ಬೆಂಗಳೂರು: ನಗರದ ಕುರುಬರ ಸಂಘದಿಂದ ಸುದ್ದಿಗೋಷ್ಟಿ ನಡೆಸಲಾಗಿದ್ದು,ಈ ವೇಳೆ ರಾಯಚೂರಿನ ತಿಂಥಣಿ ಬ್ರಿಜ್ನಲ್ಲಿ ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ-2021 ನಡೆಸುವುದರ ಬಗ್ಗೆ ಮಾಹಿತಿ ನೀಡಲಾಯಿತು.
ಕನಕ ಗುರು ಪೀಠದ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಉತ್ಸವ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮಾಜಿ ಸಚಿವ ಹೆಚ್ಎಂ ರೇವಣ್ಣ, ಕುರುಬ ಸಮುದಾಯವನ್ನು ಸಾಮಾಜಿಕವಾಗಿ ಮುಂದೆ ತರಲು ಪ್ರತಿವರ್ಷ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗ್ತಿದೆ. ಈ ವರ್ಷ ಈ ಕಾರ್ಯಕ್ರಮ ಇನ್ನಷ್ಟು ವಿಶಿಷ್ಟತೆಗಳಿಂದ ಕೂಡಿರಲಿದ್ದು, ಉಚಿತ ರಕ್ತ ಪರೀಕ್ಷೆ, ಕಣ್ಣು ತಪಾಸಣೆ, ಚಿಕಿತ್ಸಾ ಶಿಬಿರ, ಎತ್ತುಗಳ ಭಾರ ಎಳೆಯುವ ಸ್ಪರ್ಧೆ, ಟಗರು ಕಾಳಗ, ಚಲನಚಿತ್ರ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ಇರಲಿವೆ.
ಇನ್ನೂ ಬುಡಕಟ್ಟು ಸಂಸ್ಕೃತಿಯನ್ನು ಜನತೆಗೆ ಪರಿಚಯ ಮಾಡುವ ಅನೇಕ ಕಾರ್ಯಕ್ರಮಗಳು ಸಹ ಇರಲಿವೆ ಎಂದು ಮಾಜಿ ಸಚಿವ ಹೆಚ್ಎಂ ರೇವಣ್ಣ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ರು.
ಇದನ್ನೂ ಓದಿ:ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಮೊದಲ ಭಾರತೀಯ ನಟಿ ಶಿಲ್ಪಾ.. ಹೇಳಿದ್ದೇನು!?