ಕೂರಿಸಿದರು. ಪೀಠದ ಮುಂದೆ ಜಮಾವಣೆಗೊಂಡು ಕಲಾಪ ಆರಂಭಕ್ಕೆ ಮನವಿ ಮಾಡಿದರು. ಅಷ್ಟರಲ್ಲಿ ಮಾರ್ಷಲ್​ಗಳು ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು ಸದನಕ್ಕೆ ಕರೆ ತಂದರು. ಸಭಾಪತಿಗಳ ಪ್ರವೇಶ ಖಂಡಿಸಿ ಬಿಜೆಪಿ ಸದಸ್ಯರು‌ ಧಿಕ್ಕಾರ ಕೂಗಿದರು. ಸದನದಲ್ಲಿ ಗದ್ದಲ ಸೃಷ್ಟಿಯಾಗಿದ್ದರಿಂದ ಸಭಾಪತಿ ಪ್ರತಾಪ್​ ಚಂದ್ರ ಶೆಟ್ಟಿ ಸದನವನ್ನು ಅನಿರ್ದಿಷ್ಟಾವಧಿಗೆ.  

ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದರೂ ಸದನದಲ್ಲಿ ಗದ್ದಲ ಮುಂದುವರೆಯಿತು. ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿ ಪೀಠದ ಮುಂದೆ ಗದ್ದಲ ಕಂಡುಬಂತು.‌ ಸದನದ ಹೊರಗೂ ಗದ್ದಲ ನಡೆಯಿತು.

Last Updated : Dec 15, 2020, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.