ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿರುವ ಬೆನ್ನಲ್ಲೆ ಸಚಿವ ಬಂಡೆಪ್ಪ ಕಾಶೆಂಪೂರ್ ಮಾರಮ್ಮ ಜಾತ್ರೆಯಲ್ಲಿ ಬಾಡೂಟ ಸವಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ರೆಸಾರ್ಟ್ನಲ್ಲಿ ಇರುವ ಜೆಡಿಎಸ್ ಶಾಸಕರು ಬಾಡೂಟ ಸವಿದಿದ್ದು, ಆಹ್ವಾನದ ಮೇರೆಗೆ ಆಗಮಿಸಿರುವುದಾಗಿ ಕಾಶೆಂಪೂರ್ ಹೇಳಿದ್ರು.
ಕೋಡಗೂರ್ಕಿ ಗ್ರಾಮದಲ್ಲಿ ಮಾರಮ್ಮ ಜಾತ್ರಾ ಮಹೊತ್ಸವದಲ್ಲಿಪಾಲ್ಗೊಳ್ಳುವಂತೆ ಇಲ್ಲಿನ ಎಪಿಎಂಸಿ ಅಧ್ಯಕ್ಷ ಮಂಜುನಾಥ್ ಆಹ್ವಾನ ನೀಡಿದ್ದರು. ಇದರ ಸಲುವಾಗಿ ನಾವು ಮಾರಮ್ಮ ದೇವಿಯ ಆಶೀರ್ವಾದ ಹಾಗು ಬಾಡೂಟ ಸವಿಯಲು ಬಂದಿರುವುದಾಗಿ ಸಚಿವರು ಹೇಳಿದ್ರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಹಲವು ಶಾಸಕರು ಬಾಡೂಟ ಸವಿದಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.