ETV Bharat / state

ಬಿಇಎಲ್ ನೊಂದಿಗೆ 2,400 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಹೆಚ್ಎಎಲ್ ಸಹಿ

ಮೇಕ್ ಇಂಡಿಯಾ ಯೋಜನೆಯಡಿ ತೇಜಸ್ ಲಘು ಯುದ್ಧ ವಿಮಾನಕ್ಕಾಗಿ 20 ವಿವಿಧ ಪ್ರಕಾರದ ಸಿಸ್ಟಮ್ ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೊಂದಿಗೆ ಇಂದು ಒಪ್ಪಂದಕ್ಕೆ ಸಹಿ ಹಾಕಿವೆ.

HAL signs  2400 crore deal with Bharat electronics largest order made with indian company
ಬಿಇಎಲ್ ನೊಂದಿಗೆ 2,400 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಹೆಚ್ಎಎಲ್ ಸಹಿ
author img

By

Published : Dec 16, 2021, 7:01 PM IST

ಬೆಂಗಳೂರು: ದೇಸಿ ರಕ್ಷಣಾ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಲ್​​ಸಿಎ ತೇಜಸ್ ಎಂಕೆ1ಎ ಕಾರ್ಯಕ್ರಮಕ್ಕೆ 20 ವಿವಿಧ ಸಿಸ್ಟಮ್‌ಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೊಂದಿಗೆ ಹೆಚ್ಎಎಲ್ ಒಪ್ಪಂದಕ್ಕೆ ಸಹಿ ಹಾಕಿದೆ.

2023 ರಿಂದ 2028 ರವರೆಗಿನ ಐದು ವರ್ಷಗಳ ಒಪ್ಪಂದವು 2,400 ಕೋಟಿ ರೂ. ಮೌಲ್ಯದಾಗಿದ್ದು. ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯುನಿಟ್‌ಗಳು, ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು ಮತ್ತು ನೈಟ್ ವಿಷನ್ ಉತ್ಪನ್ನಗಳನ್ನು ಪೂರೈಸಲು ಒಡಂಬಡಿಕೆ ಮಾಡಿಕೊಂಡಿವೆ. ಆತ್ಮ ನಿರ್ಭರ್ ಭಾರತ್ ಅಭಿಯಾನವನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಕಂಪನಿ ಜೊತೆಗೆ ಎಚ್‌ಎಎಲ್ ಕೈಗೊಂಡ ಅತಿ ದೊಡ್ಡ ಒಡಂಬಡಿಕೆ ಇದಾಗಿದೆ.

ಎಲ್‌ಸಿಎ ತೇಜಸ್ ಕಾರ್ಯಕ್ರಮ ಭಾರತೀಯ ರಕ್ಷಣಾ ಸಂಸ್ಥೆಗಳಾದ ಎಚ್‌ಎಎಲ್, ಡಿಆರ್‌ಡಿಒ ಮತ್ತು ಬಿಇಎಲ್ ಸಮನ್ವಯದಲ್ಲಿ ನಡೆಯುತ್ತಿರುವ ಅತ್ಯುತ್ತಮ ಕೆಲಸದ ಉದಾಹರಣೆಯಾಗಿದೆ. ತೇಜಸ್ ಎಂಕೆ1ಎ ಗಾಗಿ 20 ವಿಧದ ನಿರ್ಣಾಯಕ ಏವಿಯಾನಿಕ್ಸ್ ಉತ್ಪನ್ನಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಪ್ರಸ್ತುತ ಒಡಂಬಡಿಕೆ ಮೇಕ್ ಇನ್ ಇಂಡಿಯಾ ಚಟುವಟಿಕೆಗಾಗಿ ಉತ್ತೇಜನ ನೀಡುವುದಾಗಿದೆ ಎಂದಿದೆ.

ಪ್ರತಿಷ್ಠಿತ ಎಲ್​​​ಸಿಎ ತೇಜಸ್ ಕಾರ್ಯಕ್ರಮಕ್ಕಾಗಿ ಹೆಚ್​​ಎಎಲ್​​​ನಿಂದ ಆರ್ಡರ್ ಸ್ವೀಕರಿಸಲು ನಾವು ಸಂತೋಷಪಡುತ್ತೇವೆ. ಹೆಚ್​​ಎಎಲ್​​​ನೊಂದಿಗೆ ಬಲವಾದ ಪಾಲುದಾರಿಕೆ ಮತ್ತು ಜಂಟಿ ಕಾರ್ಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ ಎಂದು ಬಿಇಎಲ್ ಮುಖ್ಯಸ್ಥ ಆನಂದಿ ರಾಮಲಿಂಗಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

83 ತೇಜಸ್ ಎಂಕೆ1ಎ ಫೈಟರ್ ಜೆಟ್ ಗಳ ಪೂರೈಕೆ ಮಾಡಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಎರಡು ವಿಭಾಗಗಳಾದ ಬೆಂಗಳೂರು ಮತ್ತು ಪಂಚಕುಲ (ಹರಿಯಾಣ) ನಲ್ಲಿ ಕಾರ್ಯಗತಗೊಳಿಸುತ್ತವೆ. ಎಲ್ಲ ಒಪ್ಪಂದದ ವಸ್ತುಗಳನ್ನು ಬಿಇಎಲ್ ನಿಂದ ಹೆಚ್ಎಎಲ್ ಅತಿ ಶೀಘ್ರದಲ್ಲಿ ಪೂರೈಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

83 ತೇಜಸ್ ಎಂಕೆ1ಎ ಅಡಿ ಭಾರತ ವಾಯುಸೇನ ಗೆ ಪೂರೈಕೆ 2023 ಅಥವಾ 24 ರಿಂದ ಪ್ರಾರಂಭವಾಗುತ್ತವೆ. ಸ್ವದೇಶದಲ್ಲಿ ಮಾರ್ಪಾಡಾದ ಯುದ್ಧ ವಿಮಾನವು ಸ್ವದೇಶಿ ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು, ಏರ್ ಡೇಟಾ ಕಂಪ್ಯೂಟರ್‌ಗಳನ್ನು ಹೊಂದಿದ್ದು, ಈ ಒಪ್ಪಂದದ ಅಡಿ ಬಿಇಎಲ್​​​​ನಿಂದ ಸರಬರಾಜು ಮಾಡಲಾಗುವುದು. ಈ ವ್ಯವಸ್ಥೆಗಳನ್ನು ಡಿಆರ್‌ಡಿಒ ಮತ್ತು ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿವಿಧ ಲ್ಯಾಬ್‌ಗಳು ವಿನ್ಯಾಸಗೊಳಿಸಿದ್ದು, ಅಭಿವೃದ್ಧಿಪಡಿಸಲಿವೆ ಎಂದು ಸಂಸ್ಥೆಗಳು ಹೇಳಿವೆ.

ತೇಜಸ್ ಡಿವಿಷನ್ ಜನರಲ್ ಮ್ಯಾನೇಜರ್ ಇ ಪಿ ಜಯದೇವ್​​ ಒಡಂಬಡಿಗೆ ಪತ್ರವನ್ನು ಬಿಇಎಲ್ ಜನರಲ್ ಮ್ಯಾನೇಜರ್ ಮನೋಜ್ ಜೈನ್​ಗೆ ಹಸ್ತಾಂತರಿಸಿದರು.

ಇದನ್ನೂ ಓದಿ: ಲಖೀಂಪುರ ಖೇರಿ ಪ್ರಕರಣ; ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪ್ರತಿಭಟನೆ: ಸಚಿವ ಟೆನಿ ರಾಜೀನಾಮೆಗೆ ಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.